
ನವದೆಹಲಿ (ಆ.12) ಪಹೆಲ್ಗಾಂ ದಾಳಿ ಬಳಿಕ ಭಾರತದ ಪ್ರತಿ ದಾಳಿ, ತೆಗೆದುಕೊಂಡ ನಿರ್ಣಯಗಳು ಪಾಕಿಸ್ತಾನದ ನಿದ್ದೆ ಹಾಳು ಮಾಡಿದೆ. ದಾಳಿಯಿಂದ ಹಾನಿಗೊಳಗಾದ ಪ್ರದೇಶ ಸರಿಪಡಿಸುವುದೇ ಪಾಕಿಸ್ತಾನಕ್ಕೆ ಸವಾಲಾಗಿದೆ. ಇತ್ತ ಸಿಂಧೂ ನದಿ ಒಪ್ಪಂದ ರದ್ದು ಮಾಡಿರುವುದು ಪಾಕಿಸ್ತಾನಿಯರ ಜೀವವನ್ನೇ ಮತ್ತಷ್ಟು ದುಸ್ತರ ಮಾಡಿದೆ. ಇತ್ತ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಬೆನ್ನಲ್ಲೇ ಭಾರತದ ವಿರುದ್ಧ ಬೆದರಿಕೆ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ನಿಂತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರತದ ಮೇಲೆ ಪರಮಾಣು ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಮುನೀರ್ ಮಾತಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಈ ಪರಮಾಣು ಗೊಡ್ಡು ಬೆದರಿಕೆಗೆ ಭಾರತ ಜಗ್ಗುವುದಿಲ್ಲ ಎಂದಿದೆ. ಇದೇ ವೇಳೆ ಅಸೀಮ್ ಮುನೀರ್, ಮುಕೇಶ್ ಅಂಬಾನಿಯ ಇಂಧನ ರಿಫೈನರಿ ಘಟಕದ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿರುವುದಾಗಿ ವರದಿಯಾಗಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ ಮುಕೇಶ್ ಅಂಬಾನಿ ಮಾಲೀಕತ್ವದ ಅತೀ ದೊಡ್ಡ ಆಯಿಲ್ ರಿಫೈನರಿ ಘಟಕವಿದೆ. ಇದು ಕರಾವಳಿ ತೀರ ಪ್ರದೇಶದಲ್ಲಿದೆ. ಈ ರಿಫೈನರಿ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಮುಂದೆ ಗಡಿಯಲ್ಲಿ ಕಿರಿಕ್ ಮಾಡಿದರೆ ಪಾಕಸ್ತಾನ ಭಾರತದ ಮೇಲೆ ನೇರ ದಾಳಿ ಮಾಡಲಿದೆ. ಭಾರತದ ಪೂರ್ವದಿಂದ ದಾಳಿ ಆರಂಭಿಸುತ್ತೇವೆ. ಇಲ್ಲಿ ಭಾರತದ ಅತ್ಯಂತ ಬೆಲೆ ಬಾಳುವ ಸಂಪನ್ಮೂಲವಿದೆ ಎಂದು ಅಸೀಮ್ ಮನೀರ್ ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ. ಭಾರತದ ಪೂರ್ವದಲ್ಲಿರುವ ಅತ್ಯಂತ ಮಹತ್ವಜ ಸಂಪನ್ಮೂಲ ಎಂದರೆ ಅದು ಮುಕೇಶ್ ಅಂಬಾನಿಯ ಜಾಮ್‌ನಗರ ರಿಫೈನರಿ ಘಟಕ.
ಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾರತದ ಆರ್ಥಿಕ ಸಂಪನ್ಮೂಲದ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದೆ. ಭಾರತದ ಹಾಗೂ ಅಮೆರಿಕ ಸಂಬಂಧ ಹಳಸಿದೆ. ಇಷ್ಟೇ ಅಲ್ಲ ಭಾರತದ ಮೇಲೆ ಹಿಡಿತ ಸಾಧಿಸುವ, ಭಾರತದ ಆರ್ಥಿಕತೆಯನ್ನು ಸಂಕುಚಿತಗೊಳಿಸುವ ಅಮೆರಿಕ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಪಾಕಿಸ್ತಾನವನ್ನು ದಾಳವಾಗಿ ಬಳಸಿಕೊಳ್ಳಲು ಅಮೆರಿಕ ಮುಂದಾಗಿತ್ತು. ಇತ್ತ ಭೀಕ್ಷೆ ಬೇಡುತ್ತಿರುವ ಪಾಕಿಸ್ತಾನಕ್ಕೆ ಯಾರಾದರೂ ಕೈಹಿಡಿದರೆ ಸಾಕು ಅನ್ನೋ ಪರಿಸ್ಥಿತಿ ಎದುರಾಗಿದೆ. ಇದರಂತೆ ಡೋನಾಲ್ಡ್ ಟ್ರಂಪ್ ಪಾಕಿಸ್ತಾನದ ಜೊತೆ ಇಂಧನ ಒಪ್ಪಂದ ಸೇರಿದಂತೆ ಹಲವು ಒಪ್ಪಂದ ಮಾಡಿಕೊಂಡಿದ್ದಾರೆ. ಇತ್ತ ಭಾರತದ ವಿರುದ್ಧ ದುಬಾರಿ ತೆರಿಗೆ ವಿಧಿಸಿದ್ದಾರೆ.
ಅಮೆರಿಕ ಬೆಂಬಲ ಪಡೆದಿರುವ ಪಾಕಿಸ್ತಾನ ಇದೀಗ ಸತತವಾಗಿ ಭಾರತದ ವಿರುದ್ಧ ಎಚ್ಚರಿಕೆ ಮಾತುಗಳನ್ನಾಡುತ್ತಿದೆ. ಇಷ್ಟೇ ಅಲ್ಲ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ