
ನವದೆಹಲಿ (ಜ.25) ದೇಶದ ಪ್ರತಿಷ್ಠಿತ ಹಾಗೂ ಅತ್ಯುನ್ನತ ಪ್ರಶಸ್ತಿಗಳಾದ 2025ರ ಸಾಲಿನ ಸಾಧಕರಿಗೆ ಪದ್ಮಭೂಷಣ, ಪದ್ಮ ವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡಿದೆ. ಐವರು ಸಾಧಕರಿಗೆ ಪದ್ಮ ವಿಭೂಷಣ ಹಾಗೂ 13 ಸಾಧಕರಿಗೆ ಪದ್ಮ ಭೂಷಣ ಪ್ರಶಸ್ತಿ ಗೌರವ ಸಿಕ್ಕಿದೆ. ವಿಶೇಷ ಅಂದರೆ ಅವಧಾನ ಸಾಧಕರು, ವಿದ್ವಾಂಸಕ, ಲೇಖಕ ಕರ್ನಾಟಕದ ವ ಶತವಧಾನಿ ಆರ್ ಗಣೇಶ್ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಪದ್ಮ ಭೂಷಣ, ಪದ್ಮಶ್ರೀ ಸೇರಿ ಒಟ್ಟು 8 ಮಂದಿ ಕರ್ನಾಟಕದ ಸಾಧಕರು ದೇಶದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ದೇಶದಲ್ಲೇ ಹಾರಾಡಿದೆ.
ಪದ್ಮ ಪ್ರಶಸ್ತಿ ವಿಜೇತ ಕರ್ನಾಟಕ ಸಾಧಕರು
ಅಲ್ಕಾ ಯಾಗ್ನಿಕ್ (ಮಹಾರಾಷ್ಟ್ರ) ಕ್ಷೇತ್ರ: ಕಲೆ (ಹಿನ್ನೆಲೆ ಗಾಯನ)
ಭಗತ್ ಸಿಂಗ್ ಕೋಶ್ಯಾರಿ (ಉತ್ತರಾಖಂಡ)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು
ಕಲ್ಲಿಪಟ್ಟಿ ರಾಮಸಾಮಿ ಪಳನಿಸ್ವಾಮಿ (ತಮಿಳುನಾಡು)ಕ್ಷೇತ್ರ: ವೈದ್ಯಕೀಯ
ಮಮ್ಮುಟ್ಟಿ (ಕೇರಳ)ಕ್ಷೇತ್ರ: ಕಲೆ (ಸಿನಿಮಾ)
ಡಾ. ನೋರಿ ದತ್ತಾತ್ರೇಯಡು (ಅಮೆರಿಕ/ತೆಲಂಗಾಣ)ಕ್ಷೇತ್ರ: ವೈದ್ಯಕೀಯ (ಆಂಕೊಲಾಜಿ)
ಪಿಯೂಷ್ ಪಾಂಡೆ (ಮಹಾರಾಷ್ಟ್ರ)ಕ್ಷೇತ್ರ: ಕಲೆ (ಜಾಹೀರಾತು ಮತ್ತು ಸಂವಹನ) (ಮರಣೋತ್ತರ)
ಎಸ್. ಕೆ. ಎಂ. ಮೈಲಾನಂದನ್ (ತಮಿಳುನಾಡು)ಕ್ಷೇತ್ರ: ಸಮಾಜ ಸೇವೆ
ಶತಾವಧಾನಿ ಆರ್. ಗಣೇಶ್ (ಕರ್ನಾಟಕ)ಕ್ಷೇತ್ರ: ಕಲೆ (ಸಾಹಿತ್ಯ/ಅವಧಾನ ಕಲೆ)
ಶಿಬು ಸೊರೇನ್ (ಜಾರ್ಖಂಡ್)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ಮರಣೋತ್ತರ)
ಉದಯ್ ಕೋಟಕ್ (ಮಹಾರಾಷ್ಟ್ರ)ಕ್ಷೇತ್ರ: ವ್ಯಾಪಾರ ಮತ್ತು ಕೈಗಾರಿಕೆ (ಬ್ಯಾಂಕಿಂಗ್)
ವಿ. ಕೆ. ಮಲ್ಹೋತ್ರಾ (ದೆಹಲಿ)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ಮರಣೋತ್ತರ)
ವೆಳ್ಳಪ್ಪಳ್ಳಿ ನಟೇಶನ್ (ಕೇರಳ)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು
ವಿಜಯ್ ಅಮೃತರಾಜ್ (ತಮಿಳುನಾಡು)ಕ್ಷೇತ್ರ: ಕ್ರೀಡೆ (ಟೆನ್ನಿಸ್)
ಪದ್ಮಶ್ರೀ ಪ್ರಶಸ್ತಿ
ಈ ಬಾರಿ ಕರ್ನಾಟಕ ಮೂವರು ಸೈಲೆಂಟ್ ಸಾಧಕರು ಸೇರಿದಂತೆ ಒಟ್ಟು 45 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡಿದೆ. ಈ ಪೈಕಿ ಪುಸ್ತಕ ಪ್ರೇಮಿ, 10ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹದ ಗ್ರಾಮೀಣ ಗ್ರಂಥಾಲಯ ಆರಂಭಿಸಿದ ಅಂಕೆಗೌಡ, ದಾವಣೆಗೆರೆಯಲ್ಲಿ ವೈದ್ಯ ಸೇವೆ ಮಾಡುತ್ತಾ ಜನರಿಗೆ ನೆರವಾಗಿರುವ ಸುರೇಶ್ ಹನಗವಾಡಿ ಹಾಗೂ ಬೆಂಗಳೂರಿನ ಸಮಾಜ ಸೇವಕಿ ಎಸ್ ಜಿ ಸುಶೀಲಮ್ಮಗೆ ಪದ್ಮಶ್ರೀ ಪ್ರಶಸ್ತಿ ಗೌರವ ಲಭವಿಸಿದೆ. ಇವರ ಜೊತೆಗೆ ದೇಶದ 45 ಪ್ರಮುಖ ಸಾಧಕರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ