ಕಾಶ್ಮೀರದಲ್ಲಿ ಮತ್ತೆ 370 ಜಾರಿ ಹೋರಾಟಕ್ಕೆ ಚಿದಂಬರಂ ಬೆಂಬಲ!

By Suvarna NewsFirst Published Aug 24, 2020, 10:16 AM IST
Highlights

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ | ಕಾಶ್ಮೀರದಲ್ಲಿ ಮತ್ತೆ 370 ಜಾರಿ ಹೋರಾಟಕ್ಕೆ ಚಿದಂಬರಂ ಬೆಂಬಲ| 

ನವದೆಹಲಿ(ಆ.24): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದನ್ನು ಇಡೀ ದೇಶ ಸ್ವಾಗತಿಸಿದ್ದರೆ, ರಾಜ್ಯದಲ್ಲಿ ಮತ್ತೆ 370ನೇ ವಿಧಿ ಸ್ಥಾಪಿಸಬೇಕೆಂಬ ಹೋರಾಟಕ್ಕೆ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಮಮಂದಿರ ಹೋರಾಟಗಾರರ ಹತ್ಯೆಗೆ ಸಂಚು!

ರಾಜ್ಯದಲ್ಲಿ 370ನೇ ವಿಧಿ ಮರುಸ್ಥಾಪನೆ ಮಾಡಬೇಕು. ಸಂವಿಧಾನದಕ್ಕೆ ಯಾವುದೇ ಬದಲಾವಣೆ ಮಾಡುವ ಮುನ್ನ ಸ್ಥಳೀಯ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಆಗ್ರಹಿಸಿ ಜಮ್ಮು ಮತ್ತು ಕಾಶ್ಮೀರದ 6 ರಾಜಕೀಯ ಪಕ್ಷಗಳು ಶನಿವಾರ ಗೊತ್ತುವಳಿಯೊಂದನ್ನು ಅಂಗೀಕರಿಸಿದ್ದವು.

ಕಾಶ್ಮೀರದಿಂದ 10000 ಯೋಧರ ಹಿಂಪಡೆಯಲು ಕೇಂದ್ರ ಸರ್ಕಾರ ಆದೇಶ

ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿರುವ ಚಿದಂಬರಂ, ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದರ ವಿರುದ್ಧ ನಿನ್ನೆ ನೀವು ತೋರಿದ ಏಕತೆ ಮತ್ತು ಧೈರ್ಯಕ್ಕೆ ನನ್ನದೊಂದು ನಮಸ್ಕಾರ. ಈ ಹೋರಾಟದಲ್ಲಿ ನೀವು ಎದೆಗುಂದದೆ ದೃಢನಿಶ್ಚಯ ಹೊಂದಿರಿ. ಈ ವಿಷಯದಲ್ಲಿ ಇತಿಹಾಸವನ್ನು ಅಧ್ಯಯನ ಮಾಡದೇ ತಮ್ಮದೇ ಆದ ಹೊಸ ಇತಿಹಾಸ ಬರೆಯಲು ಹೊರಟಿರುವ ಸ್ವಯಂ ಘೋಷಿತ ರಾಷ್ಟ್ರೀಯವಾದಿಗಳ ಟೀಕೆಯನ್ನು ಲೆಕ್ಕಿಸಬೇಡಿ ಎಂದು ಕರೆಕೊಟ್ಟಿದ್ದಾರೆ.

click me!