'ಆಕ್ಸಿಜನ್, ಬೆಡ್ ಕೊರತೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ'

By Suvarna NewsFirst Published Apr 23, 2021, 3:43 PM IST
Highlights

ಕೊರೋನಾ ಆವರಿಸುತ್ತಲೇ ಇದೆ/ ದೇಶದಲ್ಲಿ ಎರಡನೇ ಅಲೆ ಆರ್ಭಟ/ ಆಕ್ಸಿಜನ್ ಕೊರತೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದ ರಾಹುಲ್ ಗಾಂಧಿ/ ಐಸಿಯು ಬೆಡ್ ಕೊರತೆ ಇದ್ದರೂ ಏನು ಮಾಡುತ್ತಿದ್ದರು?

ನವದೆಹಲಿ(ಏ. 23)  ಒಂದು ಕಡೆ ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಆಕ್ಸಿಜನ್ ಮತ್ತು ಬೆಡ್ ಕೊರತೆ ಇದೆ ಎಂಬ ವರದಗಿಳು ಬರುತ್ತಿವೆ.

ಕೊರೋನಾ ಸೋಂಕು ಏರಿಕೆ, ಆಕ್ಸಿಜನ್ ಮತ್ತು ಬೆಡ್ ಕೊರತೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮೊದಲೇ ಎಚ್ಚರಿಕೆ ನೀಡಿದ್ದರೂ ಸರ್ಕಾರ ತಿರಸ್ಕಾರ ಮಾಡಿತ್ತು

ಆಮ್ಲಜನಕ ಕೊರತೆಯಿಂದ ಹಲವಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ. ಐಸಿಯು ಬೆಡ್ ಲಭ್ಯತೆಯ ವಿಚಾರದಲ್ಲಿಯೂ ಕೇಂದ್ರ ಸರ್ಕಾರ ನಿರ್ಲಕ್ಞ್ಯ ತಾಳಿದೆ ಎಂದು ಆರೋಪಿಸಿದ್ದಾರೆ.

ಭಾರತದಲ್ಲಿ ಒಂದೇ ದಿನ 3,32,730 ಹೊಸ ಕೊರೋನಾ ಸೋಂಕಿನ ಪ್ರಕರಣ ದಾಖಲಾಗಿದೆ. ಪ್ರಪಂಚದ ಲೆಕ್ಕದಲ್ಲಿ ಕೊರೋನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತಕ್ಕೆ ಎರಡನೇ ಸ್ಥಾನ .

 

Corona can cause a fall in oxygen level but it’s & lack of ICU beds which is causing many deaths.

GOI, this is on you.

— Rahul Gandhi (@RahulGandhi)
click me!