ಬರೋಬ್ಬರಿ 5000ಕ್ಕೂ ಹೆಚ್ಚು ಅಮೇರಿಕನ್ ಡೈಮಂಡ್ ಬಳಸಿದ ರಾಮಮಂದಿರ ಥೀಮ್‌ನ ವಜ್ರದ ಹಾರ ಸಿದ್ಧ

Published : Dec 19, 2023, 11:20 AM ISTUpdated : Dec 19, 2023, 11:28 AM IST
ಬರೋಬ್ಬರಿ 5000ಕ್ಕೂ ಹೆಚ್ಚು ಅಮೇರಿಕನ್ ಡೈಮಂಡ್ ಬಳಸಿದ ರಾಮಮಂದಿರ ಥೀಮ್‌ನ ವಜ್ರದ ಹಾರ ಸಿದ್ಧ

ಸಾರಾಂಶ

ಅಯೋಧ್ಯ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ಅಂತಿಮ ಹಂತದ ಕಾಮಗಾರಿಗಳು ಭರದಿಂದ ಸಾಗಿವೆ.ಈ ಮಧ್ಯೆ ವಜ್ರದ ವ್ಯಾಪಾರಿಯೊಬ್ಬರು ಅಮೇರಿಕನ್ ವಜ್ರಗಳನ್ನು ಬಳಸಿ ಮಾಡಿರೋ ರಾಮಮಂದಿರದ ಥೀಮ್‌ ಹಾರ ಎಲ್ಲರ ಗಮನ ಸೆಳೀತಿದೆ.

ಅಯೋಧ್ಯ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ಅಂತಿಮ ಹಂತದ ಕಾಮಗಾರಿಗಳು ಭರದಿಂದ ಸಾಗಿವೆ. ಉದ್ಘಾಟನಾ ಕಾರ್ಯಕ್ರಮಕ್ಕೆ  ಆಯೋಧ್ಯೆ ಸಂಪೂರ್ಣ ಅಲಂಕಾರಗೊಂಡಿದೆ. ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ದೇಶಾದ್ಯಂತ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಇವೆಲ್ಲದರ ಮಧ್ಯೆ ತ್ಯುತ್ತಮ ಕರಕುಶಲತೆಯ ಪ್ರದರ್ಶನದಲ್ಲಿ, ವಜ್ರದ ವ್ಯಾಪಾರಿಯೊಬ್ಬರು 5000ಕ್ಕೂ ಹೆಚ್ಚು ಅಮೇರಿಕನ್ ವಜ್ರಗಳನ್ನು ಬಳಸಿ ರಾಮಮಂದಿರದ ಥೀಮ್‌ನಲ್ಲಿ ಹಾರವನ್ನು ಮಾಡಿರುವುದು ಎಲ್ಲರ ಗಮನ ಸೆಳೀತಿದೆ.

ಸೂರತ್ ಮೂಲದ ವಜ್ರದ ವ್ಯಾಪಾರಿಯೊಬ್ಬರು  ರಾಮಮಂದಿರದ ಥೀಮ್‌ನಲ್ಲಿ ಹಾರವನ್ನು ಸಿದ್ಧಪಡಿಸಿದ್ದಾರೆ. ಅದನ್ನು ಅಯೋಧ್ಯೆಯ ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ. ರಸೇಶ್ ಜ್ಯುವೆಲ್ಸ್‌ನ ನಿರ್ದೇಶಕ ಕೌಶಿಕ್ ಕಾಕಡಿಯಾ ಮಾತನಾಡಿ, '5000 ಕ್ಕೂ ಹೆಚ್ಚು ಅಮೇರಿಕನ್ ವಜ್ರಗಳನ್ನು ಈ ಹಾರವನ್ನು ತಯಾರಿಸಲು ಬಳಸಲಾಗಿದೆ. ಇದನ್ನು 2 ಕೆಜಿ ಬೆಳ್ಳಿಯಿಂದ ಮಾಡಲಾಗಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಿಂದ ನಾವು ಸ್ಫೂರ್ತಿ ಪಡೆದು ಇದನ್ನು ತಯಾರಿಸಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ.

Ayodhya Ground Report: ರಾಮಲಲ್ಲಾನ ಸಾರ್ವಜನಿಕ ದರ್ಶನ ಯಾವಾಗ ಆರಂಭ? ಇಲ್ಲಿದೆ ಡೀಟೇಲ್ಸ್‌

ಮಾತ್ರವಲ್ಲ, 'ಇದು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಸಿದ್ಧಪಡಿಸಿರುವ ಹಾರ ಅಲ್ಲ, ನಾವು ಇದನ್ನು ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ರಾಮ ಮಂದಿರಕ್ಕೆ ಏನನ್ನಾದರೂ ಉಡುಗೊರೆಯಾಗಿ ನೀಡಬೇಕೆಂಬ ಉದ್ದೇಶದಿಂದ ನಾವು ಈ ಅಪರೂಪದ ಹಾರವನ್ನು ಮಾಡಿದ್ದೇವೆ' ಎಂದು ತಿಳಿಸಿದ್ದಾರೆ,

ರಾಮಾಯಣದ ಪ್ರಮುಖ ಪಾತ್ರಗಳನ್ನು ಹಾರದ ದಾರದಲ್ಲಿ ಕೆತ್ತಲಾಗಿದೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ (ಶಿಶು ಭಗವಾನ್ ರಾಮ) ಅವರ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದ ವೈದಿಕ ಆಚರಣೆಗಳು ಮುಂದಿನ ವರ್ಷ ಜನವರಿ 16ರಂದು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಪ್ರಾರಂಭವಾಗುತ್ತವೆ. ವಾರಣಾಸಿಯ ವೈದಿಕ ಪುರೋಹಿತರಾದ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಜನವರಿ 22ರಂದು ರಾಮ್ ಲಲ್ಲಾನ ಮಹಾಮಸ್ತಕಾಭಿಷೇಕದ ಮುಖ್ಯ ವಿಧಿಗಳನ್ನು ನಿರ್ವಹಿಸಲಿದ್ದಾರೆ. ಜನವರಿ 14 ರಿಂದ ಜನವರಿ 22ರ ವರೆಗೆ ಅಯೋಧ್ಯೆಯು ಅಮೃತ ಮಹೋತ್ಸವ ನಡೆಯಲಿದೆ.

ಅಯೋಧ್ಯೆ ಹೋರಾಟ ಕುರಿತ ಚಿತ್ರ ‘695’ ಜನವರಿ 19 ರಂದು ತೆರೆಗೆ: ರಾಮಾಯಣ ಖ್ಯಾತಿಯ ಅರುಣ್‌ ಗೋವಿಲ್‌ ನಟನೆ

1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಯೋಧ್ಯೆಯಲ್ಲಿ ಸಾವಿರಾರು ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ಹಲವಾರು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪ್ರಕಾರ, 10,000-15,000 ಜನರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿದುಬಂದಿದೆ. 

ಆಗಸ್ಟ್ 5, 2020 ರಂದು, ಪ್ರಧಾನಿ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ರಾಮ ಮಂದಿರದ ಸಮೀಪವಿರುವ 70 ಎಕರೆ ಪ್ರದೇಶದಲ್ಲಿ ವಾಲ್ಮೀಕಿ, ಕೇವತ್, ಶಬರಿ, ಜಟಾಯು, ಸೀತಾ, ಗಣೇಶ ಮತ್ತು ಶೇಷಾವತಾರ (ಲಕ್ಷ್ಮಣ) ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ
ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!