ದೇಶದಲ್ಲಿ ಕೊರೋನಾ ಲೆಕ್ಕಚಾರ: ಕರ್ನಾಟಕ 4ನೇ ಸ್ಥಾನ

Published : Jul 25, 2020, 05:20 PM ISTUpdated : Jul 25, 2020, 05:52 PM IST
ದೇಶದಲ್ಲಿ ಕೊರೋನಾ ಲೆಕ್ಕಚಾರ: ಕರ್ನಾಟಕ 4ನೇ ಸ್ಥಾನ

ಸಾರಾಂಶ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಎಷ್ಟು ಕೊರೋನಾ ಕೇಸ್ ಪತ್ತೆ..? ಎಷ್ಟು ಗುಣಮುಖ..? ಎಷ್ಟು ಸಾವು..? ಎನ್ನುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳು ಈ ಕೆಳಗಿನಂತಿವೆ.

ನವದೆಹಲಿ, (ಜುಲೈ.25): ದೇಶದಲ್ಲಿ ಕೋವಿಡ್​ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ48,916 ಹೊಸ ಕೇಸ್​ಗಳು ಪತ್ತೆಯಾಗಿವೆ.  ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 13,36,861ಕ್ಕೆ ಏರಿಕೆಯಾಗಿದೆ. ಇದ್ರಲ್ಲಿ 8,49,432 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಪ್ರಸ್ತುತ  4,56,071 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

"

ಮತ್ತೊಂದು ವೈರಸ್‌ ಹರಡಲು ಚೀನಾ ನಿರ್ಧಾರ, ದುಬಾರಿಯಾಯ್ತು ಬಂಗಾರ; ಜು.25ರ ಟಾಪ್ 10 ಸುದ್ದಿ!

ಇನ್ನು 24 ತಾಸುಗಳಲ್ಲಿ  757 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 31,358ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ ಕಾರಣಕ್ಕೆ 4,20,898 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ನಿನ್ನೆ  (ಶುಕ್ರವಾರ) ಒಂದೇ ದಿನ ದೇಶಾದ್ಯಂತ 4,20,898 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಜು.24 ರವರೆಗೂ 1,58,49,068 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ.

ರಾಜ್ಯವಾರ ಅಂಕಿ-ಅಂಶಗಳನ್ನ ನೋಡುವುದಾದ್ರೆ ಮಹಾರಾಷ್ಟ್ರ 3,57,117 ಕೇಸ್‌ದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು 1,99,749 ಪ್ರಕರಣಗೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು ದೆಹಲಿ ಮೂರು ಮತ್ತು ಕರ್ನಾಟಕದಲ್ಲಿ ಒಟ್ಟು 85,870 ಕೊರೋನಾ ಕೇಸ್‌ನೊಂದಿಗೆ ದೇಶದಲ್ಲಿ  4ನೇ ಸ್ಥಾನದಲ್ಲಿ. ಎಲ್ಲಾ ರಾಜ್ಯಗಳ ಮಾಹಿತಿಗಾಗಿ ಈ ಕೆಳಗಿನ ಚಾರ್ಟ್‌ನಲ್ಲಿದೆ ನೋಡಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌