
ನವದೆಹಲಿ(ಫೆ.20): ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ‘ಉಗ್ರನೆಂದು ಯಾರನ್ನು ಕರೆಯುತ್ತೀರೋ ಅವನೇ ಬಾಬಾ ಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್‌ರ ಕನಸನ್ನು ಈಡೇರಿಸಲು ಬಡವರ ಹಾಗೂ ಶ್ರೀಮಂತರ ಮಕ್ಕಳು ಒಟ್ಟಿಗೆ ಸೇರಿ ಶಿಕ್ಷಣ ಪಡೆಯುವಂತ 12,430 ಸ್ಮಾರ್ಟ್ ಕ್ಲಾಸ್‌ಗಳನ್ನು ತೆರೆದಿದ್ದಾನೆ’ ಎಂದು ವ್ಯಂಗ್ಯವಾಡಿದ್ದಾರೆ.
ಕೇಜ್ರಿ ಮೇಲೆ ಸಿಖ್ ಪ್ರತ್ಯೇಕವಾದಿಗಳಿಗೆ ಬೆಂಬಲಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನನ್ನ ವಿರೋಧಿಗಳು ಭ್ರಷ್ಟರು. ದೇಶವೂ ಇಂದಿಗೂ ಇವರೆದುರು ತಲೆ ಬಾಗುವುದಿಲ್ಲ. ಅಂಬೇಡ್ಕರ್, ಭಗತ್ ಸಿಂಗ್ ಕನಸುಗಳನ್ನು ಈಡೇರಿಸಲು ಬದ್ಧವಾಗಿರುವ ಆಪ್ ಸರ್ಕಾರ ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಇತರ ರಾಜ್ಯಗಳಿಗೂ ಒದಗಿಸಲಿದೆ. ಬಿಜೆಪಿ, ಕಾಂಗ್ರೆಸ್ ಅಥವಾ ಯಾವುದೇ ಪಕ್ಷದ ಆಡಳಿತವಿರುವ ರಾಜ್ಯಗಳು ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಿಸಲು ಬಯಸಿದರೆ ನಾವು ಅವರಿಗೆ ಸೇವೆಯನ್ನು ಒದಗಿಸಲಿದ್ದೇವೆ’ ಎಂದರು.
ಮಾಜಿ ಆಪ್ ನಾಯಕ ಕುಮಾರ್ ವಿಶ್ವಾಸ ಕೇಜ್ರಿವಾಲ್ ಸಿಖ್ಖ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುವ ಮೂಲಕ ಪ್ರತ್ಯೇಕ ರಾಷ್ಟ್ರದ ಮೊದಲ ಪ್ರಧಾನಿಯಾಗಬೇಕೆಂದಿದ್ದರು ಎಂದು ಹೇಳಿದ್ದರು. ಪಂಜಾಬ್ ಸಿಎಂ ಚರಣಜೀತ್ ಸಿಂಗ್ ಚನ್ನಿ ಸೇರಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಈ ಕುರಿತು ತನಿಖೆಗೆ ಆಗ್ರಹಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಇದರ ವಿರುದ್ಧ ತನಿಖೆ ನಡೆಸುವುದಾಗಿ ಆಶ್ವಾಸನೆ ನೀಡಿದ್ದರು.
ಪಂಜಾಬ್ ಸಿಎಂ ಆಗ್ತೇನೆ, ಇಲ್ಲವೇ ಸ್ವತಂತ್ರ ದೇಶದ ಪಿಎಂ ಆಗ್ತೇನೆ, ಕೇಜ್ರೀವಾಲ್ ವಿರುದ್ಧ ಕುಮಾರ್ ವಿಶ್ವಾಸ್ ಆರೋಪ!
ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭೆಗೆ ಮತದಾನ ನಡೆಯಲಿದೆ. ಚುನಾವಣೆಯ ಭರದಲ್ಲಿ ಎಲ್ಲಾ ಪಕ್ಷಗಳು ತಮ್ಮ ಶಕ್ತಿ ಮೀರಿ ಮತದಾರರನ್ನು ಓಲೈಸಲು ಯತ್ನಿಸುತ್ತಿವೆ. ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಈ ಬಾರಿ ಪಂಜಾಬ್‌ನ ಗದ್ದುಗೆಗಾಗಿ ಅದೃಷ್ಟ ಪರೀಕ್ಷೆಗಿಳಿದಿದೆ. ಇದೇ ವೇಳೆ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಹಾಗೂ ಕವಿ ಡಾ.ಕುಮಾರ್ ವಿಶ್ವಾಸ್ ಅರವಿಂದ್ ಕೇಜ್ರಿವಾಲ್ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ನಿರಂತರ ಪ್ರತ್ಯೇಕತಾವಾದದ ನೆರವಿನಿಂದ ಪಂಜಾಬ್ ಮುಖ್ಯಮಂತ್ರಿಯಾಗಲು ಆ ವ್ಯಕ್ತಿ ಬಯಸಿದ್ದರು ಎಂದು ಕೇಜ್ರಿವಾಲ್ ಹೆಸರಿಸದೆ ವಿಶ್ವಾಸ್ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ವಿಶ್ವಾಸ್, ಪಂಜಾಬ್ ಒಂದು ರಾಜ್ಯವಲ್ಲ, ಆದರೆ ಭಾವನೆ ಎಂದು ನಾನು ಯಾವಾಗಲೂ ನಂಬಿದ್ದೇನೆ ಎಂದು ಹೇಳಿದರು. ಪಂಜಾಬಿಯಾತ್ ಒಂದು ಭಾವನೆ. ಇಂತಹ ಪರಿಸ್ಥಿತಿಯಲ್ಲಿ ಇಂತಹ ವ್ಯಕ್ತಿ ಪ್ರತ್ಯೇಕತಾವಾದಿ ಸಂಘಟನೆಗಳ, ಖಲಿಸ್ತಾನಿ ಬೆಂಬಲಿಗರ ಪರ ನಿಲ್ಲುತ್ತಿದ್ದ ಎಂದು ಕಿಡಿ ಕಾರಿದ್ದಾರೆ.
ದೇಶದ ಖ್ಯಾತ ಕವಿ ಮತ್ತು ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ ಬುಧವಾರ ದೆಹಲಿ ಮುಖ್ಯಮಂತ್ರಿ ಮತ್ತು ಅವರ ಮಾಜಿ ಸಹೋದ್ಯೋಗಿ ಅರವಿಂದ್ ಕೇಜ್ರಿವಾಲ್ ಮೇಲೆ ದೊಡ್ಡ ಆರೋಪ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಪಂಜಾಬ್‌ನಲ್ಲಿ ಪ್ರತ್ಯೇಕತಾವಾದಿಗಳ ಬೆಂಬಲಿಗರಾಗಿದ್ದಾರೆ ಎಂದು ಅವರು ಹೇಳಿದರು. ಹಿಂದೊಮ್ಮೆ ಅವರು ತನ್ನ ಬಳಿ ನಾನು ಒಂದೋ ಪಂಜಾಬ್‌ನ ಮುಖ್ಯಮಂತ್ರಿಯಾಗುತ್ತೇನೆ ಅಥವಾ ಸ್ವತಂತ್ರ ರಾಷ್ಟ್ರವಾದ ಖಲಿಸ್ತಾನದ ಮೊದಲ ಪ್ರಧಾನಿಯಾಗುತ್ತೇನೆ ಎಂದು ಹೇಳಿದ್ದರು ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ.
ಪ್ರತ್ಯೇಕತಾವಾದಿಗಳ ಸಹಾಯ ಪಡೆಯಲು ಕೇಜ್ರಿವಾಲ್‌ಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ. ಪಂಜಾಬ್ ಒಂದು ರಾಜ್ಯವಲ್ಲ. ಪಂಜಾಬ್ ಒಂದು ಭಾವನೆ. ಪಂಜಾಬಿಗರು ಎಂಬುವುದು ಪ್ರಪಂಚದಾದ್ಯಂತ ಒಂದು ಭಾವನೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲಬೇಡಿ ಎಂದು ನಾನು ಒಮ್ಮೆ ಹೇಳಿದ್ದೆ. ಆಗ ಅವರು ಇಲ್ಲ-ಇಲ್ಲ ನಡೆಯುವುದಿಲ್ಲ ಎಂದು ಹೇಳಿದ್ದರು ಎಂದಿದ್ದಾರೆ.
ಈ ಸೂತ್ರವನ್ನು ಹೇಳಿದ್ದ ಕೇಜ್ರೀವಾಲ್
ಕೇಜ್ರಿವಾಲ್ ಅವರೇ ಮುಖ್ಯಮಂತ್ರಿಯಾಗುವ ಸೂತ್ರವನ್ನೂ ಹೇಳಿದ್ದರು ಎಂದು ಕಿಡಿಕಾರಿದರು. ಆಗ ಕೇಜ್ರಿವಾಲ್ ಅವರು ಭಗವಂತ್ ಮಾನ್ ಮತ್ತು ಎಚ್‌ಎಸ್ ಫೂಲ್ಕಾ ಅವರು ಜಗಳವಾಡುವಂತೆ ಮಾಡುತ್ತೇನೆ, ಬಳಿಕ ನಾನು ಅಲ್ಲಿಗೆ ತಲುಪುತ್ತೇನೆ ಎಂದು ಹೇಳಿದ್ದರು. ಇಂದಿಗೂ ಅವರು ಅದೇ ಹಾದಿಯಲ್ಲಿದ್ದಾರೆ. ನೀವು ಚಿಂತಿಸಬೇಡಿ, ಮುಂದೊಂದು ದಿನ ನಾನು ಸ್ವತಂತ್ರ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಕೇಜ್ರಿವಾಲ್ ಒಂದು ದಿನ ಹೇಳಿದ್ದರು. ನಾನು ಪ್ರತ್ಯೇಕತಾವಾದದ ಬಗ್ಗೆ ಎಚ್ಚರಿಸಿದ್ದಾಗ, ಹಾಗಾದರೆ, ನಾನು ಸ್ವತಂತ್ರ ದೇಶದ ಪ್ರಧಾನಿಯಾಗುತ್ತೇನೆ" ಎಂದು ಅವರು ಹೇಳಿದ್ದರು ಎಂದು ಆರೋಪಿಸಿದ್ದಾರೆ.
ಆಪ್‌ನಲ್ಲಿದ್ದ ಕುಮಾರ್ ವಿಶ್ವಾಸ
ಕುಮಾರ್ ವಿಶ್ವಾಸ್ ಹಿಂದಿ ಕವಿ, ಭಾಷಣಕಾರ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತ. ಅವರು ಆಮ್ ಆದ್ಮಿ ಪಕ್ಷದ ಸದಸ್ಯರೂ ಆಗಿದ್ದರು. ಅಣ್ಣಾ ಹಜಾರೆಯವರ ಚಳವಳಿಯ ಸಂದರ್ಭದಲ್ಲಿ ಕುಮಾರ್ ವಿಶ್ವಾಸ್ ಮತ್ತು ಅರವಿಂದ್ ಕೇಜ್ರಿವಾಲ್ ಒಟ್ಟಿಗೆ ಪಕ್ಷಕ್ಕೆ ಪಾದಾರ್ಪಣೆ ಮಾಡಿದ್ದರು, ನಂತರ ವಿಶ್ವಾಸ್ ಕೇಜ್ರಿವಾಲ್ ಅವರ ಪಕ್ಷದಲ್ಲಿ ಸ್ವಲ್ಪ ಕಾಲ ಕೆಲಸ ಮಾಡುವುದನ್ನು ಮುಂದುವರೆಸಿದರು. ಕುಮಾರ್ ಅವರು ರಾಜ್ಯಸಭೆಗೆ ಹೋಗಲು ಬಯಸಿದ್ದರು ಎಂದು ಹೇಳಲಾಗಿದೆ, ಆದರೆ ಕೇಜ್ರಿವಾಲ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಿಲ್ಲ. ಇದರಿಂದಾಗಿ ಅವರು ಪಕ್ಷ ತೊರೆದಿದ್ದಾರೆ.
ರಾಹುಲ್ ಗಾಂಧಿಯಿಂದಲೂ ಕೇಜ್ರೀವಾಲ್ ವಿರುದ್ಧ ಆರೋಪ
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೇಜ್ರಿವಾಲ್ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದರು. ಪಂಜಾಬ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, "ಪಂಜಾಬ್‌ಗೆ ಸ್ಥಿರವಾದ ಸರ್ಕಾರ ಬೇಕು, ಏನೇ ನಡೆದರೂ ನೀವು ಕಾಂಗ್ರೆಸ್ ನಾಯಕನನ್ನು ಭಯೋತ್ಪಾದಕರ ಮನೆಯಲ್ಲಿ ಕಾಣುವುದಿಲ್ಲ, ಆದರೆ ಪೊರಕೆಯ ದೊಡ್ಡ ನಾಯಕನನ್ನು ನೀವು ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ" ( ಅರವಿಂದ್ ಕೇಜ್ರಿವಾಲ್) ಅಲ್ಲಿ ಭೇಟಿಯಾಗೋಣ. ಪಂಜಾಬ್‌ಗೆ ಮುಂದೆ ಅಪಾಯವಿದೆ. ಇದಕ್ಕೆ ಚರಂಜಿತ್ ಚನ್ನಿ ಅವರಂತಹ ಬಲಿಷ್ಠ ಸಿಎಂ ಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ