1 ಲಕ್ಷ ಭಾರತೀಯರ ಆಧಾರ್‌, ಪಾನ್‌ ದಾಖಲೆ ಸೇಲ್‌ಗಿಟ್ಟ ನಟ!

By Kannadaprabha News  |  First Published Jun 4, 2020, 8:30 AM IST

1 ಲಕ್ಷ ಭಾರತೀಯರ ಆಧಾರ್‌, ಪಾನ್‌ ದಾಖಲೆ ಸೇಲ್‌ಗಿಟ್ಟ ನಟ!| ಸ್ಕಾ್ಯನ್‌ ಮಾಡಿರುವ ದಾಖಲೆಗಳಿವು: ಸೈಬಲ್‌


ನವದೆಹಲಿ(ಜೂ.04): 1 ಲಕ್ಷಕ್ಕೂ ಹೆಚ್ಚು ಭಾರತೀಯರ ಆಧಾರ್‌, ಪಾನ್‌ ಮತ್ತು ಪಾಸ್‌ಪೋರ್ಟ್‌ ದಾಖಲೆಗಳನ್ನು ಡಾರ್ಕ್ವೆಬ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂಬ ಆತಂಕಕಾರಿ ಸಂಗತಿಯನ್ನು ಸೈಬರ್‌ ಗುಪ್ತಚರ ಸಂಸ್ಥೆಯಾದ ಸೈಬಲ್‌ ಬಹಿರಂಗಪಡಿಸಿದೆ.

ಮೂಲ ದಾಖಲೆಗಳ ಸ್ಕಾ ್ಯನ್‌ ಪ್ರತಿಗಳು ಇವಾಗಿವೆ. ನೇರವಾಗಿ ಭಾರತ ಸರ್ಕಾರದ ವ್ಯವಸ್ಥೆಯಿಂದ ಸೋರಿಕೆಯಾಗಿಲ್ಲ. ಬದಲಾಗಿ ಥರ್ಡ್‌ಪಾರ್ಟಿಯಿಂದ ಸೋರಿಕೆಯಾಗಿವೆ. ಅಷ್ಟೇನೂ ಪ್ರಸಿದ್ಧಿ ಹೊಂದಿಲ್ಲದ ನಟರೊಬ್ಬರು 1 ಲಕ್ಷ ಭಾರತೀಯ ಗುರುತಿನ ಚೀಟಿಗಳನ್ನು ಡಾರ್ಕ್ನೆಟ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವರು ಅಷ್ಟೇನು ಚಿರಪರಿಚಿತರಲ್ಲದ ಕಾರಣ ಅದನ್ನು ನಾವು ನಿರ್ಲಕ್ಷಿಸುತ್ತಿದ್ದೆವು. ಆದರೆ ಆ ನಟ ಹೊಂದಿದ್ದ ದಾಖಲೆಗಳ ಮಾದರಿ ಹಾಗೂ ಅವುಗಳ ಗಾತ್ರದಿಂದಾಗಿ ಗಮನಹರಿಸಬೇಕಾಯಿತು ಎಂದು ಸೈಬಲ್‌ ತಿಳಿಸಿದೆ.

Tap to resize

Latest Videos

ಡಾರ್ಕ್ವೆಬ್‌ನಲ್ಲಿ 1000 ಗುರುತಿನ ಚೀಟಿಗಳನ್ನು ಮಾರಾಟಗಾರನಿಂದ ಗಳಿಸಿಕೊಳ್ಳಲಾಗಿದೆ. ಅದನ್ನು ಪರಿಶೀಲಿಸಿದಾಗ ಅವೆಲ್ಲಾ ಭಾರತೀಯರಿಗೆ ಸೇರಿದ್ದು ಎಂಬುದು ದೃಢಪಟ್ಟಿದೆ ಎಂದೂ ತಿಳಿಸಿದೆ.

ಕೆಲ ದಿನಗಳ ಹಿಂದಷ್ಟೇ 7.65 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಡಾರ್ಕ್ವೆಬ್‌ನಲ್ಲಿ ಮಾರಾಟಕ್ಕಿಟ್ಟಿರುವ ವಿಷಯವನ್ನು ಸೈಬಲ್‌ ಬಹಿರಂಗಪಡಿಸಿತ್ತು. ಇನ್ನು ಇತ್ತೀಚೆಗಷ್ಟೇ ಟ್ರೂಕಾಲರ್‌ನ ಮಾಹಿತಿ ಸೋರಿಕೆಯಾಗಿರುವ ಬಗ್ಗೆಯೂ ವರದಿಯಾಗಿತ್ತು. ಡಾರ್ಕ್ವೆಬ್‌ನಲ್ಲಿ ಬಿಕರಿಯಾಗುವ ಗುರುತಿನ ದಾಖಲೆಗಳು ಸೈಬರ್‌ ಅಕ್ರಮಗಳಿಗೆ ಬಳಕೆಯಾಗುವ ಅಪಾಯವಿದೆ.

click me!