ಭಾರೀ ಮಳೆ ಹಲವರ ಜೀವನ ಅತಂತ್ರ: ಕುಡಿವ ನೀರು, ಆಹಾರ ಒದಗಿಸುವುದೇ ಈಗ ಸವಾಲು!

By Suvarna NewsFirst Published Jul 25, 2021, 1:30 PM IST
Highlights

* ಭಾರಿ ಮಳೆಯಿಂದಾಗಿ ಹಲವರ ಜೀವನ ಅತಂತ್ರ

* ಮನೆ, ಅಂಗಡಿಗಳನ್ನು ಕಳೆದುಕೊಂಡ ನಾಗರಿಕರು

* ಸಂತ್ರಸ್ತರಿಗೆ ಕುಡಿವ ನೀರು, ಆಹಾರ ಒದಗಿಸುವುದೇ ಈಗ ಸವಾಲು

ರತ್ನಗಿರಿ (ಜು.25): ರಾಜ್ಯದ ರತ್ನಗಿರಿ ಜಿಲ್ಲೆಯ ಚಿಪ್ಳೂಣ್‌ ನಗರದಲ್ಲಿ ಜು.21 ರಂದು ಸುರಿದ ಭಾರಿ ಮಳೆಯಿಂದಾಗಿ ಸುಮಾರು ಜನರು ನೆಲೆ ಕಳೆದುಕೊಂಡಿದ್ದಾರೆ. ಮನೆ, ಅಂಗಡಿಗಳು ನೀರು ಪಾಲಾಗಿದ್ದು, ಮುಂದಿನ ಜೀವನ ಹೇಗೆ ಎಂದು ಜನರು ಕೈಮೇಲೆ ತಲೆ ಹೊತ್ತು ಕೂತಿದ್ದಾರೆ.

ಪ್ರವಾಹದ ದಿಂದ ಹಾನಿಗೊಳಗಾದವರಿಗೆ ಆಹಾರ, ವಸತಿ, ಔಷಧ, ಕುಡಿಯುವ ನೀರು ಒದಗಿಸುವುದು ಸರ್ಕಾರದ ಮುಂದಿರುವ ದೊಡ್ಡ ಸಾವಾಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಬಹಳಷ್ಟುಶಾಲೆಗಳು ಮತ್ತು ಖಾಸಗಿ ಸ್ಥಳಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಪ್ರವಾಹದಿಂದ ಹಾನಿಗೊಳಗಾದವರನ್ನು ರಕ್ಷಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

ಮನೆ ಹೋಯ್ತು- ಪ್ರಗತಿ:

ಕೋಚಿಂಗ್‌ ಸೆಂಟರ್‌ ನಡೆಸುತ್ತಿದ್ದ ಪ್ರಗತಿ ಎಂಬಾಕೆ ಮಳೆಯಿಂದಾಗಿ ಮನೆ ಕಳೆದುಕೊಂಡಿದ್ದಾರೆ. ಸತತವಾಗಿ ಸುರಿದ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾದ್ದರಿಂದ ಕುಟುಂಬದೊಡನೆ ಮನೆಯ ಮೇಲೆ ಹತ್ತಿ ಕುಳಿತು ಸಹಾಯಕ್ಕಾಗಿ ಕಾದಿದ್ದರು. ಮಾರನೇ ದಿನ ಕೇಂದ್ರ ವಿಪತ್ತು ನಿರ್ವಹಣಾ ದಳ ರಕ್ಷಿಸುವವರೆಗೂ ಭಯದಲ್ಲೇ ಇರುವಂತಾಗಿತ್ತು. ಮನೆಯೊಳಗೆಲ್ಲಾ ನೀರು ಸೇರಿಕೊಂಡಿದ್ದರಿಂದ ಮನೆಯೊಳಗಿರುವ ಸಾಮಾನುಗಳೆಲ್ಲಾ ಹಾನಿಗೊಳಗಾಗಿವೆ ಮತ್ತೆ ಇವುಗಳನ್ನು ಸರಿಪಡಿಸಿಕೊಳ್ಳುವುದು ಕಷ್ಟಎಂದು ಅವರು ಹೇಳಿದ್ದಾರೆ.

ಮಹಾದ್‌ ನಗರದ ನಿವಾಸಿ ಮುಜಾಫರ್‌ ಖಾನ್‌ ಹೇಳುವಂತೆ, ಜು.21ರಂದು ಮಳೆ ಆರಂಭವಾದಾಗ ಸಾಯಂಕಾಲ ತಮ್ಮ ಜೆರಾಕ್ಸ್‌ ಅಂಗಡಿ ಮುಚ್ಚಿ ಹೋಗಿದ್ದರು. ಮೂರು ದಿನಗಳ ಕಾಲ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಅಂಗಡಿಯ ಬಳಿ ಹೋಗಲು ಆಗಿರಲಿಲ್ಲ. ಶನಿವಾರ ಮಳೆ ಸ್ವಲ್ಪ ಕಡಿಮೆಯಾದ ಮೇಲೆ ಅಂಗಡಿಯ ಬಳಿ ಹೋದಾಗ ರಸ್ತೆ ಪೂರ್ತಿ ನೀರಿನಲ್ಲಿ ಮುಳುಗಿ ಹೋಗಿತ್ತು. ಅಂಗಡಿಯ ತುಂಬೆಲ್ಲಾ ಮಣ್ಣು ಸೇರಿಕೊಂಡಿದೆ. ಅದರೊಟ್ಟಿಗೆ ಸತ್ತ ಹೆಗ್ಗಣಗಳೂ ಸಹಾ ಇವೆ. ಇವುಗಳನ್ನು ಸದ್ಯ ಸರಿಪಡಿಸುವುದು ಕಷ್ಟಎಂದು ಅವರು ಹೇಳಿದರು.

ಸವಾಲಿನ ಕೆಲಸ:

ಕಾಣೆಯಾದವರನನು ಹುಡುಕಿ ಅವರ ಕುಟುಂಬದವರ ಬಳಿ ಸೇರಿಸುವುದು ಸಧ್ಯದ ಪರಿಸ್ಥಿತಿಯಲ್ಲಿ ಸವಾಲಿನ ಕೆಲಸ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಚಿಪ್ಳೂಣ್‌ ನಗರದ ಹಲವು ಭಾಗಗಳು ಇನ್ನೂ ಸಹಾ ನೀರಿನಲ್ಲಿ ಮುಳುಗಡೆಯಾಗಿವೆ. ಮಂತ್ರಿ ಉದಯ್‌ ಸಾಮಂತ್‌ ತುರ್ತು ಸಭೆ ಕರೆದು ಹಾನಿಗೊಳಗಾದವರಿಗೆ ಪರಿಹಾರ ಒದಗಿಸಿಕೊಡುವಂತೆ ಹೇಳಿದ್ದಾರೆ. ಚಿಪ್ಳೂಣ್‌ ನಗರ ಬಟ್ಟಲಿನಂತಿದ್ದು ಸುತ್ತಾ ಎಲ್ಲೇ ಮಳೆಯಾದರೂ ನಗರದ ರಸ್ತೆಗಳು ಜಲಾವೃತವಾಗುವುದನ್ನು ಇಲ್ಲಿನ ನಿವಾಸಿಗಳು ನೋಡಿದ್ದಾರೆ ಆದರೆ ಈ ಬಾರಿ ನೀರು 10ರಿಂದ 14 ಅಡಿಯವರೆಗೆ ತುಂಬಿದ್ದರಿಂದ ಮನೆಗಳನ್ನು ಖಾಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಸ್ಥಳೀಯ ಅಧಿಕಾರಿಯೋಬ್ಬರು ಹೇಳಿದರು.

click me!