ಒಂದು ಪತ್ರ ಬರೆದರೆ ಸಾಕು 5 ಸಾವಿರ ಬೆಡ್ ಸಿಗ್ತಾವೆ: ರಾಜ್ಯ ಸರ್ಕಾರ ಈ ಕಡೆ ಒಮ್ಮೆ ನೋಡಲೇಬೇಕು!

By Suvarna NewsFirst Published Jul 21, 2020, 3:25 PM IST
Highlights

ಚಿಕಿತ್ಸೆ ನೀಡಲು ಬೆಡ್‌ ಇಲ್ಲ ಎನ್ನುವ ರಾಜ್ಯ ಸರ್ಕಾರ ಈ ಸುದ್ದಿ ನೋಡ್ಲೇಬೇಕು| ಒಂದು ಪತ್ರ ಬರೆದರೆ ಸಾಕು 5 ಸಾವಿರ ಬೆಡ್ ಸಿಗ್ತಾವೆ| ಹೇಗೆ? ಇಲ್ಲಿದೆ ವಿವರ

ನವದೆಹಲಿ(ಜು.21): ಒಂದು ಪತ್ರ ಬರೆದರೇ ಸಾಕು 5 ಸಾವಿರ ಬೆಡ್ ಸಿಗ್ತಾವೆ..! ಕೊರೊನಾ ಸೋಂಕಿತರಿಗೆ ಬೆಡ್ ಇಲ್ಲ, ಬೆಡ್ ಇಲ್ಲ ಎನ್ನುವ ಕರ್ನಾಟಕ ಸರ್ಕಾರ ಈ ಕಡೆ ಒಮ್ಮೆ ನೋಡಿದರೆ ಸಾಕು ಅನ್ನಿಸುತ್ತೆ.

ನವದೆಹಲಿಯಲ್ಲಿ ಕೊರೊನಾ ಸೋಂಕಿತರಿಗೆ ಒಂದು ರೀತಿ ಸಂಜೀವಿನಿಯಾಗಿದ್ದು ಇವೇ ಬೆಡ್ ಗಳು. ಇದಕ್ಕೆ ನಾವು ಸಿದ್ದ ಎಂಬ ಅರ್ಥದಲ್ಲಿ 320 ಐಸೋಲೇಷನ್ ಕೋಚ್ ಗಳನ್ನು ಸಿದ್ದ ಮಾಡಿಕೊಂಡು ಕೂತಿದೆ ರೈಲ್ವೆ ಇಲಾಖೆ.

ಚೀನಾಕ್ಕೆ 10 ದಿನ ಬೇಕಾದರೆ ನಮಗೆ ಒಂದೇ ರಾತ್ರಿ.. ಜೈ ಹಿಂದ್!

ಈ ಕುರಿತು ಮಾತನಾಡಿದ ಕೇಂದ್ರ ರೈಲ್ವೆ ಖಾತೆಯ ರಾಜ್ಯಸಚಿವ ಸುರೇಶ್ ಅಂಗಡಿ, ಅಗತ್ಯ ಸೇವೆ ನೀಡಲು ರೈಲ್ವೆ ಇಲಾಖೆ ಸಿದ್ದವಿದೆ. ಆದರೆ ಈ ಹೈಸೋಲೇಷನ್ ಕೋಚ್ ನೀಡುವ ವಿಷಯ ಕೇಂದ್ರ ಗೃಹ ಮತ್ತು  ಆರೋಗ್ಯ ಇಲಾಖೆ ಅಡಿ ಬರುತ್ತದೆ. ಹಾಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಒಂದು ಪತ್ರ ಬರೆದರೇ ಸಾಕಾಗುತ್ತದೆ ಎಂದರು.

ಒಂದರಲ್ಲಿ 16 ಬೆಡ್ : ಬೆಂಗಳೂರು, ಹುಬ್ಬಳ್ಳಿಯಲ್ಲಿ ಹೈಸೋಲೇಷನ್ ಕೋಚ್ ಗಳು ಸಿದ್ದವಾಗಿವೆ. ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೆ ಸೂಚಿಸುತ್ತದೆಯೋ ಅಲ್ಲಿಗೆ ಹೋಗಲಿವೆ. ಕರ್ನಾಟಕದಲ್ಲಿ 320 ಹೈಸೋಲೇಷನ್ ಕೋಚ್ ಗಳು ಸಿದ್ದವಾಗಿದ್ದು, 5 ಸಾವಿರ ಬೆಡ್ ಗಳು ಲಭ್ಯವಾಗಲಿವೆ.

ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಅಖಾಡಕ್ಕೆ ಇಳಿದು, ಸಚಿವರ ಸೂಚನೆ ಹಿನ್ನಲೆಯಲ್ಲಿ 8 ಸಾವಿರ ಬೆಡ್ ಒದಗಿಸಿತ್ತು ರೈಲ್ವೆ ಇಲಾಖೆ. ಇದರಿಂದಾಗಿ ದೆಹಲಿಯಲ್ಲಿ ಸೋಂಕು ನಿವಾರಣೆಗೆ ಸಹಾಯಕವಾಗಿತ್ತು.

ಚಿತ್ರಗಳು: ಕೊರೋನಾ ಸೋಂಕಿತರಿಗೆ ರೈಲು ಬೋಗಿಯಲ್ಲಿ ರೆಡಿಯಾಯ್ತು ಐಸೋಲೇಶನ್ ವಾರ್ಡ್

ಇನ್ನು ರೈಲ್ವೆ ಇಲಾಖೆಯ ಆರೋಗ್ಯ ಸಿಬ್ಬಂದಿ ಕೂಡ ಇದ್ದು, ಅವರ ಕಡೆಯಿಂದಲೂ ಸಹಾಯ ಪಡೆಯಬಹುದಾಗಿರುತ್ತದೆ.

ಕರ್ನಾಟಕದಲ್ಲಿ 320 ಹೈಸೋಲೇಷನ್ ಕೋಚ್ ಗಳು ಸಿದ್ದವಿದೆ. ರಾಜ್ಯ ಸರ್ಕಾರ ಕೇಂದ್ರ ಗೃಹ, ಆರೋಗ್ಯ ಇಲಾಖೆಗೆ ಒಂದು ಪತ್ರ ಬರೆದರೆ ಸಾಕು. ಚಿಕಿತ್ಸೆಗೆ ಬೆಡ್ ಲಭ್ಯವಾಗಲಿವೆ.

ಸುರೇಶ್ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವರು.

click me!