ಮೊದಲ ಡೋಸ್‌ನಿಂದ ಸೋಂಕು ಪ್ರಸರಣ ಶೇ.50ರಷ್ಟು ಇಳಿಕೆ!

By Suvarna News  |  First Published Apr 29, 2021, 11:26 AM IST

ಮೊದಲ ಡೋಸ್‌ನಿಂದ ಸೋಂಕು ಪ್ರಸರಣ ಶೇ.50ರಷ್ಟು ಇಳಿಕೆ| ಕೋವಿಶೀಲ್ಡ್‌, ಫೈಝರ್‌ ಲಸಿಕೆ ಮೇಲೆ ಬ್ರಿಟನ್‌ನಲ್ಲಿ ನಡೆದ ಅಧ್ಯಯನದಿಂದ ಸಾಬೀತು


ಲಂಡನ್‌(ಏ.29): ಕೊರೋನಾ ಲಸಿಕೆಗಳ ಎರಡೂ ಡೋಸ್‌ ಪಡೆದ ತಿಂಗಳ ನಂತರ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂಬುದು ಈವರೆಗಿನ ವೈಜ್ಞಾನಿಕ ಅಭಿಪ್ರಾಯ. ಆದರೆ, ಕೋವಿಶೀಲ್ಡ್‌ ಹಾಗೂ ಫೈಜರ್‌ನ ಮೊದಲ ಡೋಸ್‌ ಪಡೆದವರ ಮೇಲೂ ಲಸಿಕೆಗಳು ಭಾರಿ ಪ್ರಭಾವ ಬೀರಿವೆ. ಇವರಿಂದ ಅನ್ಯರಿಗೆ ಸೋಂಕು ಹರಡುವುದು ಶೇ.50ರಷ್ಟುಕಡಿಮೆಯಾಗಿದೆ ಎಂದು ಅಧ್ಯಯನದಿಂದ ಬೆಳಕಿಗೆ ಬಂದಿದೆ.

‘ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌’ ಸಂಸ್ಥೆ ಈ ಕುರಿತು ಅಧ್ಯಯನ ನಡೆಸಿದೆ. ಆಸ್ಟ್ರಾಜೆನೆಕಾ-ಆಕ್ಸ್‌ಫರ್ಡ್‌ ಜಂಟಿಯಾಗಿ ಸಿದ್ಧಪಡಿಸಿರುವ ಭಾರತದ ಸೀರಂ ಇನ್ಸ್‌ಟಿಟ್ಯೂಟ್‌ ಉತ್ಪಾದಿತ ‘ಕೋವಿಶೀಲ್ಡ್‌’ ಹಾಗೂ ಅಮೆರಿಕದಲ್ಲಿ ನೀಡಲಾಗುತ್ತಿರುವ ‘ಫೈಜರ್‌’ ಲಸಿಕೆಯ ಮೊದಲ ಡೋಸ್‌ ಪಡೆದವರನ್ನು ಪರೀಕ್ಷಿಸಿ ವರದಿ ಸಿದ್ಧಪಡಿಸಲಾಗಿದೆ.

Tap to resize

Latest Videos

undefined

"

ಮೊದಲ ಡೋಸ್‌ ಪಡೆದ 3 ವಾರ ನಂತರ, ಈ ಲಸಿಕೆ ಪಡೆದವರು ಇನ್ನೊಬ್ಬರಿಗೆ ಸೋಂಕು ಹರಡಿಸುವ ಸಾಧ್ಯತೆ ಶೇ.38ರಿಂದ 49ಕ್ಕಿಂತ ಕಡಿಮೆ ಎಂದು ಸಾಬೀತಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.

‘ಅಧ್ಯಯನದಲ್ಲಿ ಮೊದಲ ಡೋಸ್‌ ಲಸಿಕೆ ಪಡೆದವರು ಹಾಗೂ ಅವರ ಸಂಪರ್ಕಿತರನ್ನು ಪರೀಕ್ಷಿಸಲಾಗಿದೆ. ಈ ವೇಳೆ ಮೊದಲ ಡೋಸು, ಸೋಂಕಿನ ಹರಡುವಿಕೆಯನ್ನು ಶೇ.50ರಷ್ಟುಕಡಿಮೆ ಮಾಡುತ್ತದೆ ಎಂಬುದನ್ನು ರುಜುವಾತುಪಡಿಸಿದೆ. ಹೀಗಾಗಿ ಲಸಿಕೆ ಪಡೆಯಲೇಬೇಕು’ ಎಂದು ಬ್ರಿಟನ್‌ ವೈದ್ಯಕೀಯ ಸಚಿವ ಮ್ಯಾಟ್‌ ಹ್ಯಾನ್‌ಕಾಕ್‌ ಹೇಳಿದ್ದಾರೆ.

24 ಸಾವಿರ ಮನೆಗಳಲ್ಲಿನ ಜನರ 57 ಸಾವಿರ ಸಂಪರ್ಕಿತರು ಪರೀಕ್ಷೆಗೆ ಒಳಪಟ್ಟಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!