
ನವದೆಹಲಿ (ಅ. 15): ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಮಗಳಾದ ದಮಯಂತಿ ಬೆನ್ ಮೋದಿ ಅವರ ಪರ್ಸ್ ಕದ್ದಿದ್ದ ಇಬ್ಬರು ಖದೀಮರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗೌರವ್ ಆಲಿಯಾಸ್ ನೋನು(21), ಬಾದಲ್(22) ಬಂಧಿತರು.
ಮಹಾರಾಷ್ಟ್ರ ಹರ್ಯಾಣ ಚುನಾವಣೆ ಮೋದಿಗೆ ಏಕೆ ಮುಖ್ಯ?
ದಮಯಂತಿ ಅವರು ದೆಹಲಿಯ ಗುಜರಾತ್ ಭವನದ ಮುಂಭಾಗ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದಿದ್ದ ಗೌರವ್ ಹಾಗೂ ಬಾದಲ್ ಪರ್ಸ್ ಕದ್ದೊಯ್ದಿದ್ದರು. ಇದರಲ್ಲಿ 56 ಸಾವಿರ ರು., 2 ಮೊಬೈಲ್ ಫೋನ್, ಮಹತ್ವದ ದಾಖಲೆಗಳು ಇದ್ದವು. ದೂರು ದಾಖಲಾದ ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದರು. ಹರ್ಯಾಣದ ಸುಲ್ತಾನ್‌ಪುರಿ ಎಂಬಲ್ಲಿ ವಾಸವಾಗಿದ್ದ ಗೌರವ್ ಮತ್ತು ದೆಹಲಿಯಲ್ಲಿ ಸಂಬಂಧಿಕರ ಮನೆಯಲ್ಲಿದ್ದ ಬಾದಲ್‌ನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತರಿಂದ ಹಣ, ಮೊಬೈಲ್, ದಾಖಲೆಗಳು ಮತ್ತು ಕಳ್ಳತನದ ವೇಳೆ ಬಳಸಿದ್ದ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ. 1 ಕಿ.ಮೀ.ವರೆಗೂ ದಮಯಂತಿ ಅವರನ್ನು ಹಿಂಬಾಲಿಸಿ ಪರ್ಸ್ ದೋಚಲಾಯಿತು ಎಂದು ವಿಚಾರಣೆ ವೇಳೆ ಖದೀಮ ಗೌರವ್ ಬಾಯಿಬಿಟ್ಟಿದ್ದಾನೆ.