ವಾರ್ ಗೆ ಕಾರಣವಾಯ್ತು ಖಟ್ಟರ್ ಖಡಕ್ ಹೇಳಿಕೆ

By Web DeskFirst Published Oct 15, 2019, 12:25 PM IST
Highlights

ಸೋನಿಯಾ ಸತ್ತ ಇಲಿ: ಖಟ್ಟರ್‌ | ಗುಡ್ಡ ಅಗೆದು ಸತ್ತ ಇಲಿ ಹಿಡಿದ ಕಾಂಗ್ರೆಸ್‌ | ಸೋನಿಯಾ ಪುನಃ ಅಧ್ಯಕ್ಷೆಯಾದ ಬಗ್ಗೆ ಹರ್ಯಾಣ ಸಿಎಂ ವ್ಯಂಗ್ಯ |  ಖಟ್ಟರ್‌ ‘ಹೇಸರಗತ್ತೆ’ ಇದ್ದಂಗೆ, ‘ದುರ್ಗೆ’ ಸೋನಿಯಾರಿಂದ ‘ಅಸುರ’ ಖಟ್ಟರ್‌ ಸಂಹಾರ: ಕಾಂಗ್ರೆಸ್‌ ತಿರುಗೇಟು

ಸೋನಿಯಾ ಗಾಂಧಿ ಪುನಃ ಅಧ್ಯಕ್ಷೆಯಾಗಿರುವುದು ಕಾಂಗ್ರೆಸ್‌ ಪಕ್ಷ ಗುಡ್ಡ ಅಗೆದು ಇಲಿ ಹಿಡಿದಂತಿದೆ. ಅದೂ ಸತ್ತ ಇಲಿ’ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಪುನಃ ಪದಗ್ರಹಣ ವಹಿಸಿಕೊಂಡಿರುವ ಬಗ್ಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ.

ತಲೆ ಕತ್ತರಿಸಿ ಹಾಕ್ತೀನಿ: ಬಿಜೆಪಿ ನಾಯಕಗೆ ಸಿಎಂ ಖಟ್ಟರ್ ಎಚ್ಚರಿಕೆ!

ಮುಖ್ಯಮಂತ್ರಿಯ ಈ ನುಡಿಗಳಿಗೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಖಟ್ಟರ್‌ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ. ‘ಖಟ್ಟರ್‌ ಅವರು ಖಚ್ಚರ್‌ (ಹೇಸರಗತ್ತೆ) ಇದ್ದಂಗೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ನಿತಿನ್‌ ರಾವುತ್‌ ಟೀಕಿಸಿದ್ದರೆ, ‘ದುರ್ಗಾಮಾತೆ ಅವತಾರವಾದ ಸೋನಿಯಾ ಅವರು ಖಟ್ಟರ್‌ರಂತಹ ರಾಕ್ಷಸರನ್ನು ಸಂಹರಿಸಲಿದ್ದಾರೆ’ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ತಿರುಗೇಟು ನೀಡಿದ್ದಾರೆ.

ಸತ್ತ ಇಲಿ ಹಿಡಿದ ಕಾಂಗ್ರೆಸ್‌- ಖಟ್ಟರ್‌:

ಇದೇ 21ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಹರ್ಯಾಣದ ಸೋನಿಪತ್‌ ಸಮೀಪದ ಖಾರ್ಖೋಡಾ ಎಂಬಲ್ಲಿ ಬಿಜೆಪಿ ಪರ ಪ್ರಚಾರ ಭಾಷಣ ಮಾಡಿದ ಖಟ್ಟರ್‌, ‘ರಾಹುಲ್‌ ‘ಬಾಬಾ’ ಅವರು ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದರು. ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳಲು ಕಾಂಗ್ರೆಸ್‌ ಪಕ್ಷಕ್ಕೆ 3 ತಿಂಗಳು ಬೇಕಾಯಿತು.

ಕುಟುಂಬವೊಂದರ ಹೊರಗಿನ ವ್ಯಕ್ತಿ ಅಧ್ಯಕ್ಷನಾಗಬಹುದು ಎಂದು ನಾವು ಅಂದುಕೊಂಡಿದ್ದೆವು. ಆದರೆ ಅದು ಹಾಗಾಗಲಿಲ್ಲ. ಪುನಃ ಗಾಂಧಿ ಕುಟುಂಬವೇ ಕಾಂಗ್ರೆಸ್‌ ಪಕ್ಷಕ್ಕೆ ಗತಿಯಾಯಿತು. ಗುಡ್ಡ ಅಗೆದು ಇಲಿ ಹಿಡಿದಂತಾಯಿತು. ಅದೂ ಸತ್ತ ಇಲಿ’ ಎಂದು ಪುನಃ ಸೋನಿಯಾ ಅವರೇ ಅಧ್ಯಕ್ಷೆಯಾಗಿ ನೇಮಕಗೊಂಡ ಬಗ್ಗೆ ಖಟ್ಟರ್‌ ವ್ಯಂಗ್ಯವಾಡಿದರು.

ಈಗ ಅದೇ ಕುಟುಂಬದಲ್ಲಿ ಕಾದಾಟ ನಡೆಯುತ್ತಿದೆ. ಒಂದು ಕಡೆ ‘ಪಪ್ಪು’ ಇನ್ನೊಂದು ಕಡೆ ‘ಮಮ್ಮಿ’ ನಡುವೆ ಕಾದಾಟ ನಡೆಯುತ್ತಿದೆ ಎಂದು ಇತ್ತೀಚಿನ ರಾಹುಲ್‌-ಸೋನಿಯಾ ಬಣಗಳ ನಡುವಿನ ಮುಖಂಡರ ಸಂಘರ್ಷದ ಬಗ್ಗೆ ಖಟ್ಟರ್‌ ತಮಾಷೆ ಮಾಡಿದರು.

ಇದು ಮಹಿಳಾ ವಿರೋಧಿ ನೀತಿ- ಕಾಂಗ್ರೆಸ್‌:

ಮಹಿಳೆಯೊಬ್ಬಳ ಬಗ್ಗೆ ಇಷ್ಟೊಂದು ಕೀಳು ಮಟ್ಟಕ್ಕಿಳಿದು ಖಟ್ಟರ್‌ ಮಾತಾಡಿದ್ದು ಸಲ್ಲದು. ಇದು ಬಿಜೆಪಿಯ ಮಹಿಳಾ ವಿರೋಧಿ ನೀತಿಯ ದ್ಯೋತಕ. ಖಟ್ಟರ್‌ ೕ ಕೂಡಲೇ ಕ್ಷಮೆಯಾಚಿಸಬೇಕು ಎಂದು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಷ್ಮಿತಾ ದೇವ್‌ ಹಾಗೂ ಹರ್ಯಾಣ ಕಾಂಗ್ರೆಸ್‌ ಅಧ್ಯಕ್ಷೆ ಕುಮಾರಿ ಸೆಲ್ಜಾ ಆಗ್ರಹಿಸಿದ್ದಾರೆ.

click me!