ಕೊರೋನಾ ಹಾಟ್‌ಸ್ಪಾಟ್‌ನಲ್ಲಿ ಈಗ 2 ಕೇಸ್: 4T ಫಾರ್ಮುಲಾದಿಂದ ಸಮರ ಗೆದ್ದ ಧಾರಾವಿ!

By Suvarna News  |  First Published Jul 28, 2020, 2:57 PM IST

ಕೊರೋನಾ ಹಾಟ್‌ಸ್ಪಾಟ್‌ ಆಗಿದ್ದ ಮುಂಬೈನ ಧಾರಾವಿಯಲ್ಲಿ ಸೋಂಕು ನಿಯಂತ್ರಣ| 4T ಫಾರ್ಮುಲಾದಿಂದ ಸಮರ ಗೆದ್ದ ಧಾರಾವಿ!| ಸಾಮಾಜಿಕ ಅಂತರ ಕಾಪಾಡಲು ಸಾಧ್ಯವೇ ಇಲ್ಲದ ಧಾರಾವಿ ಸ್ಲಂನಲ್ಲಿ ಕೊರೋನಾ ನಿಯಂತ್ರಿಸಲು ಜನರು, ಅಧಿಕಾರಿಗಳು ಯಶಸ್ವಿ


ಮುಂಬೈ(ಜು.28):  ದೇಶದಲ್ಲಿ ಕೊರೋನಾ ಹಾಟ್‌ಸ್ಪಾಟ್‌ ಎಂದು ಗುರುತಿಸಿಕೊಂಡಿದ್ದ ಏಷ್ಯಾದ ಅತಿದೊಡ್ಡ ಸ್ಲಂ ಮುಂಬೈನ ಧಾರಾವಿಯಲ್ಲಿ ಭಾನುವಾರ ಕೇವಲ ಎರಡೇ ಹೊಸ ಪ್ರಕರಣಗಳು ದಾಖಲಾಗಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಕಷ್ಟವಾಗಿದ್ದ ಧಾರಾವಿ ಕೊರೋನಾ ಸಮರದಲ್ಲಿ ಗೆದ್ದು ಎಲ್ಲರಿಗೂ ಪ್ರೇರಣೆಯಾಗಿದೆ. ಇಲ್ಲಿ ಏಪ್ರಿಲ್‌ನಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ದಿನಗಳೆದಂತೆ ಕೊರೋನಾ ಅಬ್ಬರ ಹೆಚ್ಚಾಗಿತ್ತು. ಆದರೀಗ ಇಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿರುವುದು ಸ್ಪಷ್ಟವಾಗಿದೆ.

ಧಾರಾವಿಗೆ ವಿಶ್ವಸಂಸ್ಥೆ ಮೆಚ್ಚುಗೆ: ಕೊರೋನಾ ನಿಯಂತ್ರಿಸಲು ಯಶಸ್ವಿಯಾದ ಏಷ್ಯಾದ ಅತಿದೊಡ್ಡ ಸ್ಲಂ!

Tap to resize

Latest Videos

undefined

ಭಾನುವಾರ ಧಾರಾವಿಯಲ್ಲಿ ಎರಡು ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಇಲ್ಲಿ ಒಟ್ಟು  ಪ್ರಕರಣಗಳ ಸಂಖ್ಯೆ 2531 ಆಗಿದೆ. ಆದರೆ ಇವುಗಳಲ್ಲಿ ಸದ್ಯ 113 ಪ್ರಕರಣಗಳಷ್ಟೇ ಸಕ್ರಿಯವಾಗಿವೆ. ಶನಿವಾರವನ್ನು ಹೊರತುಪಡಿಸಿದರೆ ಕಳೆದ ಕೆಲ ದಿನಗಳಿಂದ ಧಾರಾವಿಯಲ್ಲಿ ನಿತ್ಯ ಕೇವಲ ಒಂದು ಪ್ರಕರಣವಷ್ಟೇ ವರದಿಯಾಗುತ್ತಿತ್ತು. ಆದರೆ ಶನಿವಾರ ಇಲ್ಲಿ ಹತ್ತು ಪ್ರಕರಣಗಳು ದಾಖಲಾಗಿದ್ದವು. ಇನ್ನು ಈವರೆಗೆ ಇಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.

ಸಾಮಾಜಿಕ ಅಂತರವೂ ಕಷ್ಟ: ಧಾರಾವಿಯಲ್ಲಿ ಅನೇಕ ಕುಟುಂಬಗಳು ಕಮ್ಯುನಿಟಿ ಟಾಯ್ಲೆಟ್ ಬಳಸುತ್ತಾರೆ. ಅಲ್ಲದೇ ಕಿರಿದಾದ ಗಲ್ಲಿಗಳಲ್ಲಿ ತೆರಳಬೇಕಾಗುತ್ತದೆ. ಹೀಗಿರುವಾಗ ಇಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅಸಾಧ್ಯವಾಗಿದ್ದು, ಆರೋಗ್ಯಾಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು. ಹೀಗಾಗಿ ಧಾರಾವಿ ಮುಂಬೈನ ಬಹುದೊಡ್ಡ ಕೊರೋನಾ ಎಪಿಸೆಂಟರ್ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. 

ಮುಂಬೈ ಸ್ಲಂನಲ್ಲಿ ಮೊದಲ ಕೊರೋನಾ ವೈರಸ್ ಪತ್ತೆ; ಹೆಚ್ಚಾಯ್ತು ಬಡಪಾಯಿಗಳ ಆತಂಕ!

ಆದರೆ ಈ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿದ್ದು, ಧಾರಾವಿಯಲ್ಲಿ ಮೇ ತಿಂಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಾರಂಭಿಸಿತು. ಇದಕ್ಕಾಗಿ ಇಲ್ಲಿನ ಜನರೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಂಡ ಆಡಳಿತಾಧಿಕಾರಿಗಳಿಗೂ ಮೆಚ್ಚುಗೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಕೊರೋನಾ ವಿರುದ್ಧ ಹೋರಾಡಿದ ಧಾರಾವಿಯನ್ನು ಶ್ಲಾಘಿಸಿದೆ.

ಧಾರಾವಿಯನ್ನು ಗೆಲ್ಲಿಸಿದ 4 T ಫಾರ್ಮುಲಾ:

6.5 ಲಕ್ಷಕ್ಕಿಂತಲೂ ಜನಸಂಖ್ಯೆ ಇರುವ ಧಾರಾವಿಯಲ್ಲಿ ಜುಲೈ 22 ರಂದು 5 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ವರದಿಯಾಗಿತ್ತು. ಜುಲೈ 23 ರಂದು  6 ಪ್ರಕರಣಗಳು ದಾಖಲಾಗಿದ್ದವು. ಹೀಗಿರುವಾಗ ಧಾರಾವಿಯಲ್ಲಿ ಕೊರೋನಾ ನಿಯಂತ್ರಿಸುವಲ್ಲಿ 4 T ಫಾರ್ಮುಲಾ ಟ್ರೇಸಿಂಗ್, ಟ್ರ್ಯಾಕಿಂಗ್, ಟೆಸ್ಟಿಂಗ್ ಹಾಗೂ ಟ್ರೀಟಿಂಗ್ ಇದು ಯಶಸ್ವಿಯಾಗಿದೆ ಎಂಬುವುದು ಅಧಿಕಾರಿಗಳ ಮಾತಾಗಿದೆ.

ಇಂದು ಉದ್ಘಾಟನೆಯಾಗುತ್ತೆ ಪ್ಲಾಸ್ಮಾ ಡೊನೇಷನ್ ಪ್ರೋಗ್ರಾಂ

ವೈದ್ಯರು ಹಾಗೂ ಅನ್ಯ ಕ್ಲಿನಿಕ್‌ಗಳು ಸ್ಕ್ರೀನಿಂಗ್ ಹಾಗೂ ಕ್ಯಾಂಪ್‌ಗಳ ಮೂಲಕ ಇಲ್ಲಿನ 47,500 ಮನೆಗಳನ್ನು ಕವರ್ ಮಾಡಿವೆ. ಸಂಚಾರಿ ವ್ಯಾನ್ ಮೂಲಕ 14,970 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು, ಮಂಗಳವಾರ ಧಾರಾವಿಯಲ್ಲಿ ಪ್ಲಾಸ್ಮಾ ಡೊನೇಷನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 3.75 ಲಕ್ಷ ದಾಟಿದೆ.

click me!