ಎನ್‌ಡಿಎ ಮಿತ್ರಪಕ್ಷಗಳಿಗೆ ಮನವೊಲಿಸಿರುವ ಬಿಜೆಪಿ ಸ್ವೀಕರ್ ಅಭ್ಯರ್ಥಿಯಾಗಿ ಓಂ ಬಿರ್ಲಾ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ 2ನೇ ಬಾರಿಗೆ ಓಂ ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಆದರೆ ವಿಪಕ್ಷ ಡೆಪ್ಯೂಟಿ ಸ್ಪೀಕರ್‌ಗೆ ಬೇಡಿಕೆ ಇಟ್ಟಿದೆ.
ನವದೆಹಲಿ(ಜೂ.25) ಲೋಕಸಭೆಯ ಸ್ವೀಕರ್ ವಿಚಾರದಲ್ಲಿ ಏರ್ಪಟ್ಟಿದ್ದ ಗೊಂದಲ ಬಗೆಹರಿದಿದೆ. ಎನ್‌ಡಿಎ ಮಿತ್ರಪಕ್ಷಗಳು ಸ್ಪೀಕರ್ ಸ್ಥಾನಕ್ಕೆ ಪಟ್ಟು ಹಿಡಿದಿವೆ ಅನ್ನೋ ಮಾತುಗಳು ಕೇಳಿಬಂದ ಬೆನ್ನಲ್ಲೇ ಇದೀಗ ಬಿಜೆಪಿ ಸ್ಪಷ್ಟ ಉತ್ತರ ನೀಡಿದೆ. ಬಿಜೆಪಿ ನಾಯಕ ಓಂ ಬಿರ್ಲಾ 2ನೇ ಬಾರಿಗೆ ಸ್ಪೀಕರ್ ಆಗಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ. ಎನ್‌ಡಿಎ ಮಿತ್ರಪಕ್ಷಗಳ ಜೊತೆ ತಡರಾತ್ರಿವರೆಗೆ ಚರ್ಚೆ ನಡೆಸಿದ್ದ ಬಿಜೆಪಿ ಇಂದು ತನ್ನ ಅಭ್ಯರ್ಥಿಯಾಗಿ ಓಂ ಬಿರ್ಲಾ ಕಣಕ್ಕಿಳಿಸಿದೆ. ಇತ್ತ ವಿಪಕ್ಷಗಳು ಪ್ರಮುಖ ಬೇಡಿಕೆಯೊಂದನ್ನು ಮುಂದಿಟ್ಟಿದೆ. ಡೆಪ್ಯೂಟಿ ಸ್ಪೀಕರ್ ವಿಪಕ್ಷಗಳಿಗೆ ನೀಡಬೇಕು ಎಂದು ಒತ್ತಾಯಿಸಿದೆ.
ಪ್ರಧಾನಿ ಮೋದಿ ಸರ್ಕಾರ 2ನೇ ಅವಧಿಯಲ್ಲಿ ಲೋಕಸಭಾ ಸ್ವೀಕರ್ ಆಗಿ ಸೇವೆ ಸಲ್ಲಿಸಿರುವ ಓಂ ಬಿರ್ಲಾ, ಈ ಬಾರಿ ಮರು ಆಯ್ಕೆಗೆ ಕೆಲ ಗೊಂದಲ ಎರ್ಪಟ್ಟಿತ್ತು. ಎನ್‌ಡಿಎ ಮೈತ್ರಿ ಸರ್ಕಾರದ ಕಾರಣ ಬಿಜೆಪಿ ಮಿತ್ರ ಪಕ್ಷಗಳು ಸ್ಪೀಕರ್ ಹುದ್ದೆ ಮೇಲೆ ಕಣ್ಣಿಟ್ಟಿತ್ತು. ಹೀಗಾಗಿ ಗೊಂದಲ ಎರ್ಪಟ್ಟಿತ್ತು. ಆದರೆ ಕಳೆದ ರಾತ್ರಿ ಬಿಜೆಪಿ ನಾಯಕ ರಾಜನಾಥ್ ಸಿಂಗ್, ಎನ್‌ಡಿಎ ಮಿತ್ರ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಿದ್ದರು. ತಡರಾತ್ರಿವರೆಗೆ ನಡೆಸಿದ್ದ ಸಭೆಯಲ್ಲಿ ಒಮ್ಮತದಿಂದ ಓಮ್ ಬಿರ್ಲಾ ಸ್ಪೀಕರ್ ಆಯ್ಕೆಗೆ ಮನವಿ ಮಾಡಿದ್ದರು. ರಾಜನಾಥ್ ಸಿಂಗ್ ಮನವೊಲಿಕೆ ಯಶಸ್ಸು ಕಂಡಿದೆ.
undefined
ಸಂದರ್ಶನದಲ್ಲಿ ಮೋದಿ ಸರ್ಕಾರದ ಕುರಿತು ಶಾಕಿಂಗ್ ಹೇಳಿಕೆ ನೀಡಿದ ರಾಹುಲ್ ಗಾಂಧಿ
ಓಮ್ ಬಿರ್ಲಾ ಎನ್‌ಡಿಎ ಅಬ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ವಿಪಕ್ಷಗಳು ಡೆಪ್ಯೂಟಿ ಸ್ಪೀಕರ್ ತಮಗೆ ನೀಡಬೇಕು ಎಂದು ಪಟ್ಟು ಹಿಡಿದೆ. ಈ ಕುರಿತು ಸಂಸತ್ ಭವನ ಆವರಣದಲ್ಲಿ ರಾಹುಲ್ ಗಾಂಧಿ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜನಾಥ್ ಸಿಂಗ್ ಈ ಕುರಿತು ಬೆಂಬಲ ಕೇಲಿದ್ದರು. ಸ್ಪೀಕರ್ ಆಯ್ಕೆಗೆ ನಾವು ಬೆಂಬಲ ನೀಡುತ್ತೇವೆ ಎಂದಿದ್ದೇವೆ. ಆದರೆ ಡೆಪ್ಯೂಟಿ ಸ್ಪೀಕರ್ ಸ್ಥಾನ ವಿಪಕ್ಷಕ್ಕೆ ನೀಡಬೇಕು ಎಂದು ಕೇಳಿದ್ದೇವೆ. ಆದರೆ ಬಿಜೆಪಿ ಹಾಗೂ ಎನ್‌ಡಿಎ ಯಾವುದೇ ಮಾಹಿತಿ ನೀಡಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಡೆಪ್ಯೂಟಿ ಸ್ಪೀಕರ್ ಹುದ್ದೆ ವಿಪಕ್ಷಗಳಿಗೆ ನೀಡಿದರೆ ಮಾತ್ರ ಸ್ಪೀಕರ್ ಆಯ್ಕೆಗೆ ಬೆಂಬಲ ಸೂಚಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದೀಗ ಡೆಪ್ಯೂಟಿ ಸ್ಪೀಕರ್ ಬಿಜೆಪಿ ಹಾಗೂ ಎನ್‌ಡಿಎಗೆ ಕಗ್ಗಂಟಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ ಕೋಟಾ ಬಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಓಮ್ ಬಿರ್ಲಾ ಕಳೆದ 20 ವರ್ಷದಿಂದ ಈ ಕ್ಷೇತ್ರದ ಸಂಸದರಾಗಿರುವ ಹೆಗ್ಗಳಿಗೆಗೆ ಪಾತ್ರರಾಗಿದ್ದಾರೆ.
ಸ್ಪೀಕರ್ ಹುದ್ದೆಗೆ ಬಿಜೆಪಿ ಪ್ಲ್ಯಾನ್, ಉಪಸ್ಪೀಕರ್ ಹುದ್ದೆ ಜೆಡಿಯು ಅಥವಾ ಟಿಡಿಪಿಗೆ!