ಒಡಿಶಾದಲ್ಲಿ ಎನ್‌ಪಿಆರ್‌: ಯೋಜನೆ ಜಾರಿಯ ಮೊದಲ ರಾಜ್ಯ!

By Suvarna NewsFirst Published Jan 9, 2020, 10:41 AM IST
Highlights

 ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ದೇಶದಾದ್ಯಂತ ವಿರೋಧ| ಒಡಿಶಾದಲ್ಲಿ ಏ.16ರಿಂದ ಎನ್‌ಪಿಆರ್‌: ಯೋಜನೆ ಜಾರಿಯ ಮೊದಲ ರಾಜ್ಯ| 

ಭುವನೇಶ್ವರ[ಜ.09]: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ, ಬಿಜೇಪಿಯೇತರ ಆಡಳಿತವಿರುವ ರಾಜ್ಯವಾದ ಒಡಿಶಾದಲ್ಲಿ ಯೋಜನೆ ಜಾರಿಗೆ ಸಜ್ಜಾಗಿದೆ. ಈ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿರುವ ಎನ್‌ಪಿಆರ್‌ ಜಾರಿಗೆ ಮುಂದಾದ ಮೊದಲ ರಾಜ್ಯ ಎಂಬ ದಾಖಲೆಗೆ ಪಾತ್ರವಾಗುವ ಸಾಧ್ಯತೆ ಇದೆ.

ಏ.16ರಿಂದ 45 ದಿನಗಳ ಕಾಲ ಎನ್‌ಪಿಆರ್‌ ದಾಖಲೆ ಸಂಗ್ರಹ ನಡೆಯಲಿದೆ. ಒಂದು ಲಕ್ಷಕ್ಕೂ ಅಧಿಕ ಅಧಿಕಾರಿಗಳು 14 ವಿಷಯಗಳ ಕುರಿತು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಕೆಲವೊಂದು ವಿಚಾರಗಳಲ್ಲಿ ಹೆಚ್ಚಿನ ಮಾಹಿತಿ ಕೇಳಲಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೇ 15ರಿಂದ ಎನ್‌ಪಿಆರ್‌ ಜಾರಿಗೆ ಜೆಡಿಯು- ಮೈತ್ರಿಕೂಟದ ಆಡಳಿತವಿರುವ ಬಿಹಾರ ಸಜ್ಜಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಬಿಜು ಜನತಾದಳ ಆಡಳಿತ ನಡೆಸುತ್ತಿರುವ ಒಡಿಶಾದ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ.

ಕೆಲ ದಿನಗಳ ಹಿಂದಷ್ಟೇ ಕೇರಳ ಸಿಎಂ ಪಿಣರಾಯಿ ವಿಜಯನ್‌ ಎನ್‌ಆರ್‌ಸಿ, ಎನ್‌ಪಿಆರ್‌ ವಿರೋಧಿಸಬೇಕೆಂದು ಕೋರಿ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಸೇರಿದಂತೆ 11 ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

click me!