
ಒಡಿಶಾ(ಮೇ.18); ಬಿಗಿ ಲಾಕ್‌ಡೌನ್‌ನಿಂದ ಕೊಂಚ ನಿಯಂತ್ರಣದಲ್ಲಿ ಕೊರೋನಾ ವೈರಸ್ ಇದೀಗ ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಪ್ರಕರಣಗಳು ಹೆಚ್ಚಾಗತೊಡಗಿದೆ. ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರನ್ನು ಆಯಾ ಊರುಗಳಿಗೆ ಕಳುಹಿಸುತ್ತಿದೆ. ಇದರ ಜೊತೆಗೆ ವಿದೇಶದಿಂದಲೂ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಕೊರೋನಾ ಪ್ರಕರಣಗಳು ಹೆಚ್ಚಾಗತೊಡಗಿದೆ. ಆದರೆ ಒಡಿಶಾ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಮುನ್ನಚ್ಚೆರಿಕಾ ಕ್ರಮಗಳು ದೇಶದಲ್ಲೇ ಗಮನ ಸೆಳೆದಿದೆ.
ಡೆಲ್ಲಿಯಿಂದ ನಡೆದೇ ಬಂದ್ರೂ ಮನೆ ಸೇರಿಸಿಕೊಳ್ಳದ ಹೆತ್ತವರು; ಆಮೇಲೆ ಆಗಿದ್ದು ಬೇರೆಯದ್ದೇ ಕಥೆ..!
ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡ ಬೆನ್ನಲ್ಲೇ ಇತ್ತ, ಒಡಿಶಾ ಸರ್ಕಾರ ತುರ್ತು ಸಭೆ ಕೆರದು ಬೇರೆ ಬೇರೆ ರಾಜ್ಯಗಳಿಂದ ಒಡಿಶಾಗೆ ಆಗಮಿಸುವ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆದೇಶಿಸಿದ್ದಾರೆ. ಇದರ ಫಲವಾಗಿ ಆಯಾ ಪಂಚಾಯತ್‌ಗಳಲ್ಲಿ ಕ್ವಾರಂಟೈನ್ ಸೆಂಟರ್ ಹಾಗೂ ನೋಡಲ್ ಅಧಿಕಾರಿಯನ್ನು ನೇಮಿಸಲಾಯಿತು.
ಕೊರೋನಾದಿಂದ ದೇಶದಲ್ಲಿ ಹೆಚ್ಚಾಯ್ತು ಬಡತನ..!
ಗುಜರಾತ್, ಮಹರಾಷ್ಟ್ರ, ಮಧ್ಯಪ್ರದೇಶ, ಸೇರಿದಂತೆ ಹಲವು ರಾಜ್ಯಗಳಲ್ಲಿ ಸುಮಾರ 5 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಒಡಿಶಾಗೆ ಆಗಮಿಸಲು ಸೂಚನೆ ಸಿಕ್ಕಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿತು. ಅತ್ಯುತ್ತಮ ಸೌಲಭ್ಯದ ಕ್ವಾರಂಟೈನ್ ಸೆಂಟರ್, ಕಾರ್ಮಿಕರ ಪಂಚಾಯತ್ ವಲಯದಲ್ಲಿ ಕ್ವಾರಂಟೈನ್ ಸೆಂಟರ್, ಊಟ, ಶೌಚಲಾಯ ಸೇರಿದಂತೆ ಎಲ್ಲವೂ ಅತ್ಯತ್ತಮ ದರ್ಜೆಯಲ್ಲಿರುವಂತೆ ನೋಡಿಕೊಳ್ಳಲಾಯಿತು.
ಇತರ ರಾಜ್ಯಗಳಿಂದ ಒಡಿಶಾಗೆ ಆಗಮಿಸುತ್ತಿದ್ದಂತೆ ನೋಡಲ್ ಅಧಿಕಾರಿಗಳ ತಂಡ ಅವರನ್ನು ಸ್ವೀಕರಿಸಿ, ಅವರ ವಿಳಾಸ ಪಡೆದು ಆಯಾ ಊರುಗಳಿಗೆ ಕಳುಹಿಸಿಕೊಟ್ಟಿತು. ಇನ್ನು ಪಂಚಾಯತ್ ಮಟ್ಟದಲ್ಲಿ ನೇಮಿಸಿದ ಅಧಿಕಾರಿಗಳು ಕಾರ್ಮಿಕರನ್ನು, ವಿದೇಶದಿಂದ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಎಲ್ಲಾ ವ್ಯವಸ್ಥೆ ಮಾಡಿದ್ದರು.
ಹೀಗಾಗಿ ಹೊರ ರಾಜ್ಯ ಹಾಗೂ ವಿದೇಶದಿಂದ ಆಗಮಿಸಿದವರಿಂದ ಕೊರೋನಾ ಒಡಿಶಾದಲ್ಲಿ ಹರದಂತೆ ಹಾಗೂ ಸೋಂಕಿತರು ಶೀಘ್ರದಲ್ಲೇ ಗುಣಮುಖರಾಗುವಂತೆ ನೋಡಿಕೊಳ್ಳಲಾಯಿತು. ಒಡಿಶಾ ಅನುಸರಿಸಿದ ಮಾರ್ಗವನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳು ಅನುಸರಿಸಿದ್ದರೆ, ಇದೀಗ ಕೊರೋನಾ ಸಂಖ್ಯೆ ಹೆಚ್ಚಳವಾಗುತ್ತಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ