ಇಸ್ಲಾಂ ಹೇಳಿದಂತೆ ನೂಪುರ್‌ಳನ್ನು ಕ್ಷಮಿಸಿ: ಜಮಾತ್‌ ಮನವಿ

Published : Jun 14, 2022, 08:55 AM IST
ಇಸ್ಲಾಂ ಹೇಳಿದಂತೆ ನೂಪುರ್‌ಳನ್ನು ಕ್ಷಮಿಸಿ: ಜಮಾತ್‌ ಮನವಿ

ಸಾರಾಂಶ

* ಹಿಂಸಾತ್ಮಕ ಕೃತ್ಯದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಫತ್ವಾ ಜಾರಿ * ಇಸ್ಲಾಂ ಹೇಳಿದಂತೆ ನೂಪುರ್‌ಳನ್ನು ಕ್ಷಮಿಸಿ: ಜಮಾತ್‌ ಮನವಿ * ಹಿಂಸೆಗೆ ಕುಮ್ಮಕ್ಕು ನೀಡಿದವರ ವಿರುದ್ಧ ತನಿಖೆಗೆ ಆಗ್ರಹ

ನವದೆಹಲಿ(ಜೂ.14): ಪ್ರವಾದಿ ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಇಸ್ಲಾಂ ಧರ್ಮದ ಅನುಗುಣವಾಗಿ ಕ್ಷಮಿಸಬೇಕು ಎಂದು ಜಮಾತ್‌ ಉಲಮಾ-ಇ- ಹಿಂದ್‌ ಮುಖ್ಯಸ್ಥ ಸುಹೈಬ್‌ ಖಾಸ್ಮಿ ಹೇಳಿದ್ದಾರೆ.

ನೂಪುರ್‌ ಹೇಳಿಕೆ ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆ, ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಜಮಾತ್‌ ಉಲಮಾ-ಇ- ಹಿಂದ್‌ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು, ‘ಇಸ್ಲಾಂ ಪ್ರಕಾರ ನೂಪುರ್‌ ಶರ್ಮಾ ಅವರನ್ನು ಕ್ಷಮಿಸಬೇಕು. ಶುಕ್ರವಾರ ನಮಾಜ್‌ ಬಳಿಕ ದೇಶಾದ್ಯಂತ ಆರಂಬವಾದ ಹಿಂಸಾಚಾರವನ್ನು ನಾವು ವಿರೋಧಿಸುತ್ತೇವೆ’ ಎಂದು ಖಾಸ್ಮಿ ಹೇಳಿದ್ದಾರೆ.

ಬಿಜೆಪಿ ನೂಪುರ್‌ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದು ಸ್ವಾಹತಾರ್ಹ ನಿರ್ಧಾರವಾಗಿದೆ ಎಂದು ಖಾಸ್ಮಿ ಹೇಳಿದ್ದು, ‘ಭಾರತದ ಕಾನೂನನ್ನು ನಾವು ಗೌರವಿಸುತ್ತೇವೆ. ಕಾನೂನನ್ನು ಕೈಗೆತ್ತುಕೊಳ್ಳಬೇಡಿ’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ನೂಪುರ್‌ ಅವರ ವಿವಾದದ ವಿಚಾರವಾಗಿ ಯಾವುದೇ ಹಿಂಸಾಚಾರ ಕೃತ್ಯದಲ್ಲಿ ಪಾಲ್ಗೊಳ್ಳದಂತೇ ಫತ್ವಾ ಹೊರಡಿಸಲು ಜಮಾತ್‌ ನಿರ್ಧರಿಸಿದೆ. ಅಸಾದುದ್ದೀನ್‌ ಒವೈಸಿ ಹಾಗೂ ಮೊಹಮ್ಮದ್‌ ಮದಾನಿ ಅವರ ವಿರುದ್ಧವಾಗಿಯೂ ಫತ್ವಾ ಹೊರಡಿಸಲಾಗುವುದು ಎಂದು ಜಮಾತ್‌ ತಿಳಿಸಿದೆ.

ಈ ವೇಳೆ, ಹಿಂಸಾತ್ಮಕ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಅಥವಾ ಗಲಭೆಕೋರರಿಗೆ ಆರ್ಥಿಕ ನೆರವು ನೀಡುವ ಮುಸ್ಲಿಂ ಸಂಘಟನೆಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಜಮಾತ್‌ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು
22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ