ಭಾರತದಲ್ಲಿ ಬಡವರ ಸಂಖ್ಯೆ 21% ರಿಂದ 18ಕ್ಕೆ ಇಳಿಕೆ...!

Published : Jul 04, 2024, 10:45 AM ISTUpdated : Jul 04, 2024, 10:51 AM IST
ಭಾರತದಲ್ಲಿ ಬಡವರ ಸಂಖ್ಯೆ 21% ರಿಂದ 18ಕ್ಕೆ ಇಳಿಕೆ...!

ಸಾರಾಂಶ

2011-12 ಸಾಲಿನಲ್ಲಿ ದೇಶದಲ್ಲಿ ಬಡವರ ಸಂಖ್ಯೆ ಶೇ.21 ರಷ್ಟಿತ್ತು. ಅದು ಈಗ ಶೇ.8.5ಕ್ಕೆ ಇಳಿಕೆಯಾಗಿದೆ. ತೀವ್ರ ಬಡತನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರೂ 'ಸ್ವಲ್ಪ ಹೆಚ್ಚು ಕಮ್ಮಿ ಆದರೆ' ಮತ್ತೆ ಬಡತನಕ್ಕೆ ಜಾರುವವರ ಸಂಖ್ಯೆ ಈಗಲೂ ಗಣನೀಯವಾಗಿಯೇ ಇದೆ ಎಂದು ವರದಿ ತಿಳಿಸಿದೆ. 

ನವದೆಹಲಿ(ಜು.04): ದೇಶದಲ್ಲಿ ಬಡವರ ಪ್ರಮಾಣ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ಪ್ರಸಿದ್ದ ಖಾಸಗಿ ಸಂಶೋಧನಾ ಸಂಸ್ಥೆ ಎನ್‌ಸಿಎಇಆ‌ರ್ (ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ) ನ ಮಾನವ ಅಭಿವೃದ್ಧಿ ಸಮೀಕ್ಷೆಯ ವರದಿ ಹೇಳಿದೆ. 2011-12 ಸಾಲಿನಲ್ಲಿ ದೇಶದಲ್ಲಿ ಬಡವರ ಸಂಖ್ಯೆ ಶೇ.21 ರಷ್ಟಿತ್ತು. ಅದು ಈಗ ಶೇ.8.5ಕ್ಕೆ ಇಳಿಕೆಯಾಗಿದೆ. ತೀವ್ರ ಬಡತನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರೂ 'ಸ್ವಲ್ಪ ಹೆಚ್ಚು ಕಮ್ಮಿ ಆದರೆ' ಮತ್ತೆ ಬಡತನಕ್ಕೆ ಜಾರುವವರ ಸಂಖ್ಯೆ ಈಗಲೂ ಗಣನೀಯವಾಗಿಯೇ ಇದೆ ಎಂದು ವರದಿ ತಿಳಿಸಿದೆ. ಎನ್‌ಸಿಎಇಆರ್ ಎಂಬುದು ದೇಶದ ಅತ್ಯಂತ ಹಳೆಯ ಆರ್ಥಿಕ ಹಾಗೂ ಸಾಮಾಜಿಕ ಸಂಶೋಧನೆಗಳಿಗೆ ಸಂಬಂಧಿಸಿದ ಎನ್‌ಜಿಒ ಆಗಿದೆ.

ಇನ್ಫೋಸಿಸ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಇದರ ಅಧ್ಯಕ್ಷರಾಗಿದ್ದು, ಈ ಸಂಸ್ಥೆಯ ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿದ ವರದಿಯಲ್ಲಿ ಭಾರತದಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.

ಗ್ಯಾರಂಟಿಗಾಗಿ ಸಿಎಂ, ಡಿಸಿಎಂ ಬಡವರ ರಕ್ತ ಹೀರುತ್ತಿದ್ದಾರೆ: ಅಶೋಕ್ ಆಕ್ರೋಶ

ತೆಂಡುಲ್ಕರ್ ಸಮಿತಿಯ ಮಾನದಂಡ:

ದೇಶದಲ್ಲಿ ಹಣದುಬ್ಬರವನ್ನು ಆಧರಿಸಿ ಬಡತನದ ಪ್ರಮಾಣವನ್ನು ಅಳೆಯುವ ತೆಂಡುಲ್ಕರ್ ಸಮಿತಿಯ ಮಾನದಂಡಗಳನ್ನು ಆಧರಿಸಿ ಈ ಸಂಸ್ಥೆ ಬಡವರ ಸಂಖ್ಯೆಯನ್ನು ಅಂದಾಜಿಸಿದೆ. ಇದೇ ಮಾನದಂಡವನ್ನು ಆಧರಿಸಿ ಸರ್ಕಾರಗಳು ಕೂಡ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತವೆ. ಆದರೆ, ಬಡತನವನ್ನು ಅಳೆ ಯಲು ವಿಶ್ವಬ್ಯಾಂಕ್ ನಿಗದಿಪಡಿಸಿದ 'ದಿನಕ್ಕೆ 2.15 ಡಾಲರ್ (180 ರು.)ಗಿಂತ ಕಡಿಮೆ ಗಳಿಸು ವವರು ಬಡವರು' ಎಂಬ ಅಂತಾರಾಷ್ಟ್ರೀಯ ಮಾನದಂಡಕ್ಕಿಂತ ತೆಂಡುಲ್ಕರ್ ಸಮಿತಿ ನಿಗದಿಪ ಡಿಸಿದ ಆದಾಯದ ಮಾನದಂಡ ಕಡಿಮೆಯಿದೆ.

ನಗರ ಪ್ರದೇಶದಲ್ಲಿ ಬಡತನ ಕಡಿಮೆ: 

ಮಂಗಳ ವಾರ ಬಿಡುಗಡೆಗೊಂಡ ಈ ವರದಿ ಎನ್ ಸಿಎಇಆರ್ ಥಿಂಕ್‌ ಟ್ಯಾಂಕ್‌ನ ಸೊನಾಲೆ ದೇಸಾಯಿ ಸಿದ್ದಪಡಿಸಿದ ವರದಿಯಾಗಿದೆ. ಅದ ರಲ್ಲಿ ಗ್ರಾಮೀಣ ಪ್ರದೇಶದಲ್ಲಿ 2011ರಲ್ಲಿ ಇದ್ದ ಬಡವರ ಸಂಖ್ಯೆ ಶೇ.24.8ರಿಂದ ಈಗ ಶೇ.8.6ಕ್ಕೆ ಇಳಿಕೆಯಾಗಿದೆ. ನಗರ ಪ್ರದೇಶಗಳಲ್ಲಿ ಇದ್ದ ಬಡವರ ಸಂಖ್ಯೆ ಶೇ.13.4ರಿಂದ ಶೇ.8.4ಕ್ಕೆ ಇಳಿಕೆಯಾಗಿದೆ. ಒಟ್ಟಾರೆ 2011ರಲ್ಲಿ ಶೇ.21ರಷ್ಟಿದ್ದ ಬಡವರ ಸಂಖ್ಯೆ ಈಗ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ.
ಕೆಲ ಸಮಯದ ಹಿಂದೆ ಎಸ್‌ಬಿಐ ರೀಸರ್ಚ್ ಕೂಡ ದೇಶದ ಬಡವರ ಸಂಖ್ಯೆಯನ್ನು ಅಂದಾಜಿ ಸಿತ್ತು. ಅದು ಗ್ರಾಮೀಣ ಪ್ರದೇಶದಲ್ಲಿ ಬಡವರ ಸಂಖ್ಯೆ ಶೇ.7.2ಕ್ಕೆ ಹಾಗೂ ನಗರ ಪ್ರದೇಶಗಳಲ್ಲಿ ಬಡವರ ಸಂಖ್ಯೆ ಶೇ.4.6ಕ್ಕೆ ಇಳಿಕೆಯಾಗಿದೆ ಎಂದು ಹೇಳಿತ್ತು. ಇನ್ನು, ನೀತಿ ಆಯೋಗದ ಸಿಇಒ ಬಿ.ವಿ.ರ್ಆ.ಸುಬ್ರಮಣ್ಯಂ ಅವರು ದೇಶ ದಲ್ಲಿ ಬಡವರ ಸಂಖ್ಯೆ ಶೇ.5ಕ್ಕೆ ಇಳಿಕೆಯಾಗಿದೆ ಎಂದುತ ಎಂದುಹೇಳಿದ್ದರು. ಇವೆರಡೂ ಅಂಕಿಸಂಖ್ಯೆಗಿಂತ ಎನ್‌ಸಿಎಇಆ‌ರ್ ಅಂದಾಜಿಸಿದ ಬಡವರ ಸಂಖ್ಯೆ ಜಾಸ್ತಿಯಿದೆ.

ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಸಮರ್ಥಿಸಿಕೊಳ್ಳುವುದು ನಾಚಿಕೆಗೇಡು: ಮಾಜಿ ಸಚಿವ ಎನ್.ಮಹೇಶ್

ಮತ್ತೆ ಬಡತನ ಏರಬಹುದು:

ಎನ್‌ಸಿಎಇಆರ್ ವರದಿಯಲ್ಲಿ ದೇಶದಲ್ಲಿ ಆಹಾರ ಸಬ್ಸಿಡಿ ಹಾಗೂ ಇನ್ನಿತರ ಸರ್ಕಾರಿನೆರವುಗಳನ್ನು ನೀಡುತ್ತಿರುವುದ ರಿಂದ ಬಡತನದ ಪ್ರಮಾಣ ಕಡಿಮೆಯಾಗಿದೆ. ಆದರೆ, ಅನಾರೋಗ್ಯ, ಮದುವೆ, ನೈಸರ್ಗಿಕ ವಿಪತ್ತಿನಂತಹ ಘಟನೆಗಳು ಸಂಭವಿಸಿದರೆ ಮತ್ತೆ ಬಡತನಕ್ಕೆ ಜಾರುವ ಸಾಧ್ಯತೆಯಿರುವವರ ಸಂಖ್ಯೆ ಸಾಕಷ್ಟಿದೆ. ಹೀಗಾಗಿ ಸರ್ಕಾರಗಳು ಸಾಮಾಜಿಕ ಭದ್ರತೆಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ಹೇಳಲಾಗಿದೆ.

ವರದಿಯಲ್ಲೇನಿದೆ?

. 2011ರಲ್ಲಿ ಗ್ರಾಮೀಣ ಭಾಗದಲ್ಲಿ ಬಡವರ ಸಂಖ್ಯೆ ಶೇ.24.8ರಷ್ಟಿತ್ತು. ಅದು ಈಗ ಶೇ.8.6ಕ್ಕಿಳಿಕೆ
• ನಗರ ಪ್ರದೇಶಗಳಲ್ಲಿ ಆಗ ಬಡತನದ ಪ್ರಮಾಣ ಶೇ.21ರಷ್ಟಿತ್ತು. ಈಗ ಶೇ.8.5ಕ್ಕೆ ಇಳಿಕೆಯಾಗಿದೆ
• ಆಹಾರ ಸಬ್ಸಿಡಿ, ಸರ್ಕಾರಿ ನೆರವುಗಳಿಂದಾಗಿ ದೇಶದಲ್ಲಿ ಬಡತನ ಪ್ರಮಾಣ ಕಡಿಮೆಯಾಗಿದೆ
• ಸರ್ಕಾರಗಳು ಸಾಮಾಜಿಕ ಭದ್ರತೆಗೆ ಒತ್ತು ನೀಡದೆ ಹೋದರೆ ಮತ್ತೆ ಬಡತನ ಹೆಚ್ಚುವ ಸಂಭವ
• ಹಣದುಬ್ಬರ ಆಧರಿಸಿ ಬಡತನ ಪ್ರಮಾಣ ಅಳೆದಿದ್ದ ತೆಂಡುಲ್ಕರ್ ಸಮಿತಿ ಮಾನದಂಡ ಆಧರಿಸಿ ವರದಿ
• ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ ಎಂಬ ಎನ್‌ಜಿಒ ಸಿದ್ಧಪಡಿಸಿರುವ ವರದಿ
. ಈ ಎನ್‌ಜಿಒಗೆ ಇನ್ಫೋಸಿಸ್‌ನ ನಂದನ್ ನಿಲೇಕಣಿ ಇದರ ಅಧ್ಯಕ್ಷರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು