15 ರಾಜ್ಯದ 46 ವಿಧಾನಸಭೆ, 2 ಲೋಕಸಭಾ ಸ್ಥಾನದ ರಿಸಲ್ಟ್‌ ಏನಾಯ್ತು? ಇಲ್ಲಿದೆ ಸಂಪೂರ್ಣ ವಿವರ

Published : Nov 23, 2024, 05:54 PM ISTUpdated : Nov 23, 2024, 06:57 PM IST
15 ರಾಜ್ಯದ 46 ವಿಧಾನಸಭೆ, 2 ಲೋಕಸಭಾ ಸ್ಥಾನದ ರಿಸಲ್ಟ್‌ ಏನಾಯ್ತು? ಇಲ್ಲಿದೆ ಸಂಪೂರ್ಣ ವಿವರ

ಸಾರಾಂಶ

15 ರಾಜ್ಯಗಳ 46 ವಿಧಾನಸಭೆ ಮತ್ತು 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಯನಾಡ್‌ನಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಮೈತ್ರಿಕೂಟ 24 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಚುನಾವಣೆಗೂ ಮುನ್ನ ಪ್ರತಿಪಕ್ಷಗಳು ಹೊಂದಿದ್ದ 27 ಸ್ಥಾನಗಳ ಪೈಕಿ ಬಿಜೆಪಿ ಹಲವು ಸ್ಥಾನಗಳನ್ನು ಗಳಿಸಿದೆ.

ನವದೆಹಲಿ (ನ.23): ಇಂದು ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಮಾತ್ರವಲ್ಲದೆ, ದೇಶದ 15 ರಾಜ್ಯಗಳಲ್ಲಿ 46 ವಿಧಾನಸಭೆ ಹಾಗೂ 2 ಲೋಕಸಭೆ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಕೂಡ ಪ್ರಕಟವಾಗಿದೆ. ಪ್ರಿಯಾಂಕಾ ಗಾಂಧಿ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ 4 ಲಕ್ಷ ಮತಗಳ ಅಂತರದಿಂದ ಗೆದ್ದು ಇದೇ ಮೊದಲ ಬಾರಿಗೆ ಲೋಕಸಭೆಗೆ ಕಾಲಿಡಲಿದ್ದಾರೆ. ಇಲ್ಲಿ ಸಿಪಿಐನ ಸತ್ಯನ್‌ ಮೋಕೆರಿ 2ನೇ ಸ್ಥಾನ ಪಡೆದುಕೊಂಡಿದ್ದರೆ, ಬಿಜೆಪಿಯ ನವ್ಯಾ ಹರಿದಾಸ್‌ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಅರಣ್ಯ ಸಚಿವ ರಾಮನಿವಾಸ್ ರಾವತ್ ಮಧ್ಯಪ್ರದೇಶದ ವಿಜಯಪುರ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಉತ್ತರ ಪ್ರದೇಶದ 9 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ ಮೈತ್ರಿಕೂಟ 7 ಸ್ಥಾನಗಳನ್ನು ಗೆದ್ದಿದ್ದರೆ, ಎಸ್‌ಪಿ 2 ಸ್ಥಾನಗಳನ್ನು ಗೆದ್ದಿದೆ.

46 ಸ್ಥಾನಗಳ ಮತ ಎಣಿಕೆಯಲ್ಲಿ ಬಿಜೆಪಿ ಮೈತ್ರಿಕೂಟ 24, ಕಾಂಗ್ರೆಸ್ 7, ಟಿಎಂಸಿ 6, ಎಸ್‌ಪಿ 3, ಎಎಪಿ 3, ಸಿಪಿಐ-ಎಂ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮತ್ತು ಭಾರತ್ ಆದಿವಾಸಿ ಪಕ್ಷ ತಲಾ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮೈತ್ರಿಕೂಟದಲ್ಲಿ ಜೆಡಿಯು, ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ), ಅಸ್ಸಾಂ ಗಣ ಪರಿಷತ್ (ಎಜಿಪಿ), ಯುನೈಟೆಡ್ ಪೀಪಲ್ಸ್ ಪಾರ್ಟಿ (ಯುಪಿಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಸೇರಿವೆ.

ಚುನಾವಣೆಗೂ ಮುನ್ನ ಈ 46 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಪ್ರತಿಪಕ್ಷಗಳು ಆಕ್ರಮಿಸಿಕೊಂಡಿದ್ದವು. ಈ ಪೈಕಿ 13 ಸ್ಥಾನಗಳನ್ನು ಕಾಂಗ್ರೆಸ್ ಮಾತ್ರ ಹೊಂದಿತ್ತು. ಅದೇ ಸಮಯದಲ್ಲಿ, ಎನ್‌ಡಿಎ ಬಿಜೆಪಿಯ 11 ಸ್ಥಾನಗಳು ಸೇರಿದಂತೆ ಒಟ್ಟು 17 ಸ್ಥಾನಗಳನ್ನು ಹೊಂದಿತ್ತು.

ಲೋಕಸಭೆ ಉಪಚುನಾವಣೆ ಫಲಿತಾಂಶ

ವಯನಾಡ್‌ (ಕೇರಳ)ಪ್ರಿಯಾಂಕಾ ಗಾಂಧಿ ವಾದ್ರಾಕಾಂಗ್ರೆಸ್‌ಗೆಲುವು
ನಾಂದೇಡ್‌ (ಮಹಾರಾಷ್ಟ್ರ)ಸಂತುಕ್ರಾವ್ ಮರೋತ್ರಾವ್ ಹಂಬಾರ್ಡೆಬಿಜೆಪಿಗೆಲುವು


ಉಪಚುನಾವಣೆ ಫಲಿತಾಂಶ

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಉತ್ತರ ಪ್ರದೇಶಗಾಜಿಯಾಬಾದ್ಸಂಜೀವ್ ಶರ್ಮಾಬಿಜೆಪಿಗೆಲುವು
ಕರ್ಹಾಲ್ತೇಜ್ ಪ್ರತಾಪ್ ಸಿಂಗ್ಎಸ್‌ಪಿಗೆಲುವು
ಕಾಟೇಹಾರಿಧರ್ಮರಾಜ್ ನಿಶಾದ್ಬಿಜೆಪಿಗೆಲುವು
ಖೇರ್ (SC)ಸುರೇಂದರ್ ದಿಲೇರ್ಬಿಜೆಪಿಗೆಲುವು
ಕುಂದರ್ಕಿರಾಮವೀರ್ ಸಿಂಗ್ಬಿಜೆಪಿಗೆಲುವು
ಮಜವಾನ್ಶುಚಿಸ್ಮಿತಾ ಮೌರ್ಯಬಿಜೆಪಿಗೆಲುವು
ಫುಲ್ಪುರ್ದೀಪಕ್ ಪಟೇಲ್ಬಿಜೆಪಿಗೆಲುವು
ಮೀರಾಪುರಮಿಥ್ಲೇಶ್ ಪಾಲ್ಆರ್‌ಎಲ್‌ಡಿಗೆಲುವು
ಸಿಶಾಮೌನಸೀಮ್ ಸೋಲಂಕಿಎಸ್‌ಪಿಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಅಸ್ಸಾಂಬೆಹಲಿದಿಗಂತ ಘಾಟೋವಾಲ್ಬಿಜೆಪಿಗೆಲುವು
ಬೊಂಗೈಗಾಂವ್ದೀಪ್ತಿಮಯೀ ಚೌಧರಿಎಜಿಪಿಗೆಲುವು
ಧೋಲೈ (SC)ನಿಹಾರ್ ರಂಜನ್ ದಾಸ್ಬಿಜೆಪಿಗೆಲುವು
ಸಮಗುರಿತಂಝಿಲ್ ಹುಸೇನ್ಕಾಂಗ್ರೆಸ್‌ಮುನ್ನಡೆ
ಸಿಡಿಲಿ (ಎಸ್ಟಿ)ನಿರ್ಮಲ್ ಕುಮಾರ್ ಬ್ರಹ್ಮಯುಪಿಪಿಎಲ್ಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಬಿಹಾರಬೆಳಗಂಜ್ಮನೋರಮಾ ದೇವಿಜೆಡಿಯುಗೆಲುವು
ಇಮಾಮ್‌ಗಂಜ್ (SC)ದೀಪಾ ಕುಮಾರಿಎಚ್‌ಎಎಂಎಸ್‌ಗೆಲುವು
ರಾಮಗಢಅಶೋಕ್ ಕುಮಾರ್ ಸಿಂಗ್ಬಿಜೆಪಿಗೆಲುವು
ತರಾರಿವಿಶಾಲ್ ಪ್ರಶಾಂತ್ಬಿಜೆಪಿಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಗುಜರಾತ್‌ವಾವ್ಠಾಕೋರ್ ಸ್ವರೂಪಜಿ ಸರ್ದಾರ್ಜಿಬಿಜೆಪಿಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಕರ್ನಾಟಕಚನ್ನಪಟ್ಟಣಸಿ ಪಿ ಯೋಗೇಶ್ವರಕಾಂಗ್ರೆಸ್‌ಗೆಲುವು
ಸಂಡೂರು (ST) ಅನ್ನಪೂರ್ಣ ತುಕಾರಾಂಕಾಂಗ್ರೆಸ್‌ಗೆಲುವು
ಶಿಗ್ಗಾಂವ್ಪಠಾಣ್‌ ಯಾಸಿರ್‌ ಅಹ್ಮದ್‌ ಖಾನ್‌ಕಾಂಗ್ರೆಸ್‌ಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಕೇರಳಚೇಲಕ್ಕರ (SC)ಯು ಆರ್ ಪ್ರದೀಪ್ಸಿಪಿಎಂಗೆಲುವು
ಪಾಲಕ್ಕಾಡ್ರಾಹುಲ್ ಮಮ್ಕೂಟತಿಲ್ಕಾಂಗ್ರೆಸ್‌ಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಮಧ್ಯಪ್ರದೇಶಬುಧ್ನಿರಮಾಕಾಂತ್ ಭಾರ್ಗವಬಿಜೆಪಿಗೆಲುವು
ವಿಜಯಪುರಮುಖೇಶ್ ಮಲ್ಹೋತ್ರಾಕಾಂಗ್ರೆಸ್‌ಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಮೇಘಾಲಯಗ್ಯಾಂಬೆಗ್ರೆ (ST)ಮೆಹ್ತಾಬ್ ಚಂದೀ ಅಗಿತೋಕ್ ಸಂಗ್ಮಾಎನ್‌ಪಿಪಿಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಪಂಜಾಬ್‌ಬರ್ನಾಲಾಕುಲದೀಪ್ ಸಿಂಗ್ ಧಿಲ್ಲೋನ್ ಕಾಂಗ್ರೆಸ್‌ಗೆಲುವು
ಚಬ್ಬೇವಾಲ್ (SC).ಇಶಾಂಕ್ ಕುಮಾರ್ಆಪ್ಗೆಲುವು
ಡೇರಾ ಬಾಬಾ ನಾನಕ್ಗುರುದೀಪ್ ಸಿಂಗ್ ರಾಂಧವಾಆಪ್ಗೆಲುವು
ಗಿಡ್ಡರ್ಬಹಾಹರ್ದೀಪ್ ಸಿಂಗ್ ಡಿಂಪಿ ಧಿಲ್ಲೋನ್ಆಪ್ಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ರಾಜಸ್ಥಾನಚೋರಸಿಅನಿಲ್ ಕುಮಾರ್ ಕಟಾರಬಿಎಡಿವಿಪಿಗೆಲುವು
ದೌಸಾದೀನ್ ದಯಾಳ್ಕಾಂಗ್ರೆಸ್‌ಗೆಲುವು
ದಿಯೋಲಿರಾಜೇಂದ್ರ ಗುರ್ಜರ್ಬಿಜೆಪಿಗೆಲುವು
ಜುಂಜುನುರಾಜೇಂದ್ರ ಭಂಬೂಬಿಜೆಪಿಗೆಲುವು
ಖಿಂವ್ಸರ್ರೇವಂತ್ ರಾಮ್ ದಂಗಾಬಿಜೆಪಿಗೆಲುವು
ರಾಮಗಢಸುಖವಂತ್ ಸಿಂಗ್ಬಿಜೆಪಿಗೆಲುವು
ಸಾಲಂಬರ್ (ST)ಶಾಂತಾ ಅಮೃತ್ ಲಾಲ್ ಮೀನಾಬಿಜೆಪಿಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಸಿಕ್ಕಿಂನಮ್ಚಿಸತೀಶ್ ಚಂದ್ರ ರೈಎಸ್‌ಕೆಎಂಗೆಲುವು
ಸೊರೆಂಗ್ಆದಿತ್ಯ ಗೋಲೆ (ತಮಾಂಗ್)ಎಸ್‌ಕೆಎಂಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಪಶ್ಚಿಮ ಬಂಗಾಳಹರೋವಾಎಸ್‌ಕೆ ರಬಿಯುಲ್ ಇಸ್ಲಾಂಟಿಎಂಸಿಗೆಲುವು
ಮದರಿಹತ್ (ST)ಜಯಪ್ರಕಾಶ್ ಟೊಪ್ಪೊಟಿಎಂಸಿಗೆಲುವು
ಮೇದಿನಿಪುರ್ಸುಜೋಯ್ ಹಜ್ರಾಟಿಎಂಸಿಗೆಲುವು
ನೈಹತಿಸನತ್ ದೇಟಿಎಂಸಿಗೆಲುವು
ಸೀತಾಯಿ (SC)ಸಂಗೀತಾ ರಾಯ್ಟಿಎಂಸಿಗೆಲುವು
ತಾಲ್ದಂಗ್ರಾಫಲ್ಗುಣಿ ಸಿಂಗಬಾಬುಟಿಎಂಸಿಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಛತ್ತೀಸ್‌ಗಢರಾಯಪುರ ನಗರ ದಕ್ಷಿಣಸುನೀಲ್ ಕುಮಾರ್ ಸೋನಿಬಿಜೆಪಿಗೆಲುವು

 

ರಾಜ್ಯಕ್ಷೇತ್ರಅಭ್ಯರ್ಥಿಪಕ್ಷಸ್ಥಿತಿ
ಉತ್ತರಾಖಂಡಕೇದಾರನಾಥ್ಆಶಾ ನೌಟಿಯಲ್ಬಿಜೆಪಿಗೆಲುವು

 

ಇದನ್ನೂ ಓದಿ: ಸುಳ್ಳಾಯ್ತು ಎಕ್ಸಿಟ್ ಪೋಲ್ ಭವಿಷ್ಯ; ಮೂರಕ್ಕೆ ಮೂರು ಕ್ಷೇತ್ರ ಗೆದ್ದ ಕಾಂಗ್ರೆಸ್ ಗ್ಯಾರಂಟಿ!

ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಹೇಮಂತ್‌ ಕೈಹಿಡಿದ INDIA ಮಹಿಳೆಯರು, ವರ್ಕ್‌ ಆಗದ ಬಿಜೆಪಿಯ ಮಾಟಿ, ಬೇಟಿ, ರೋಟಿ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಸ್ವತಃ ಏರ್‌ಪೋರ್ಟಿಗೇ ತೆರಳಿ ಪುಟಿನ್‌ಗೆ ಪ್ರಧಾನಿ ಮೋದಿ ಅಚ್ಚರಿಯ ಸ್ವಾಗತ
ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು