ಈಶಾನ್ಯ ಭಾರತದ ರಾಜ್ಯಗಳು ಅಷ್ಟಲಕ್ಷ್ಮಿಯರಿದ್ದಂತೆ: ನರೇಂದ್ರ ಮೋದಿ

By Kannadaprabha NewsFirst Published Dec 19, 2022, 11:28 AM IST
Highlights

ಈಶಾನ್ಯದ 8 ರಾಜ್ಯಗಳನ್ನು ಅಷ್ಟಲಕ್ಷ್ಮಿಯರಿದ್ದಂತೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ರಾಜ್ಯಗಳ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಎಲ್ಲಾ ಅಡೆತಡೆಗಳನ್ನು ತಮ್ಮ ಸರ್ಕಾರ ಕಳೆದ 8 ವರ್ಷಗಳಲ್ಲಿ ತೊಡೆದುಹಾಕಿದೆ’ ಎಂದು ಹೇಳಿದ್ದಾರೆ.

ಶಿಲ್ಲಾಂಗ್‌: ಈಶಾನ್ಯದ 8 ರಾಜ್ಯಗಳನ್ನು ಅಷ್ಟಲಕ್ಷ್ಮಿಯರಿದ್ದಂತೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ರಾಜ್ಯಗಳ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಎಲ್ಲಾ ಅಡೆತಡೆಗಳನ್ನು ತಮ್ಮ ಸರ್ಕಾರ ಕಳೆದ 8 ವರ್ಷಗಳಲ್ಲಿ ತೊಡೆದುಹಾಕಿದೆ’ ಎಂದು ಹೇಳಿದ್ದಾರೆ. ಮೇಘಾಲಯ ಹಾಗೂ ಶಿಲ್ಲಾಂಗ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ, ಈಶಾನ್ಯ ಮಂಡಳಿಯ (ನಾಥ್‌ ಈಸ್ಟ್‌ ಕೌನ್ಸಿಲ್‌- ಎನ್‌ಇಸಿ) ಸ್ವರ್ಣಮಹೋತ್ಸವ ಸಮಾರಂಭದಲ್ಲಿ ಭಾನುವಾರ ಶಿಲ್ಲಾಂಗ್‌ನಲ್ಲಿ ಮಾತನಾಡಿದರು. ‘ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಭ್ರಷ್ಟಾಚಾರ, ತಾರತಮ್ಯ, ಹಿಂಸಾಚಾರ, ವೋಟ್‌ ಬ್ಯಾಂಕ್‌ ರಾಜಕೀಯಕ್ಕೆ ನಾವು ರೆಡ್‌ಕಾರ್ಡ್‌ ತೋರಿಸಿದ್ದೇವೆ. ಈ ಮೊದಲು ಈಶಾನ್ಯದ ರಾಜ್ಯಗಳನ್ನು ವಿಭಜಿಸುವ ಯತ್ನ ಮಾಡಲಾಗುತ್ತಿತ್ತು. ಈ ವಿಭಜನೆಯನ್ನು ನಾವು ತೆಗೆದುಹಾಕಿದ್ದೇವೆ’ ಎಂದು ಹೇಳಿದರು. 

‘ಈಶಾನ್ಯ ರಾಜ್ಯಗಳು (North-Eastern states) ಆಗ್ನೇಯ ಏಷ್ಯಾಕ್ಕೆ (South-East Asia) ನಮ್ಮ ರಹದಾರಿಯಿದ್ದಂತೆ. ಇವು ಇಡೀ ವಲಯದ ಅಭಿವೃದ್ಧಿಯ ಕೇಂದ್ರಬಿಂದುವಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿವೆ. ಈ ಸಂಭಾವ್ಯತೆಯನ್ನು ನನಸಾಗಿಸಲು ಈಗಾಗಲೇ ಭಾರತ ಮ್ಯಾನ್ಮಾರ್‌ ಥಾಯ್ಲೆಂಡ್‌ ತ್ರಿಪಕ್ಷೀಯ ಹೆದ್ದಾರಿ (India Myanmar Thailand Trilateral Highway) ಮತ್ತು ಅಗರ್ತಲಾ ಅಖೌರಾ ರೈಲು ಯೋಜನೆಗಳನ್ನು (Agartala Akhaura Rail projects) ಜಾರಿಗೊಳಿಸಲಾಗುತ್ತಿದೆ. ಇದರ ಜೊತೆಗೆ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸರ್ಕಾರವು 8 ಆಧಾರಸ್ತಂಭಗಳಾದ ಶಾಂತಿ (peace), ಇಂಧನ (energy), ಪ್ರವಾಸೋದ್ಯಮ, 5ಜಿ, ಸಂಸ್ಕೃತಿ, ನೈಸರ್ಗಿಕ ಕೃಷಿ (natural agriculture), ಕ್ರೀಡೆ ಮತ್ತು ಸಂಭಾವ್ಯತೆಯನ್ನು ಮುಂದಿಟ್ಟು ಕಾರ್ಯಯೋಜನೆ ರೂಪಿಸಬೇಕು’ ಎಂದು ಕರೆಕೊಟ್ಟರು.

ಜಾಗತಿಕ ದುರಂತವನ್ನು ಮೋದಿ ತಪ್ಪಿಸಿದರು: ಅಮೆರಿಕ ಪ್ರಶಂಸೆ

ಇದೇ ವೇಳೆ ಕಳೆದ 8 ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 9ರಿಂದ 16ಕ್ಕೆ ಹೆಚ್ಚಿಸಲಾಗಿದೆ. ವಿಮಾನಗಳ ಸಂಖ್ಯೆ 900ರಿಂದ 1900ಕ್ಕೆ ತಲುಪಿದೆ. ಹಲವು ರಾಜ್ಯಗಳು ಹೊಸದಾಗಿ ರೈಲ್ವೆ ಸಂಪರ್ಕ ಪಡೆದಿವೆ. ರಾಷ್ಟ್ರೀಯ ಹೆದ್ದಾರಿಯ ಪ್ರಮಾಣದಲ್ಲಿ ಶೆ.50ರಷ್ಟು ಹೆಚ್ಚಳವಾಗಿದೆ ಎಂದು ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಇದೇ ವೇಳೆ ಅವರು ಐಐಎಂ ಶಿಲ್ಲಾಂಗ್‌ ಕ್ಯಾಂಪಸ್‌ಗೆ ಚಾಲನೆ ನೀಡಿದರು. ಜೊತೆಗೆ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಈಶಾನ್ಯ ಮಂಡಳಿ ಕೈಗೊಂಡ ಕ್ರಮಗಳ ಕುರಿತ ಪುಸ್ತಕ ಬಿಡುಗಡೆ ಮಾಡಿದರು. ಜೊತೆಗೆ ಮಂಡಳಿಯ 50 ವರ್ಷಗಳ ಸಾಧನೆಯ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

8 ವರ್ಷಗಳಲ್ಲಿ ಅಶಾಂತಿ, ಭ್ರಷ್ಟಾಚಾರಕ್ಕೆ ರೆಡ್ ಕಾರ್ಡ್ ನೀಡಿದ್ದೇವೆ: ಪ್ರಧಾನಿ ಮೋದಿ

ತ್ರಿಪುರಾಗೂ ಭೇಟಿ:

ಶಿಲ್ಲಾಂಗ್‌ ಭೇಟಿ ಬಳಿಕ ತ್ರಿಪುರಾಕ್ಕೆ ತೆರಳಿದ ಪ್ರಧಾನಿ ಮೋದಿ ಅಲ್ಲಿ 4350 ಕೋಟಿ ರು. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
 

click me!