ನಾಯಿಗಳ ಬಳಸಿ ಕೋವಿಡ್‌ ಪರೀಕ್ಷೆ, 22 ಯೋಧರಲ್ಲಿ ಸೋಂಕು ಪತ್ತೆ!

Published : Feb 10, 2021, 07:18 AM IST
ನಾಯಿಗಳ ಬಳಸಿ ಕೋವಿಡ್‌ ಪರೀಕ್ಷೆ, 22 ಯೋಧರಲ್ಲಿ ಸೋಂಕು ಪತ್ತೆ!

ಸಾರಾಂಶ

ನಾಯಿಗಳ ಬಳಸಿ ಕೋವಿಡ್‌ ಪರೀಕ್ಷೆ| 22 ಯೋಧರಲ್ಲಿ ಕೊರೋನಾ ಪತ್ತೆ| ಭಾರತದಲ್ಲಿ ಮೊದಲ ಬಾರಿಗೆ ನಾಯಿಗಳ ಬಳಸಿ ಸೋಂಕು ಪತ್ತೆ

ನವದೆಹಲಿ(ಫೆ.10): ಕೋವಿಡ್‌ ಸೋಂಕು ಪತ್ತೆಗೆ ಆರ್‌ಟಿ-ಪಿಸಿಆರ್‌, ಆ್ಯಂಟಿಜೆನ್‌ ಪರೀಕ್ಷೆ ನಡೆಸುವುದು ಗೊತ್ತು. ಇದಕ್ಕೆ ಕನಿಷ್ಠ ಅರ್ಧಗಂಟೆಯಿಂದ ಗರಿಷ್ಠ 24 ಗಂಟೆಯವರೆಗೂ ಸಮಯ ಬೇಕಾಗುತ್ತದೆ. ಆದರೆ ಭಾರತೀಯ ಸೇನಾಪಡೆ, ತನ್ನ ವಿಶೇಷ ನಾಯಿಗಳನ್ನು ಬಳಸಿ ಕೇವಲ ಕೆಲವೇ ಸೆಕೆಂಡ್‌ಗಳಲ್ಲಿ ಕೋವಿಡ್‌ ಪತ್ತೆ ಪರೀಕ್ಷೆ ನಡೆಸುತ್ತಿದೆ. ಹಲವು ವಿದೇಶಗಳಲ್ಲಿ ಈ ರೀತಿ ನಾಯಿಗಳ ಮೂಲಕ ಕೊರೋನಾ ಪತ್ತೆ ಮಾಡುವುದು ಜಾರಿಯಲ್ಲಿ ಇದೆಯಾದರೂ, ಭಾರತದಲ್ಲಿದು ಇದೇ ಮೊದಲು.

ಲಡಾಖ್‌ ಮತ್ತು ಕಾಶ್ಮೀರದ ವಿವಿಧ ಭಾಗಗಳಿಗೆ ನಿಯೋಜನೆಗೊಳ್ಳುವ ಮೊದಲು ಯೋಧರು ದಿಲ್ಲಿ ಹಾಗೂ ಚಂಡೀಗಢದ ಟ್ರಾನ್ಸಿಟ್‌ ಕ್ಯಾಂಪ್‌ಗಳಿಗೆ ಹಾಜರಾಗುತ್ತಾರೆ. ಅಲ್ಲಿಗೆ ಬರುವ ಯೋಧರಿಗೆ ತಕ್ಷಣವೇ ಪರೀಕ್ಷೆ ನಡೆಸಿ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಶ್ವಾನಗಳನ್ನು ಬಳಕೆ ಮಾಡಲಾಗುತ್ತಿದೆ.

ಇದಕ್ಕಾಗಿಯೇ 2 ವರ್ಷದ ಕ್ಯಾಸ್ಪರ್‌ ಮತ್ತು 1 ವರ್ಷದ ಜಯಾ ಎಂಬ ತಮಿಳುನಾಡಿನ ‘ಚಿಪ್ಪಿಪಾರೈ’ ತಳಿಯ ಎರಡು ಪುಟ್ಟನಾಯಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಈ ನಾಯಿ ಮರಿಗಳು 3800 ಮಾದರಿಗಳನ್ನು (ದಿಲ್ಲಿಯಲ್ಲಿ 800 ಹಾಗೂ ಚಂಡೀಗಢದಲ್ಲಿ 3000 ಮಾದರಿ) ಪರೀಕ್ಷಿಸಿ, ಅವುಗಳ ಪೈಕಿ 22 ಜನರಲ್ಲಿ ಸೋಂಕು ಬಂದಿರುವುದನ್ನು ಅತ್ಯಂತ ಕರಾರ್‌ವಾಕ್‌ ಆಗಿ ಕೆಲವೇ ಸೆಕೆಂಡ್‌ಗಳಲ್ಲಿ ಪತ್ತೆ ಮಾಡಿವೆ.

ಮಂಗಳವಾರ ದಿಲ್ಲಿಯ ಕಂಟೋನ್ಮೆಂಟ್‌ ಸೇನಾ ಪಶುವೈದ್ಯ ಆಸ್ಪತ್ರೆಯಲ್ಲಿ ಇವುಗಳಿಂದ ‘ಕೋವಿಡ್‌ ಪತ್ತೆ’ ಪ್ರದರ್ಶನ ನಡೆಯಿತು.

ಪತ್ತೆ ಹೇಗೆ?:

ಕೋವಿಡ್‌ ವೈರಸ್‌ಗಳು ದೇಹದಲ್ಲಿ ಜೀವಕೋಶಗಳ ಮೇಲೆ ದಾಳಿ ನಡೆಸಿ ಹಾನಿ ಮಾಡುತ್ತವೆ. ಪರಿಣಾಮ ದೇಹದಲ್ಲಿ ಒಂದಿಷ್ಟುರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವು ಸಾಮಾನ್ಯ ರಾಸಾಯನಿಕಗಳಿಗಿಂತ ವಿಭಿನ್ನವಾಗಿರುತ್ತವೆ. ಇವು ಬೆವರಿನ ಮೂಲಕ ಮತ್ತು ಮೂತ್ರದ ಮೂಲಕ ಹೊರಬರುತ್ತದೆ. ಇವುಗಳ ಮಾದರಿಯನ್ನು ಮೊದಲು ನಾಯಿಗಳಿಗೆ ಪರಿಚಯಿಸಿ, ಬಳಿಕ ಅವುಗಳಿಗೆ ಅಂಥದ್ದೇ ವಾಸನೆ ಪತ್ತೆಯಾದರೆ ಮಾಹಿತಿ ನೀಡುವ ತರಬೇತಿ ನೀಡಲಾಗಿರುತ್ತದೆ. ಹೀಗೆ ಯೋಧರ ಮೂತ್ರದ ಮಾದರಿಯನ್ನು ನಾಯಿಗಳು ಆಘ್ರಾಣಿಸುತ್ತಲೇ ಅವುಗಳಿಗೆ ಇದರ ಸುಳಿವು ಸಿಗುತ್ತದೆ. ಕೂಡಲೇ ಅವು ಅಂಥ ಮಾದರಿ ಇರುವ ಬಾಕ್ಸ್‌ಗಳ ಪಕ್ಕ ಹೋಗಿ ಕೂರುತ್ತದೆ.

ವಿಶೇಷ ತರಬೇತಿ:

ಇಂಥ ತರಬೇತಿ ನೀಡಲು ಸಾಮಾನ್ಯವಾಗಿ 36 ವಾರ ಬೇಕಾಗುತ್ತದೆ. ಆದರೆ ಕ್ಯಾಸ್ಪರ್‌ ಮತ್ತು ಜಯಾಗೆ ಕೇವಲ 16 ವಾರಗಳಲ್ಲೇ ಇಂಥ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಇದೇ ರೀತಿ ಇನ್ನೂ 10 ನಾಯಿಗಳನ್ನು ಕೋವಿಡ್‌ ಪರೀಕ್ಷೆ ನಡೆಸುವ ತರಬೇತಿಗೆ ಒಳಪಡಿಸಲಾಗುತ್ತಿದೆ.

ಭಾರತದಲ್ಲಿ ಮೊದಲು:

ಬ್ರಿಟನ್‌, ಅಮೆರಿಕ, ಯುಎಇ, ಫ್ರಾನ್ಸ್‌ ಸೇರಿ ಕೆಲವು ದೇಶಗಳಲ್ಲಿ ಈಗಾಗಲೇ ಕೋವಿಡ್‌ ಪರೀಕ್ಷೆ ನಡೆಸಲು ನಾಯಿಗಳನ್ನು ಬಳಕೆ ಮಾಡಲಾಗುತ್ತಿದೆಯಾದರೂ, ಭಾರತದಲ್ಲಿ ಇಂಥ ಪ್ರಯೋಗ ಇದೇ ಮೊದಲು.್ತ ಅದನ್ನು ಸದ್ಯ ಸೇನೆಗೆ ಮಾತ್ರ ಸೀಮಿತ ಮಾಡಲಾಗಿದೆ. ಯೋಧರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗುತ್ತದೆಯಾದರೂ, ಅದರ ವರದಿ ಆಗಮನಕ್ಕೂ ಮುನ್ನವೇ ಸಂಶಯಾಸ್ಪದರನ್ನು ಪ್ರತ್ಯೇಕವಾಗಿ ಇಡಲು ಶ್ವಾನಗಳ ಬಳಕೆ ಮಾಡಲಾಗುತ್ತಿದೆ.

ಇದುವರೆಗೆ ಭಾರತದಲ್ಲಿ ಸಶಸ್ತ್ರ ಪಡೆಗಳ 20000ಕ್ಕೂ ಹೆಚ್ಚು ಮತ್ತು ಭಾರತೀಯ ಸೇನೆಯ 16000ಕ್ಕೂ ಹೆಚ್ಚು ಯೋಧರಿಗೆ ಕೋವಿಡ್‌ ಸೋಂಕು ತಗುಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ