ಇದು ಓಯೋ ಅಲ್ಲ ಕಾರಿನೊಳಗೆ ನೋ ರೊಮ್ಯಾನ್ಸ್, ಕ್ಯಾಬ್ ಚಾಲಕನ ನೋಟಿಸ್‌ಗೆ ಭಾರಿ ಮೆಚ್ಚುಗೆ!

By Chethan KumarFirst Published Oct 21, 2024, 5:26 PM IST
Highlights

 ಕಾರಿನೊಳಗೆ ಚುಂಬನ, ಅಪ್ಪುಗೆ, ರೊಮ್ಯಾನ್ಸ್‌ಗೆ ಅವಕಾಶವಿಲ್ಲ. ತಿಳಿದಿರಲಿ, ಇದು ಕ್ಯಾಬ್ ನಿಮ್ಮ ಒಯೊ ರೂಮ್ ಅಲ್ಲ.  ಕ್ಯಾಬ್‌ನಲ್ಲಿ ಜೋಡಿಗಳ ಸರಸ ಸಲ್ಲಾಪಕ್ಕೆ ಕ್ಯಾಬ್ ಚಾಲಕ ಅಂಟಿಸಿದ ನೋಟಿಸ್ ಇದೀಗ ಭಾರಿ ಸದ್ದು ಮಾಡುತ್ತಿದೆ.

ಹೈದರಾಬಾದ್(ಅ.21) ಕಾರಿನೊಳಗೆ ರೊಮ್ಯಾನ್ಸ್, ಕ್ಯಾಬ್‌ ಪ್ರಯಾಣದಲ್ಲಿ ಚುಂಬನ, ಅಪ್ಪುಗೆ ವಿಡಿಯೋಗಳು ಈಗಾಗಲೇ ಎಲ್ಲೆಡೆ ಹರಿದಾಡಿದೆ. ಇತ್ತೀಚೆಗೆ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿದೆ. ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಸಿಸಿಟಿವಿ ಹಾವಳಿ ಕಾರಣ ಜೋಡಿಗಳು ಇದೀಗ ಕ್ಯಾಬ್ ಬುಕ್ ಮಾಡಿ ಪ್ರಯಾಣದಲ್ಲಿ ಶುರುಹಚ್ಕೊಂಡು ಬಿಡುತ್ತಾರೆ. ಜೋಡಿಗಳ ಈ ರೀತಿಯ ರೊಮ್ಯಾನ್ಸ್‌ನಿಂದ ಬೇಸತ್ತ ಕ್ಯಾಬ್ ಚಾಲಕ ಇದೀಗ ಕಾರಿನೊಳಗೆ ನೋಟಿಸ್ ಅಂಟಿಸಿ ಸುದ್ದಿಯಾಗಿದ್ದಾನೆ. ಇದು ನಿಮ್ಮ ಖಾಸಗಿ ಜಾಗ ಅಥವಾ ಓಯೋ ರೂಂ ಅಲ್ಲ, ಇಲ್ಲಿ ರೊಮ್ಯಾನ್ಸ್‌ಗೆ ಅವಕಾಶವಿಲ್ಲ ಎಂದು ನೋಟಿಸ್ ಹಾಕಿದ್ದಾನೆ.  ಕ್ಯಾಬ್ ಚಾಲಕನ ನೋಟಿಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹೈದರಾಬಾದ್ ಕ್ಯಾಬ್ ಚಾಲಕನ ನೋಟಿಸ್ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಪ್ರಿಂಟ್ ಮಾಡಿಸಿ ಲ್ಯಾಮಿನೇಷನ್ ಮೂಲಕ ಈ ನೋಟಿಸ್‌ನ್ನು ಕಾರಿನೊಳಗೆ ಹಾಕಲಾಗಿದೆ. ನೋಟಿಸ್ ಆರಂಭದಲ್ಲೇ ಎಚ್ಚರಿಕೆ ಎಂದು ಬರೆಯಲಾಗಿದೆ. ಇಲ್ಲಿ ರೊಮ್ಯಾನ್ಸ್‌ಗೆ ಅವಕಾಶವಿಲ್ಲ. ಕಾರಣ ಇದು ಕ್ಯಾಬ್. ಇದು ನಿಮ್ಮ ಖಾಸಗಿ ಸ್ಥಳವಲ್ಲ, ಅಥವಾ ಒಯೋ ರೂಮ್ ಅಲ್ಲ. ಹೀಗಾಗಿ ದಯವಿಟ್ಟು ಅಂತರ ಕಾಪಾಡಿಕೊಳ್ಳಿ ಜೊತೆಗೆ ತಾಳ್ಮೆ ಇರಲಿ ಎಂದು ನೋಟಿಸ್‌ನಲ್ಲಿ ಕ್ಯಾಬ್ ಚಾಲಕ ಖಡಕ್ ಸಂದೇಶ ರವಾನಿಸಿದ್ದಾನೆ.

Latest Videos

 

🚖 ⚠️ 😂

📸: pic.twitter.com/xwjel4VQiI

— Hi Hyderabad (@HiHyderabad)

 

ಈ ಕ್ಯಾಬ್ ಡ್ರೈವರ್‌ಗೆ ಭಯ್ಯಾ ಅಂತ ಕರೀಬಾರದಂತೆ, ಹಾಕಿರೋ ರೂಲ್ಸ್ ಲಿಸ್ಟ್ ವೈರಲ್!

ಇತ್ತೀಚೆಗೆ ಬೆಂಗಳೂರು ಕ್ಯಾಬ್ ಚಾಲಕ ಇದೇ ರೀತಿ ನೋ ರೊಮ್ಯಾನ್ಸ್ ನೋಟಿಸ್ ಅಂಟಿಸಿ ಭಾರಿ ಸುದ್ದಿಯಾಗಿದ್ದರು. ಬೆಂಗಳೂರು ಕ್ಯಾಬ್ ಚಾಲಕ ಅತೀ ದೊಡ್ಡ ನೋಟಿಸ್ ಅಂಟಿಸಿದ್ದ. ನೀವು ಈ ಕ್ಯಾಬ್ ಮಾಲೀಕರಲ್ಲ. ಕಾರು ಚಲಾಸುವ ಚಾಲಕ ಈ ಕ್ಯಾಬ್ ಮಾಲೀಕ. ಸಂಯಮ, ತಾಳ್ಮೆಯಂದ ಮಾತನಾಡಿ ಗೌರವ ಪಡೆದುಕೊಳ್ಳಿ. ನಿಧಾನವಾಗಿ ಡೋರ್ ಕ್ಲೋಸ್ ಮಾಡಿ. ನಿಮ್ಮ ಆ್ಯಟಿಟ್ಯೂಬ್ ಜೇಬಿನಲ್ಲಿ ಇಟ್ಟುಕೊಳ್ಳಿ. 

ಎಂದು ನೋಟಿಸ್ ಹಾಕಲಾಗಿತ್ತು. ಈ ನೋಟಿಸ್ ಸದ್ದು ಮಾಡಿದ ಒಂದೇ ವಾರದಲ್ಲಿ ಇದೀಗ ಹೈದರಾಬಾದ್ ಕ್ಯಾಬ್ ಚಾಲಕ ಕೂಡ ಇದೇ ರೀತಿಯ ನೋಟಿಸ್ ಅಂಟಿಸಿದ್ದಾನೆ. ಗತ್ತು, ದೌಲತ್ತು ನಮ್ಮಲ್ಲಿ ತೋರಿಸಲು ನೀವು ನಮಗೆ ಹೆಚ್ಚಿಗೆ ಹಣವೇನು ನೀಡುತ್ತಿಲ್ಲ. ಅಣ್ಣಾ ಎಂದು ಕರೆಯಬೇಡಿ. ನಿಮಗೆ ಸಮಯದ ಅಭಾವವಿದೆ ಎಂದು ವೇಗವಾಗಿ ಕಾರು ಚಲಾಯಿಸಲು ಆಜ್ಞೆ ಮಾಡಬೇಡಿ ಎಂದು ಬೆಂಗಳೂರು ಕ್ಯಾಬ್ ಚಾಲಕ ನೋಟಿಸ್ ಅಂಟಿಸಿದ್ದ. 

ಇದೀಗ ಹೈದರಾಬಾದ್ ಚಾಲಕನ ನೋಟಿಸ್  ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಹಲವರು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಈ ರೀತಿ ನೋಟಿಸ್‌ಗಳು, ಪ್ರಯೋಗಗಳು ಎಲ್ಲೆಡೆ ಕಾಣುತ್ತದೆ.ದೆಹಲಿಯಲ್ಲೂ ಕೆಲ ನೋಟಿಸ್‌ಗಳು ವೈರಲ್ ಆಗಿದೆ. ಆದರೆ ಹೈದರಾಬಾದ್‌ನಲ್ಲಿ ಈ ನೋಟಿಸ್ ನಿರೀಕ್ಷಿಸಿರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
 

click me!