ರಾಮಮಂದಿರ ನಿರ್ಮಾಣದಿಂದ ನಾಯಕ ಆಗಲ್ಲ: ಮೋಹನ್ ಭಾಗವತ್

By Kannadaprabha News  |  First Published Dec 21, 2024, 5:50 AM IST

ರಾಮಮಂದಿರ ಹಿಂದೂಗಳ ನಂಬಿಕೆಯ ವಿಷಯವಾಗಿದೆ. ರಾಮಮಂದಿರ ನಿರ್ಮಾಣವಾಗಬೇಕು ಎಂದು ಹಿಂದೂಗಳು ನಂಬಿದರು. ಆದರೆ ಈಗ ನಿರ್ಮಾಣ ಮಾಡುವುದರಿಂದ ಯಾವುದೇ ವ್ಯಕ್ತಿಯು ಹಿಂದೂ ನಾಯಕನಾಗುವುದಿಲ್ಲ ಎಂದ ಆರ್‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ 


ಪುಣೆ(ಡಿ.21):  ರಾಮಮಂದಿರ ಕಟ್ಟುವುದರಿಂದ ಹಿಂದೂ ನಾಯಕನಾಗುವುದಿಲ್ಲ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದಾರೆ. 

ಭಾಗವತ್ ಅವರು ಯಾರದೇ ಹೆಸರೆತ್ತದೇ ಈ ಮಾತು ಆಡಿದ್ದಾರೆ. ಗುರುವಾರ ಪುಣೆಯಲ್ಲಿ ಉಪನ್ಯಾಸ ಮಾಲಿಕೆಯೊಂದರಲ್ಲಿ 'ವಿಶ್ವಗುರು ಭಾರತ' ಕುರಿತು ಭಾಷಣ ಮಾಡಿದ ಭಾಗವತ್, 'ರಾಮಮಂದಿರ ಹಿಂದೂಗಳ ನಂಬಿಕೆಯ ವಿಷಯವಾಗಿದೆ. ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹಿಂದೂಗಳು ನಂಬಿದರು. ಆದರೆ ಈಗ ನಿರ್ಮಾಣ ಮಾಡುವುದರಿಂದ ಯಾವುದೇ ವ್ಯಕ್ತಿಯು ಹಿಂದೂ ನಾಯಕನಾಗುವುದಿಲ್ಲ' ಎಂದರು.

Tap to resize

Latest Videos

undefined

ತಾಜ್‌ಮಹಲ್‌ ಹಿಂದಿಕ್ಕಿ ಉತ್ತರ ಪ್ರದೇಶದ ನಂ.1 ಪ್ರವಾಸಿ ಸ್ಥಳ ಎನಿಸಿಕೊಂಡ ಅಯೋಧ್ಯೆ ರಾಮಮಂದಿರ!

ಇದಲ್ಲದೆ, 'ರಾಮಮಂದಿರ ನಿರ್ಮಾಣದ ಬಳಿಕ, ಇಂತಹ ಇನ್ನಷ್ಟು ಸಮಸ್ಯೆಗಳನ್ನು ಹೊರತಂದು ತಾವು ಹಿಂದೂ ನಾಯಕರಾಗಬಹುದು ಎಂದು ಹಲವರು ಭಾವಿಸಿದ್ದಾರೆ. ಇದಕ್ಕಾಗಿ ಪ್ರತಿ ದಿನ ಒಂದೊಂದು ಸಮಸ್ಯೆಯನ್ನು ಹುಡುಕಿ ತೆಗೆಯುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ' ಎಂದೂ ಹೇಳಿದರು. 

ನಾವು (ಭಾರತ) ವಿಶ್ವಗುರು (ಜಾಗತಿಕ ನಾಯಕ) ಆಗಬೇಕೆಂದು ಮಾತನಾಡುತ್ತೇವೆ. ಆದರೆ 'ಮಹಾಶಕ್ತಿ' (ಸೂಪರ್ ಪರ್ವ) ಆಗಬೇಕು ಎಂದು ಮಾತನಾಡುವುದಿಲ್ಲ. ಏಕೆಂದರೆ ಸೂಪರ್‌ ಪವರ್‌ದ ನಂತರ ಜನರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಪರಮಾಧಿಕಾರಕ್ಕಾಗಿ ಸ್ವಾರ್ಥ ಸಾಧನೆ ಮಾಡುವುದು ನಮ್ಮ ಮಾರ್ಗವಲ್ಲ' ಎಂದು ಅವರು ನುಡಿದರು. 

ಮತ್ತೆ ಮಂದಿರ-ಮಸೀದಿ ವಿವಾದ ಬೇಡ: ಆರೆಸ್ಸೆಸ್ ಪ್ರಮುಖ ಭಾಗವತ್

ಪುಣೆ: ರಾಮಮಂದಿರದಂತಹ ಮಂದಿರ- ಮಸೀದಿ ಸಮಸ್ಯೆಗಳನ್ನು ಮತ್ತೆ ಸೃಷ್ಟಿಸಿ ಮುನ್ನೆಲೆಗೆ ತರದಿರಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ ಕರೆ ನೀಡಿದ್ದಾರೆ. 

500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ವಿಶ್ವದಾಖಲೆಯ ದೀಪಾವಳಿ!

ದೇಶದಲ್ಲಿ ಸಂಭಲ್ ಸೇರಿ ಹಲವು ಮಸೀದಿ ವಿವಾದಗಳು ಸಂಘರ್ಷಗಳಿಗೆ ಕಾರಣವಾಗಿರುವ ಬೆನ್ನಲ್ಲೇ ಅವರು ಹೀಗೆ ಹೇಳಿರು ವುದು ಮಹತ್ವ ಪಡೆದಿದೆ. ವಿಶ್ವಗುರು ಭಾರತ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, 'ನಾವು ಅನೇಕ ವರ್ಷಗಳಿಂದ ಸಹಬಾಳ್ವೆ ನಡೆಸುತ್ತಿದೇವೆ. ಈ ವಿಷಯದಲ್ಲಿ ಜಗತ್ತಿಗೆ ನಾವು ಆದರ್ಶವಾಗಬೇಕು. ರಾಮ ಮಂದಿರ ನಿರ್ಮಾಣದ ಬಳಿಕ, ಇಂತಹ ಇನ್ನಷ್ಟು ಸಮಸ್ಯೆಗಳನ್ನು ಹೊರತಂದು ತಾವು ಹಿಂದೂ ನಾಯಕರಾಗಬಹುದು ಎಂದು ಹಲವರು ಭಾವಿಸಿದ್ದಾರೆ. ಇದಕ್ಕಾಗಿ ನಿತ್ಯ ಒಂದು ಸಮಸ್ಯೆಯನ್ನು ಹುಡುಕಿ ತೆಗೆಯುತ್ತಿದ್ದಾರೆ. ಇದು ಸಲ್ಲದು' ಎಂದರು.

ಸಂಭಲ್: 46 ವರ್ಷ ಬಳಿಕ ಪತ್ತೆ ಆದ ದೇಗುಲದ ಎಎಸ್‌ಐ ಸಮೀಕ್ಷೆ

ಸಂಭಲ್‌: ಒತ್ತುವರಿ ತೆರವು ವೇಳೆ 46 ವರ್ಷ ಬಳಿಕ ಇಲ್ಲಿ ಪತ್ತೆಯಾಗಿದ್ದ ಕಾರ್ತಿಕೇಯ ದೇವಸ್ಥಾನದ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಇಲಾಖೆ ಶುಕ್ರವಾರ ನಡೆಸಿದೆ. ದೇವಸ್ಥಾನ ಎಷ್ಟು ಪುರಾತನವಾದುದು ಎಂಬುದನ್ನು ತಿಳಿಯಲು, 4 ಜನರ ತಂಡ ಕಾರ್ಬನ್ ಡೇಟಿಂಗ್ ನಡೆಸಿ ದು, ಈ ವೇಳೆ ದೇವಸ್ಥಾನದ ಬಳಿಯಲ್ಲಿ ಭದ್ರಕ್ ಆಶ್ರಮ, ಸ್ವರ್ಗದೀಪ್, ಚಕ್ರಪಾಣಿ ಸೇರಿದಂತೆ 5 ಧಾರ್ಮಿಕ ಸ್ಥಳಗಳು ಹಾಗೂ 19 ಬಾವಿ ಪತ್ತೆ ಆಗಿವೆ. 1978ರಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ದಂಗೆಯಿಂದ ಮುಚ್ಚ ಲಾಗಿದ್ದ ಈ ದೇವಾಲಯವನ್ನು 46 ವರ್ಷಗಳ ನಂತರ, ಡಿ.13ರಂದು ತೆರೆಯಲಾಗಿದ್ದು, ಪೂಜೆಯನ್ನೂ ಆರಂಭಿಸಲಾಗಿದೆ. ಈ ನಡುವೆ, ಅಲಿಘಢದಲ್ಲಿ ಪಾಳು ಬಿದ್ದ 2ನೇ ದೇಗುಲ ಶುಕ್ರವಾರ ಪತ್ತೆ ಆಗಿದೆ.

click me!