ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಇಲ್ಲ: ಆರೋಗ್ಯ ಸಚಿವ

By Suvarna NewsFirst Published Mar 16, 2021, 8:41 AM IST
Highlights

ರಾಜ್ಯ​ದ​ಲ್ಲಿ​ ಹೆಚ್ಚು​ತ್ತಿ​ರುವ ಕೊರೋನಾ ಪ್ರಕ​ರ​ಣ​ಗಳ ನಿಯಂತ್ರ​ಣಕ್ಕೆ ಮತ್ತೊಮ್ಮೆ ಲಾಕ್‌​ಡೌನ್‌ ಹೇರಿಕೆ ಪರಿ​ಹಾ​ರ​ವಾ​ಗ​ಲಾ​ರದು| ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಇಲ್ಲ: ಆರೋಗ್ಯ ಸಚಿವ

 

ಮುಂಬೈ(ಮಾ.16): ರಾಜ್ಯ​ದ​ಲ್ಲಿ​ ಹೆಚ್ಚು​ತ್ತಿ​ರುವ ಕೊರೋನಾ ಪ್ರಕ​ರ​ಣ​ಗಳ ನಿಯಂತ್ರ​ಣಕ್ಕೆ ಮತ್ತೊಮ್ಮೆ ಲಾಕ್‌​ಡೌನ್‌ ಹೇರಿಕೆ ಪರಿ​ಹಾ​ರ​ವಾ​ಗ​ಲಾ​ರದು. ಆದರೆ ಕಠಿಣ ನಿರ್ಬಂಧ​ಗಳ ಮೂಲಕ ಕೊರೋನಾ ಅಲೆ​ಯನ್ನು ತಗ್ಗಿ​ಸ​ಲಾಗುತ್ತದೆ ಎಂದು ಮಹಾ​ರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಟೋಪೆ ಪ್ರತಿ​ಪಾ​ದಿ​ಸಿ​ದ್ದಾರೆ.

Latest Videos

ಸೋಮ​ವಾರ ಮಾತ​ನಾ​ಡಿದ ಟೋಪೆ ಅವರು, ‘ಕಳೆದ ಕೆಲ ದಿನ​ಗ​ಳಿಂದ ಮಹಾ​ರಾ​ಷ್ಟ್ರದಲ್ಲಿ ಸೋಂಕಿ​ತರ ಸಂಖ್ಯೆ ಹೆಚ್ಚು​ತ್ತಿವೆ. ಆದರೆ ಲಾಕ್‌​ಡೌನ್‌ ಇದಕ್ಕೆ ಪರಿ​ಹಾ​ರ​ವಲ್ಲ. ಬದ​ಲಿಗೆ ಕೊರೋನಾ ಪರೀ​ಕ್ಷೆ​ಯ ಹೆಚ್ಚಳ, ಸೋಂಕಿ​ತರ ಪತ್ತೆ ಮತ್ತು ಕಠಿಣ ನಿರ್ಬಂಧ​ಗಳ ಮೂಲಕ ಪರಿ​ಹಾರ ಕಂಡು​ಕೊ​ಳ್ಳ​ಲಾಗುತ್ತದೆ’ ಎಂದರು.

ಏತ​ನ್ಮಧ್ಯೆ, ಕೊರೋನಾ ನಿಯಂತ್ರ​ಣಕ್ಕೆ ಸಂಬಂಧಿ​ಸಿ​ದಂತೆ ಮಂಗ​ಳ​ವಾರ ಮುಖ್ಯ​ಮಂತ್ರಿ ಉದ್ಧವ್‌ ಠಾಕ್ರೆ ಅವರು ಸಚಿ​ವರು ಮತ್ತು ಅಧಿ​ಕಾ​ರಿ​ಗಳ ಜೊತೆ ಸಭೆ ನಡೆ​ಸ​ಲಿ​ದ್ದಾರೆ. ಈ ವೇಳೆ ಕಠಿಣ ಕ್ರಮಗಳ ಘೋಷಣೆ ಆಗುವ ಸಾಧ್ಯತೆ ಇದೆ.

ಈ ನಡುವೆ, ಸೋಮವಾರ ಮಹಾರಾಷ್ಟ್ರದಲ್ಲಿ 15,051 ಪ್ರಕರಣ ದಾಖಲಾಗಿದ್ದು, 48 ಮಂದಿ ಸಾವನ್ನಪ್ಪಿದ್ದಾರೆ.

click me!