ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡಬೇಕು| ಇದರಿಂದ ಜನರ ನಡುವೆ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತದೆ| ಭಾರತದ ಎಲ್ಲ ಭಾಷೆಗಳಿಗೂ ಶ್ರೀಮಂತ ಇತಿಹಾಸವಿದೆ
ನವದೆಹಲಿ(ಸೆ.15): ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡಬೇಕು. ಯಾವುದೇ ಭಾಷೆಯನ್ನು ಹೇರಬಾರದು ಅಥವಾ ವಿರೋಧಿಸಬಾರದು. ಭಾರತದ ಎಲ್ಲ ಭಾಷೆಗಳಿಗೂ ಶ್ರೀಮಂತ ಇತಿಹಾಸವಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಹಿಂದಿ ದಿವಸ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದಿ ಭಾಷಿಕರಲ್ಲದ ಜನರು ಹಿಂದಿ ಕಲಿಯಬೇಕು. ಅದೇ ರೀತಿ ಹಿಂದಿ ಭಾಷಿಕ ರಾಜ್ಯಗಳಲ್ಲಿರುವವರು ಕನ್ನಡ, ತಮಿಳು ಅಥವಾ ತೆಲುಗಿನಂತಹ ಒಂದು ಭಾಷೆಯನ್ನು ಕಲಿಯಬೇಕು. ಇದರಿಂದ ಜನರ ನಡುವೆ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತದೆ ಎಂದು ಸಲಹೆ ಮಾಡಿದರು.
'ಇಂಗ್ಲಿಷ್ ಬಾರದೆಂಬ ವಿನಂತಿಯೋ ಅಥವಾ ಹಿಂದಿ ಹೇರಬೇಕೆಂಬ ನಾಚಿಕೆ ಇಲ್ಲದ ಉತ್ಸಾಹವೋ'?
ಪ್ರಾದೇಶಿಕ ಭಾಷೆ ಜತೆ ಹಿಂದಿ ಪೈಪೋಟಿಗಿಳಿದಿಲ್ಲ: ಅಮಿತ್
ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಹಾಗೂ ಇನ್ನಿತರ ಸಂಸ್ಥೆಗಳ ನೌಕರರು ತಮ್ಮ ವ್ಯವಹಾರಗಳಲ್ಲಿ ಸಾಧ್ಯವಾದಷ್ಟುಹಿಂದಿ ಬಳಸಬೇಕು. ಮುಂದಿನ ತಲೆಮಾರಿಗೆ ಅಗತ್ಯವಿರುವ ಮಾಹಿತಿಗಳನ್ನು ಸಾಧ್ಯವಾದಷ್ಟುಹಿಂದಿಯಲ್ಲಿ ನೀಡುವ ಮೂಲಕ ಅವರಿಗೂ ಹಿಂದಿಯನ್ನು ಬಳಸಲು ಸ್ಫೂರ್ತಿ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ಹಿಂದಿ ದಿವಸ್ ಅಂಗವಾಗಿ ವಿಡಿಯೋ ಸಂದೇಶ ಬಿಡುಗಡೆ ಮಾಡಿ, ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರಿ ಕಚೇರಿಗಳಲ್ಲಿ ಹಿಂದಿಯ ಜೊತೆಗೆ ಸ್ಥಳೀಯ ಭಾಷೆಯನ್ನೂ ಬಳಸಬೇಕು. ಹಿಂದಿಯ ಬಹುದೊಡ್ಡ ಶಕ್ತಿಯೆಂದರೆ ಅದರ ವೈಜ್ಞಾನಿಕತೆ, ತಾಜಾತನ ಹಾಗೂ ಸರಳತೆ. ಈ ಭಾಷೆ ಬೇರಾವುದೇ ಪ್ರಾದೇಶಿಕ ಭಾಷೆಯೊಂದಿಗೆ ಸ್ಪರ್ಧೆ ನಡೆಸುತ್ತಿಲ್ಲ. ಹಿಂದಿಯು ಇತರ ಪ್ರಾದೇಶಿಕ ಭಾಷೆಗಳನ್ನು ಇನ್ನಷ್ಟುಸಶಕ್ತಗೊಳಿಸಿದೆ ಎಂದಿದ್ದಾರೆ.
'ಟುಕ್ಡೇ ಟುಕ್ಡೇ ಗ್ಯಾಂಗ್' ಅಧಿಕಾದಲ್ಲಿದೆ: ಬಿಜೆಪಿ ವಿರುದ್ಧ ತರೂರ್ ವಾಗ್ದಾಳಿ!
ಸಂವಿಧಾನದ ಪರಿಚ್ಛೇದ 351ರಲ್ಲೇ ಹಿಂದಿಯ ಮಹತ್ವವನ್ನು ಸ್ಪಷ್ಟವಾಗಿ ಹೇಳಲಾಗಿದ್ದು, ಅದನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಪ್ರತಿಪಾದಿಸಲಾಗಿದೆ. ಹೀಗಾಗಿ ಸಂವಿಧಾನವು ನೀಡಿದ ಆ ಜವಾಬ್ದಾರಿಯನ್ನು ಪಾಲಿಸಲು ಎಲ್ಲಾ ಸರ್ಕಾರಿ ವ್ಯವಹಾರಗಳನ್ನು ಹಿಂದಿಯಲ್ಲಿ ನಡೆಸಿ, ಅದನ್ನು ಇತರ ಭಾಷೆಗಳಿಗೆ ಭಾಷಾಂತರ ಮಾಡಬೇಕಿದೆ ಎಂದೂ ಶಾ ತಿಳಿಸಿದ್ದಾರೆ.