ಮಥುರಾ ಕೃಷ್ಣ ಜನ್ಮಭೂಮಿ ಸುತ್ತಲಿನ ಅಕ್ರಮ ಕಟ್ಟಡ ಧ್ವಂಸಕ್ಕೆ ಸುಪ್ರೀಂ ಕೋರ್ಟ್ ತಡೆ!

By Suvarna NewsFirst Published Aug 16, 2023, 1:42 PM IST
Highlights

ಮಥಾರದ ಶ್ರೀ ಕೃಷ್ಣ ಜನ್ಮಭೂಮಿ ಸುತ್ತ ಮುತ್ತ ತಲೆ ಎತ್ತಿರುವ ಅಕ್ರಮ ಕಟ್ಟಡ, ಮನೆಗಳ ಧ್ವಂಸ ಕಾರ್ಯಕ್ಕೆ ಕೋರ್ಟ್ ತಡೆ ನೀಡಿದೆ. 10 ದಿನಗಳ ಕಾಲ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶ ನೀಡಿದೆ.

ನವದೆಹಲಿ(ಆ.16)  ಕಾಶಿ ವಿಶ್ವನಾಥನ ಮಂದಿರ ಪಕ್ಕದಲ್ಲಿರುವ ಜ್ಞಾನಾವಾಪಿ ಮಸೀದಿ ವಿವಾದದ ಹಾಗೂ ಮಥುರಾ ಕೃಷ್ಣಜನ್ಮ ಭೂಮಿ ಪಕ್ಕದಲ್ಲಿರುವ ಈದ್ಗಾ ಮಸೀದಿ ವಿವಾದವೂ ಶತಮಾನಗಳಷ್ಟು ಹಳೇಯದು. ದೇವಸ್ಥಾನ ಪಕ್ಕದಲ್ಲೇ ಈದ್ಗಾ ಮಸೀದಿ ಇದೆ. ಇದರ ತರ್ಕ ಒಂದೆಡೆಯಾದರೆ ಇದೀಗ ಮಥುರಾ ಶ್ರೀಕೃಷ್ಣ ದೇವಸ್ಥಾನದ ಸುತ್ತ ಮುತ್ತ ಹಲವು ಅಕ್ರಮ ಮನೆಗಳು, ಕಟ್ಟಡಗಳು ತಲೆ ಎತ್ತಿದೆ. ಭಾರತೀಯ ರೈಲ್ವೇ ಇಲಾಖೆ ಪ್ರದೇಶದಲ್ಲಿ ತಲೆ ಎತ್ತಿರುವ ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಡೆಯುತ್ತಿತ್ತು. ಆದರೆ ಈ ನಡೆ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಂ ನಿವಾಸಿಗಳ ಪರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 10 ದಿನಗಳ ತೆರವು ಕಾರ್ಯ ಸ್ಥಗಿತಗೊಳಿಸಿ ಯಥಾ ಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಭಾರತೀಯ ರೈಲ್ವೇ ಇಲಾಖೆ ಅಕ್ರಮ ಕಟ್ಟಡಗಳ ತೆರವು ಕಾರ್ಯ ಆರಂಭಿಸಿತ್ತು. ಆದರೆ ಇದರ ವಿರುದ್ಧ ನಿವಾಸಿ ಯಾಕೂಬ್ ಶಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಜಸ್ಟೀಸ್ ಅನಿರುದ್ಧ್ ಬೋಸ್, ಸಂಜಯ್ ಕುಮಾರ್ ಹಾಗೂ ಎಸ್‌ವಿಎನ್ ಭಟ್ಟಿ ತ್ರಿಸದಸ್ಯ ಪೀಠ ಈ ಅರ್ಜಿ ವಿಚಾರಣೆ ನಡೆಸಿ, ಧ್ವಂಸ ಕಾರ್ಯಕ್ಕೆ ತಡೆ ನೀಡಿದೆ. ಇದೇ ವೇಳೆ ಭಾರತೀಯ ರೈಲ್ವೇ ಇಲಾಖೆಗೆ ನೋಟಿಸ್ ನೀಡಿದೆ. 10 ದಿನಗಳ ಕಾಲ ಯಥಾ ಸ್ಥಿತಿ ಕಾಪಾಡಬೇಕು. ಮುಂದಿನ ವಾರ ಇದೇ ಪ್ರಕರಣ ವಿಚಾರಣೆ ನಡೆಸುವುದಾಗಿ ಹೇಳಿದೆ.

Latest Videos

 

ಕೃಷ್ಣಜನ್ಮಭೂಮಿ ದೇಗುಲ ಪಕ್ಕದ ಮಸೀದಿ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ಗೆ ವರ್ಗ

ಯಾಕೂಬ್ ಪರ ವಾದ ಮಂಡಿಸಿ ವಕೀಲ, ಈಗಾಗಲೇ 100 ಮನಗಳನ್ನು ಧ್ವಂಸಗೊಳಿಸಿದ್ದಾರೆ. ಇನ್ನು 70 ರಿಂದ 80 ಮನೆಗಳನ್ನು ಧ್ವಂಸಗೊಳಿಸುವುದಾಗಿ ನೋಟಿಸ್ ನೀಡಿದ್ದಾರೆ. ಕಳೆದ 100 ವರ್ಷಗಳಿಂದ ಇದೇ ಸ್ಥಳದಲ್ಲಿ ನಾವು ವಾಸವಿದ್ದೇವೆ. ಇದೀಗ ರೈಲ್ವೇ ಇಲಾಖೆ ನೋಟಿಸ್ ನೀಡಿ ತಮ್ಮ ಜಾಗವೆಂದು ಹೇಳುತ್ತಿದೆ. ಮಸೀದಿಯಲ್ಲಿ ಕೆಲಸ ಮಾಡುತ್ತಾ ನಾವು ಇಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದು ವಕೀಲರು ವಾದ ಮಂಡಿಸಿದ್ದಾರೆ.

ರೈಲ್ವೇ ಇಲಾಖೆ ತನ್ನ ಅಧೀನದಲ್ಲಿರುವ ಪ್ರದೇಶಗಳನ್ನು ಅಕ್ರಮವಾಗಿ ಬಳಸಿಕೊಂಡವರಿಗೆ ನೋಟಿಸ್ ನೀಡಿ ತೆರವುಗೊಳಿಸುವ ಕಾರ್ಯ ನಡೆಸುತ್ತಿದೆ. ಆದರೇ ಶೇಕಡಾ 95 ರಷ್ಟು ಕಡೆ ಇದೇ ರೀತಿಯ ವಿರೋಧ, ತಡೆಗಳು ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ರೈಲ್ವೇ ಇಲಾಖೆ ತೆರವು ಕಾರ್ಯ ಸ್ಥಗಿತಗೊಳಿಸಿದೆ.

ಶ್ರೀಕೃಷ್ಣ ಜನ್ಮಭೂಮಿ ವಿವಾದ ವಿಚಾರಣೆಗೆ ಹೈಕೋರ್ಟ್‌ ಅಸ್ತು: ಮುಸ್ಲಿಂ ಕಕ್ಷಿದಾರರ ಅರ್ಜಿ ವಜಾ

ಮಥುರಾದಲ್ಲೂ ಮಸೀದಿ ವೈಜ್ಞಾನಿಕ ಸಮೀಕ್ಷೆ ಕೋರಿ ಸುಪ್ರೀಂಗೆ ಅರ್ಜಿ: ದೇಗುಲದ ಮೇಲೆ ಮಸೀದಿ ನಿರ್ಮಿಸಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ವಾರಾಣಸಿ ಗ್ಯಾನವಾಪಿ ಮಸೀದಿ ರೀತಿ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲೂ ನಡೆಸಬೇಕು ಸಮೀಕ್ಷೆ ಎಂದು ಕೋರಿ ಕೃಷ್ಣ ಜನ್ಮಭೂಮಿ ಟ್ರಸ್ಟ್‌ ಸುಪ್ರೀಂ ಕೋರ್ಚ್‌ ಮೊರೆ ಹೋಗಿದೆ. ‘ಮಥುರಾದಲ್ಲಿ ಶಾಹಿ ಈದ್ಗಾ ಮಸೀದಿಯವರು ಕೃಷ್ಣ ಜನ್ಮ ಸ್ಥಳವನ್ನು ಆಕ್ರಮಿಸಿಕೊಂಡು ಮಸೀದಿ ನಿರ್ಮಿಸಿದ್ದಾರೆ. ಅಲ್ಲೇ ಶೌಚಾಲಯವನ್ನು ನಿರ್ಮಿಸಿ ಹಿಂದುಗಳ ಧಾರ್ಮಿಕತೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಮಸೀದಿಯನ್ನು ವೈಜ್ಞಾನಿಕ ಸಮೀಕ್ಷೆಗೆ ಒಳಪಡಿಸಿ ಅದರಲ್ಲಿ ದೇಗುಲ ಇದ್ದ ಕುರುಹುಗಳನ್ನು ಹುಡುಕಬೇಕು’ ಎಂದು ಟ್ರಸ್ಟ್‌ ಕೋರಿದೆ.
 

click me!