ವಿಪಕ್ಷಗಳ ಅವಿಶ್ವಾಸ ಬಿಜೆಪಿಗೆ ಶುಭ ಸಂಕೇತ, 2019ರ ಘಟನೆ ನೆನೆಪಿಸಿದ ಪ್ರಧಾನಿ ಮೋದಿ!

By Suvarna News  |  First Published Aug 10, 2023, 5:32 PM IST

ವಿಪಕ್ಷಗಳ ಪ್ರತಿ ಬಾರಿ ಅವಿಶ್ವಾಸ ನಿರ್ಣಯ ಮಂಡಿಸಿದಾಗ ಬಿಜೆಪಿಗೆ ಶುಭವಾಗಿದೆ. 2019ರಲ್ಲಿ ನನ್ನ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ಭರ್ಜರಿ ಗೆಲುವು ನಮ್ಮದಾಗಿತ್ತು. ಇದೀಗ 2023ರ ಚುನಾವಣೆಗೂ ಮೊದಲು ಅವಿಶ್ವಾಸ ಮಂಡಿಸಲಾಗಿದೆ.ಇದು ನಮಗೆ ಶುಭ ಸಂಕೇತ ಎಂದು ವಿಪಕ್ಷಗಳನ್ನು ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
 


ನವದೆಹಲಿ(ಆ.10) ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಇದೇ ವೇಳೆ ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡನೆ ಬಿಜೆಪಿಗೆ ಶುಭ ಸಂಕೇತ ಎಂದು ಮೋದಿ ಹೇಳಿದ್ದಾರೆ. 2019ರಲ್ಲೂ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಬಳಿಕ ಲೋಕಸಭಾ ಚನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿತ್ತು. ಇದೀಗ 2023ರ ಚುನಾವಣೆಗೂ ಮೊದಲು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ. ಹೀಗಾಗಿ 2023ರ ಚನಾವಣೆಯಲ್ಲೂ ಎನ್‌ಡಿಎ ಅಭೂತಪೂರ್ವ ಗೆಲುವಿನ ಮೂಲಕ ಅಧಿಕಾರಕ್ಕೇರಲಿದೆ ಎಂದು ಮೋದಿ ಹೇಳಿದ್ದಾರೆ.

ಮಣಿಪುರ ವಿಚಾರ ಮುಂದಿಟ್ಟು ಅವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷಗಳು, ಮೋದಿ ಸದನದಲ್ಲಿ ಉತ್ತರ ನೀಡಲು ಪಟ್ಟು ಹಿಡಿದಿತ್ತು. ಇದೀಗ ಮೋದಿ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ದೇಶದ ಕೋಟಿ ಕೋಟಿ ನಾಗರೀಕರಗೆ ಧನ್ಯವಾದ ಹೇಳುತ್ತಿದ್ದೇನೆ.ದೇವರ ಆಶೀರ್ವಾದವನ್ನು ಬೇಡುತ್ತಿದ್ದೇನೆ. ಈ ಸಂದರ್ಭದಲ್ಲಿ ವಿಪಕ್ಷಗಳು ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸಿರುವ ವಿಪಕ್ಷಗಳ ನಿರ್ಧಾರವನ್ನು ನಾನು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ. ಕಾರಣ ನಾನು ಈ ಹಿಂದೆಯೇ ಹೇಳಿದ್ದೇನೆ, ವಿಪಕ್ಷಗಳು 2019ರ ಚುನಾವಣೆಗೂ ಮೊದಲು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಆದರೆ 2019ರ ಅವಿಶ್ವಾಸ ನಿರ್ಣಯ ಮತಗಳಲ್ಲಿ ವಿಪಕ್ಷಗಳಲ್ಲಿ ಎಷ್ಟು ಒಟ್ಟು ಮತಗಳಿತ್ತೋ ಅಷ್ಟು ಮತಗಳನ್ನು ಪಡೆಯಲಿಲ್ಲ. ಬಳಿಕ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಬಿಜೆಪಿ ಅತೀ ಹೆಚ್ಚಿನ ಮತಗಳನ್ನು ಪಡೆದು ಅದಿಕಾರಕ್ಕೇರಿದೆ. ಇದೀಗ 2023ರ ಚುನಾವಣೆಗೂ ಮೊದಲು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಇದು ನಮಗೆ ಶುಭ ಸಂದೇಶ ಎಂದು ಮೋದಿ ಹೇಳಿದ್ದಾರೆ.

Tap to resize

Latest Videos

ಪ್ರಧಾನಿಯನ್ನು ನೀರವ್ ಮೋದಿಗೆ ಹೋಲಿಸಿ ವಿಪಕ್ಷದ ಎಡವಟ್ಟು, ಕಡತದಿಂದ ತೆಗೆದುಹಾಕಿದ ಸ್ಪೀಕರ್!

ವಿಪಕ್ಷಗಳ ಚರ್ಚೆಯನ್ನು ಕ್ರಿಕೆಟ್‌ಗೆ ಹೋಲಿಸಿದ ಪ್ರಧಾನಿ ಮೋದಿ, ಫೀಲ್ಡಿಂಗ್ ವಿಪಕ್ಷ ಸೆಟ್ ಮಾಡಿದೆ ಎಂದರು. ಫೋರ್ , ಸಿಕ್ಸರ್ ನಮ್ಮ ಪಕ್ಷದಿಂದ ಹೊಡೆಯುತ್ತಿದ್ದಾರೆ. ಆದರೆ ವಿಪಕ್ಷ ತಯಾರಿ ಮಾಡಿಕೊಂಡು ಬಂದಿಲ್ಲ. ನಾನು ಐದು ವರ್ಷ ಸಮಯ ಕೊಟ್ಟಿದ್ದೆ. ಕನಿಷ್ಠ ಕಷ್ಟಪಟ್ಟು ತಯಾರಿ ಮಾಡಿಕೊಂಡು ಬರಬೇಕಿತ್ತು ಎಂದು ಮೋದಿ ಹೇಳಿದ್ದಾರೆ.  

ವಿಪಕ್ಷ ನಾಯಕನಿಗೆ ಮಾತನಾಡಲು ಅವರ ಪಕ್ಷ ಸಮಯವೇ ಕೊಟ್ಟಿಲ್ಲ. ಕೋಲ್ಕತಾದಿಂದ ಫೋನ್ ಬಂದಿರಬಹುದು. ಅಮಿತ್ ಶಾ ಅವರ ಆಲೋಚನೆ, ಸ್ಪೀಕರ್ ಅವರ ನೆರವಿನಿಂದ ಅಧೀರ್ ರಂಜನ್ ಚೌಧರಿಗೆ ಸಮಯ ನೀಡಲಾಗಿತ್ತು. ಆದರೆ  ಈ ಮಹತ್ವದ ಸಮಯದಲ್ಲೂ ಅಧೀರ್ ರಂಜನ್ ಚೌಧರಿ ಸಮರ್ಥವಾಗಿ ಭಾಷಣ ಮಾಡಲು ಸಾಧ್ಯವಾಗಲಿಲ್ಲ. ನಿಮ್ಮ ಮಾತುಗಳನ್ನು ಸ್ಪೀಕರ್ ಕಡತದಿಂದ ತೆಗೆದುಹಾಕಬೇಕಾಯಿತು ಎಂದು ಮೋದಿ ಹೇಳಿದ್ದಾರೆ. 

ಟೊಮೆಟೊ ಬೆಲೆ ತಗ್ಗಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾಸ್ಟರ್‌ ಪ್ಲ್ಯಾನ್‌

click me!