ಪ್ರತಿಭೆಯೊಂದು ನಿಮ್ಮಲ್ಲಿ ಇದೇ ಎಂದಾದರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಇದು ಸಾಮಾಜಿಕ ಜಾಲತಾಣಗಳ ಯುಗ ಸಾಕಷ್ಟು ಪ್ರಭಾವಶಾಲಿಯಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ ನೀವೇ ವೇದಿಕೆಯೊದಗಿಸಬಹುದು. ಹೀಗಾಗಿ ಇದು ತೆರೆಮರೆಯಲ್ಲಿ ಸರಿದು ಹೋಗುತ್ತಿದ್ದ ಕೋಟ್ಯಾಂತರ ಪ್ರತಿಭೆಗಳನ್ನು ಜಗತ್ತು ಕಾಣುವಂತೆ ಮಾಡಿದೆ. ಅದೇ ರೀತಿ ಈಗ ಪುಟ್ಟ ಬಾಲಕನೋರ್ವ ತನ್ನ ಸ್ವಂತ ಪ್ರತಿಭೆಯಿಂದ ಜಗತ್ತು ನೋಡುವಂತೆ ಮಾಡಿದ್ದು, ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಈತ ಆಫ್ರಿಕಾದ ಕಂದ. ಹೇಳಿ ಕೇಳಿ ಆಫ್ರಿಕಾ ಹಿಂದುಳಿದ ಬಡ ರಾಷ್ಟ್ರ ಕೆಲವೆಡೆ ಒಂದೊತ್ತಿನ ಊಟಕ್ಕೂ ಅಲ್ಲಿ ಬಡತನ ಇದೆ. ಆದರೆ ಅಲ್ಲಿನ ಮಕ್ಕಳ ಪ್ರತಿಭೆಗೆ ಮಾತ್ರ ಯಾವುದೇ ಬಡತನವಿಲ್ಲ. ಪಾಶ್ಚಾತ್ಯ ಮ್ಯೂಸಿಕ್ ಲೈವ್ ಕನ್ಸರ್ಟ್‌ಗಳಲ್ಲಿ ಹಲವು ಸಂಗೀತಾ ಪರಿಕರಗಳನ್ನು (ಡ್ರಮ್ ಸೆಟ್) ಓರ್ವನೇ ನಿರ್ವಹಿಸುತ್ತಾ ತನ್ನ ಪ್ರತಿಭೆ ಪ್ರದರ್ಶಿಸುವುದನ್ನು ನೋಡಬಹುದು. ಹಾಗೆಯೇ ಇಲ್ಲೊಬ್ಬ ಬಾಲಕ ಬಹುಶಃ ಎಲ್ಲೋ ಅದನ್ನು ನೋಡಿರಬೇಕು. ಅದರಂತೆ ಇತ ಹಲವು ಬೇಡದ ಗುಜುರಿ ಸಾಮಾನುಗಳನ್ನು ಬಳಸಿ ಡ್ರಮ್ ಸೆಟ್ ರೆಡಿ ಮಾಡಿದ್ದು, ಅವುಗಳನ್ನು ಯಾರಿಗೂ ಕಡಿಮೆ ಇಲ್ಲದಂತೆ ಬಡಿಯುವ ವಿಡಿಯೋವೊಂದು ವೈರಲ್ ಆಗಿದೆ.
ZIJIAN TANG ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, 43 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಡ್ರಮ್ ಸೆಟ್‌ನ ಕಲ್ಲಿನಂತಹ ವಸ್ತುವೊಂದರ ಮೇಲೆ ಬಾಲಕ ಕುಳಿತುಕೊಂಡಿದ್ದು, ಜೋರಾಗಿ ಡ್ರಮ್ ಬಡಿದಂತೆ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ತೂತಾದ ಪಾತ್ರ ಪ್ಲಾಸ್ಟಿಕ್ ಡಬ್ಬಿ ಕ್ಯಾನ್‌ಗಳೇ ಈ ಬಾಲಕನ ಸಂಗೀತಾ ಪರಿಕರವಾಗಿದ್ದು, ಇರುವುದಲ್ಲೇ ಸುಂದರ ಲೋಕವನ್ನು ಸೃಷ್ಟಿಸಿಕೊಂಡು ಬಾಲಕ ಆಟವಾಡುತ್ತಿದ್ದಾನೆ. ಈ ವಿಡಿಯೋ ನೋಡಿದ ಅನೇಕರು ಬಾಲಕನ ಪ್ರತಿಭೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅನೇಕರು ಇಂತಹ ಪ್ರತಿಭೆಗಳು ಪ್ರಪಂಚದಲ್ಲಿ ಸಾಕಷ್ಟಿದ್ದು ಕಣ್ಣಿಗೆ ಕಾಣದೇ ಮರೆಯಾಗುತ್ತಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆ ಬಾಲಕನ ಮುಖದಲ್ಲಿರುವ ನಗ ಎಲ್ಲವನ್ನು ಹೇಳುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಯಾರಾದರೂ ಈ ಮಗುವಿಗೆ ಡ್ರಮ್ ಸೆಟ್ ಖರೀದಿಸಿ ಕೊಡಬಾರದೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈತ ತನ್ನದೇ ಆದ ಸಂಗೀತಾ ನೀಡಲು ಸಂಗೀತಾ ಪರಿಕರವನ್ನು ಸೃಷ್ಟಿಸಿದ್ದಾನೆ ಎಂದು ಮತ್ತೊಬ್ಬರು ಈ ಬಾಲಕನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಳಮಟ್ಟದಿಂದ ಬೆಳೆಯುವುದು ಅಂದರೆ ಇದೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಎಲ್ಲರ ಮನ ಸೆಳೆದಿದೆ.
ಆಫ್ರಿಕಾ ಬಡ ರಾಷ್ಟ್ರವಾದರೂ ಅಲ್ಲಿನ ಮಕ್ಕಳ ಪ್ರತಿಭೆಯಲ್ಲಿ ಯಾವುದೇ ಕೊರತೆ ಇಲ್ಲ, ಆಫ್ರಿಕನ್ ಪುಟಾಣಿಗಳ ಹಲವು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಅಲ್ಲಿನ ಪ್ರತಿಭೆ ಕಿಲಿ ಪೌಲ್ ಹಾಗೂ ಸಹೋದರಿ ನೀಮ್ ಪೌಲ್ ಅವರು ತಮ್ಮ ನೃತ್ಯ ಹಾಗೂ ನಟನೆಯ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದಾರೆ. ಈ ಅಕ್ಕ ತಮ್ಮ ಜೋಡಿ ಭಾರತದ ಬಾಲಿವುಡ್ ಹಾಡುಗಳಿಗೆ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದು, ಕೋಟ್ಯಾಂತರ ಭಾರತೀಯರು ಇವರ ಫಾಲೋವರ್ ಲಿಸ್ಟ್‌ನಲ್ಲಿದ್ದಾರೆ. ಎಲ್ಲಿಯೂ ತನ್ನತನವನ್ನು ಬಿಡದ ಕಿಲಿಪೌಲ್ ತಮ್ಮ ಬುಡಕಟ್ಟು ಸಮುದಾಯದ ಮಸಾಯ್ ವೇಷಭೂಷಣದಲ್ಲೇ ಬಾಲಿವುಡ್ ಹಾಡುಗಳಿಗೆ ಸಖತ್ ಆಗಿ ಡಾನ್ಸ್ ಮಾಡುತ್ತಾರೆ. ಇತ್ತೀಚೆಗೆ ಇವರು ಮುಂಬೈಗೂ ಇದೇ ವೇಷಭೂಷಣದಲ್ಲಿ ಭೇಟಿ ನೀಡಿ ಹಲವರ ಗಮನ ಸೆಳೆದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ