ನಿರ್ಭಯಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಹಂತಕನ ಹೊಸ ದಾಳ!

By Kannadaprabha News  |  First Published Mar 7, 2020, 9:11 AM IST

ನಿರ್ಭಯಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್| ಶಿಕ್ಷೆ ದೂಡಲು ನಿರ್ಭಯಾ ಹಂತಕನ ಹೊಸ ದಾಳ|


ನವದೆಹಲಿ[ಮಾ.07]: ಮಾರ್ಚ್ 20ಕ್ಕೆ ನಿಗದಿಯಾಗಿರುವ ಗಲ್ಲು ಶಿಕ್ಷೆಯನ್ನು ಮುಂದೂಡಲು ನಿರ್ಭಯಾ ದೋಷಿಗಳು ಮತ್ತೊಂದು ವಿಳಂಬ ದಾಳವನ್ನು ಉರುಳಿಸಿದ್ದಾರೆ.

ವಕೀಲರು ದಾರಿ ತಪ್ಪಿಸಿದ್ದು, ಹಾಗಾಗಿ ನನ್ನ ಕಾನೂನು ಹೋರಾಟವನ್ನು ಪುನಃ ಸ್ಥಾಪಿಸಬೇಕು ಎಂದು ಕೋರಿ 4 ದೋಷಿಗಳಲ್ಲಿ ಓರ್ವನಾದ ಮುಕೇಶ್‌ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಕೆಳ ನ್ಯಾಯಾಲಯಗಳು ನೀಡಿದ್ದ ತೀರ್ಪುಗಳನ್ನು ಹಾಗೂ ಕ್ಷಮಾದಾನ ಅರ್ಜಿ ತಿರಸ್ಕಾರವನ್ನು ರದ್ದು ಮಾಡಬೇಕು ಎಂದು ಕೇಳಿಕೊಂಡಿದ್ದಾನೆ.

Tap to resize

Latest Videos

ಅಲ್ಲದೇ ಈ ಪ್ರಕರಣದಲ್ಲಿ ಸಿಬಿಐ ನಡೆಸಿರುವ ತನಿಖೆಯು ಕೇಂದ್ರ ಗೃಹ ಇಲಾಖೆ, ದೆಹಲಿ ಸರ್ಕಾರ ಹಾಗೂ ಪ್ರಕರಣದ ಅಮಿಕಸ್‌ ಕ್ಯೂರಿ ವೃಂದಾ ಗ್ರೋವರ್‌ ಮಾಡಿರುವ ವ್ಯವಸ್ಥಿತ ಸಂಚು ಎಂದು ಹೇಳಿದ್ದಾನೆ.

ಸುಳ್ಳು ಹೇಳಿ ದಾಖಲೆಗಳಿಗೆ ನನ್ನಿಂದ ಸಹಿ ಹಾಕಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾನೆ. ಸೋಮವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಹೇಳಿದೆ.

ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!