ನಕ್ಸಲ್‌ ಚಟು​ವ​ಟಿ​ಕೆ: ರಾಜ್ಯದ 3 ಕಡೆ ಎನ್‌​ಐಎ ದಾಳಿ

By Kannadaprabha NewsFirst Published Oct 13, 2021, 7:56 AM IST
Highlights

*  ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಏಕಕಾಲದಲ್ಲಿ ದಾಳಿ 
*  ಚಿಕ್ಕ​ಮ​ಗ​ಳೂರು, ಉಡುಪಿ, ಶಿವ​ಮೊಗ್ಗ ಜಿಲ್ಲೆ​ಯಲ್ಲಿ ದಾಳಿ
*  ಮೊಬೈಲ್‌, ಡಿಜಿಟಲ್‌ ಸ್ಟೋರೇಜ್‌, ಸಿಮ್‌ ಸೇರಿ ಇನ್ನಿತರ ವಸ್ತುಗಳ ವಶ
 

ನವದೆಹಲಿ(ಅ.13):  2016ರಲ್ಲಿ ಕೇರಳದ ನಿಲಂಬೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಮಾವೋವಾದಿಗಳ ಶಿಬಿರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(National Investigation Force)ಮಂಗಳವಾರ ಕರ್ನಾಟಕ(Karnataka), ತಮಿಳುನಾಡು(Tamil Nadu) ಮತ್ತು ಕೇರಳದ(Kerala) 20 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ.

ಚಿಕ್ಕಮಗಳೂರು(Chikkamagaluru), ಉಡುಪಿ(Udupi) ಮತ್ತು ಶಿವಮೊಗ್ಗದ(Shivamogga) 5 ಸ್ಥಳಗಳು, ತಮಿಳುನಾಡಿನ 12 ಸ್ಥಳಗಳು ಮತ್ತು ಕೇರಳದ 3 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಈ ಸ್ಥಳಗಳಿಂದ ಮೊಬೈಲ್‌ ಫೋನ್‌ಗಳು, ಡಿಜಿಟಲ್‌ ಸ್ಟೋರೇಜ್‌ ಸಾಧನಗಳು, ಸಿಮ್‌ ಕಾರ್ಡ್‌ಗಳು, ಪುಸ್ತಕಗಳು ಸೇರಿದಂತೆ ಇನ್ನಿತರ ದಾಖಲೆಗಳು, ಭಿತ್ತಿಪತ್ರಗಳು ಹಾಗೂ ಎಡಪಂಥೀಯರ ಪ್ರಣಾಳಿಕೆಗಳನ್ನು ವಶಕ್ಕೆ ಪಡೆಯಲಾಗಿದೆ.

ಮಾಜಿ ಪೊಲೀಸ್ ಅಧಿಕಾರಿಯೇ ಮಾಸ್ಟರ್ ಮೈಂಡ್.. ಅಂಬಾನಿಯನ್ನೇ ದೋಚುವ ರೋಚಕ ಪ್ಲಾನ್!

ಸಿಪಿಐ(CPI) (ಮಾವೋವಾದಿ) ನಿಷೇಧಿತ ಸಂಘ​ಟನೆ ಸದ​ಸ್ಯರು 2016ರ ಸೆಪ್ಟೆಂಬರ್‌ನಲ್ಲಿ ನಿಲಂಬೂರು ಅರಣ್ಯದಲ್ಲಿ(Forest) ಶಸ್ತ್ರಾಸ್ತ್ರಗಳ ತರಬೇತಿ ಹಾಗೂ ಇನ್ನಿತರ ತರಬೇತಿ ಶಿಬಿರವನ್ನು ನಡೆಸುತ್ತಿದ್ದರು. ಇದ​ರಲ್ಲಿ ಐವ​ರನ್ನು ಬಂಧಿ​ಸ​ಲಾ​ಗಿದ್ದು, ಇನ್ನೂ 20 ಜನ​ರಿಗೆ ಶೋಧ ನಡೆ​ದಿದೆ. ಈ ಕಾರ​ಣಕ್ಕೆ ಈ ದಾಳಿ ನಡೆ​ಸ​ಲಾ​ಗಿ​ದೆ.

ಅಲ್ಲದೆ ದೇಶದ ಐಕ್ಯತೆಗೆ ಧಕ್ಕೆ ಮತ್ತು ಭಾರತದ(India) ಭದ್ರತೆಗೆ ಕುಂದು ಉಂಟು ಮಾಡುವ ದೇಶದ್ರೋಹಿ ಚಟುವಟಿಕೆಗಳಲ್ಲೂ ಈ ಸಂಘಟನೆ ಸದಸ್ಯರು ತೊಡಗಿಕೊಂಡಿದ್ದರು ಎಂಬ ಆರೋಪವಿದೆ. ಈ ಪ್ರಕರಣದ ಬಗ್ಗೆ 2017ರಿಂದ ತನಿಖೆ ನಡೆಸುತ್ತಿದ್ದ ಕೇರಳ ಪೊಲೀಸರು, 2021ರ ಮೇ 18ರಂದು ಐವರು ಆರೋಪಿಗಳ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿತು. ಆ ಬಳಿಕ 2021ರ ಆ.20ರಂದು ಈ ಪ್ರಕರಣದ ತನಿಖೆಯನ್ನು ಎನ್‌ಐಎ(NIA) ವಹಿಸಿಕೊಂಡಿತ್ತು. ಅಲ್ಲದೆ ಈ ಘಟನೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಸಿಪಿಐನ 20 ಸದಸ್ಯರ ವಿರುದ್ಧ ಎನ್‌ಐಎ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
 

click me!