ಪ್ರಯಾಣಿಕರಿಗೆ ಎನ್‌ಎಚ್‌ಎಐ ಆಫರ್‌: ಟೋಲ್‌ ಪ್ಲಾಜಾದಲ್ಲಿ ಕೊಳಕು ಶೌಚ ಹುಡುಕಿ ₹1000 ಗೆಲ್ಲಿ!

Published : Oct 17, 2026, 09:21 PM IST
Toll Plaza

ಸಾರಾಂಶ

ಟೋಲ್‌ ಪ್ಲಾಜಾಗಳಲ್ಲಿನ ಶೌಚಾಲಯಗಳ ಸ್ವಚ್ಛತೆ ಸುಧಾರಿಸಲು NHAI ‘ಸ್ವಚ್ಛ ಶೌಚಾಲಯ ಫೋಟೋ ಚಾಲೆಂಜ್’ ಆರಂಭಿಸಿದೆ. ಪ್ರಯಾಣಿಕರು ರಾಜ್‌ಮಾರ್ಗ್ ಯಾತ್ರಾ ಆ್ಯಪ್ ಮೂಲಕ ಶೌಚಾಲಯದ ಜಿಯೋ-ಟ್ಯಾಗ್..

ನವದೆಹಲಿ (ಅ.17): ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಟೋಲ್‌ ಪ್ಲಾಜಾಗಳಲ್ಲಿ ಶೌಚಾಲಯ ಗಬ್ಬೆದ್ದು ನಾರುತ್ತಿದೆಯೇ?, ಶುಚಿತ್ವದ ಕೊರತೆ ಎದುರಿಸುತ್ತಿದೆಯೇ? ಹಾಗಿದ್ರೆ ತಕ್ಷಣ ಅದರ ಫೋಟೋ ತೆಗೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ಕಳುಹಿಸಿಕೊಟ್ಟು 1 ಸಾವಿರ ರು. ಮೌಲ್ಯದ ಉಚಿತ ಫಾಸ್ಟ್‌ಟ್ಯಾಗ್‌ ಗೆಲ್ಲಿ!

ಟೋಲ್‌ ಪ್ಲಾಜಾಗಳ ಶೌಚಾಲಯಗಳ ಸುಧಾರಣೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾರ್ವಜನಿಕರ ಮುಂದೆ ಇಂಥದ್ದೊಂದು ಆಫರ್‌ ಮುಂದಿಟ್ಟಿದೆ. ಇದಕ್ಕಾಗಿ ರಾಷ್ಟ್ರಾದ್ಯಂತ ‘ಸ್ವಚ್ಛ ಶೌಚಾಲಯ ಫೋಟೋ ಚಾಲೆಂಜ್‌’ ಘೋಷಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ, ಪ್ರಯಾಣಿಕರು ರಾಜ್‌ಮಾರ್ಗ್ ಯಾತ್ರಾ ಆ್ಯಪ್‌ ಬಳಸಿ ಶೌಚಾಲಯದ ಫೋಟೋಗಳನ್ನು ಜಿಯೋ ಟ್ಯಾಗ್‌ ಮಾಡಿ ಅಪ್ಲೋಡ್‌ ಮಾಡಬೇಕು. ಇದರ ಜತೆಗೆ ಪ್ರಯಾಣಿಕರು ತಮ್ಮ ಹೆಸರು, ಸ್ಥಳ, ವಾಹನ ನೋಂದಣಿ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಯನ್ನೂ ದಾಖಲಿಸಬೇಕು.

ಪ್ರಯಾಣಿಕರ ವರದಿ ನಿಜವಾಗಿದ್ದರೆ ಅವರ ವಾಹನಕ್ಕೆ 1 ಸಾವಿರ ರು. ಮೌಲ್ಯದ ಫಾಸ್ಟ್‌ಟ್ಯಾಗ್‌ ಅನ್ನು ಉಚಿತವಾಗಿ ರೀಚಾರ್ಜ್‌ ಮಾಡಲಾಗುತ್ತದೆ. ಈ ಚಾಲೆಂಜ್‌ ಅ.31ರ ವರೆಗೆ ಜಾರಿಯಲ್ಲಿರಲಿದ್ದು, ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಗೂ ಅನ್ವಯ ಆಗಲಿದೆ.

ಮೊದಲ ದೂರನ್ನಷ್ಟೇ ಪರಿಗಣಿಸಲಾಗುತ್ತದೆ

ಪ್ರತಿ ವಾಹನಕ್ಕೆ ಒಂದು ಭಾರಿ ಅಷ್ಟೇ ರೀಚಾರ್ಜ್‌ ಮತ್ತು ಪ್ರತಿ ದಿನ ನಿರ್ದಿಷ್ಟ ಶೌಚಾಲಯದ ವಿರುದ್ಧದ ಒಂದು ದೂರನ್ನಷ್ಟೇ ಪರಿಗಣಿಸಲಾಗುತ್ತದೆ. ಒಂದು ವೇಳೆ ಒಂದೇ ಶೌಚಾಲಯಗಳ ಕುರಿತು ಹಲವು ದೂರು ಬಂದಿದ್ದರೆ ಮೊದಲ ದೂರನ್ನಷ್ಟೇ ಪರಿಗಣಿಸಲಾಗುತ್ತದೆ. ನಕಲಿ ಹಾಗೂ ಎಡಿಟ್‌ ಮಾಡಲಾದ ಅಥವಾ ಈ ಹಿಂದೆ ಸಲ್ಲಿಸಿದ ಫೋಟೋಗಳನ್ನು ತಿರಸ್ಕರಿಸಲಾಗುತ್ತದೆ. ಎಐ ಆಧಾರಿತ ಸ್ಕ್ರೀನಿಂಗ್‌ ಹಾಗೂ ವೈಯಕ್ತಿಕ ಪರಿಶೀಲನೆ ಯಾವುದು ಸಾಧ್ಯವೋ ಆ ವಿಧಾನದ ಮೂಲಕ ಪರಿಶೀಲಿಸಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಬಾನಿvsಮಸ್ಕ್: ಸ್ಟಾರ್‌ಲಿಂಕ್‌ಗೆ ನಿಯಮವೇ ಮುಖ್ಯವೆಂದ ರಿಲಯನ್ಸ್, ಭಾರತದಲ್ಲಿ ಇಂಟರ್ನೆಟ್ ಸೇವೆಗೆ ಸಿದ್ಧವೆಂದ ಮಸ್ಕ್
ನಿನ್ನೆ-ಮೊನ್ನೆಯ ನೇಹಾ ಬೋರಾಗೆ ಮಣೆ: ಆಂತರಿಕ ಬಿರುಕು? ಓಪನ್ನಾಗಿ ಅಸಮಾಧಾನ ಹೊರಹಾಕಿದ ಕಾರ್ಯಕರ್ತರು