ಬೆಂಗಳೂರು(ಫೆ.10): ಕರ್ನಾಟಕ ಕರಾವಳಿಯಿಂದ ಆರಂಭಗೊಂಡ ಹಿಜಾಬ್ ವಿವಾದ, ಇಡೀ ಕರ್ನಾಟಕ(Karnataka) ವ್ಯಾಪಿಸಿಕೊಂಡು ಇದೀಗ ದೇಶದಲ್ಲೇ ಸದ್ದು ಮಾಡುತ್ತಿದೆ. ಹಿಜಾಬ್‌ಗೆ(Hijab row) ಪಟ್ಟು ಹಿಡಿದ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರೆ, ಇತ್ತ ಹಿಜಾಬ್‌ಗೆ ಅವಕಾಶ ನೀಡಿದರೆ ಕೇಸರಿ ಶಾಲು ಅವಕಾಶ ನೀಡಿ ಎಂದು ಪ್ರತಿಭಟನೆ ಹಿಂಸಾಚಾರ ನಡೆಯುತ್ತಿದೆ. ಸದ್ಯ ಕರ್ನಾಟಕ ಹೈಕೋರ್ಟ್(Karnataka High Court) ಮಧ್ಯಂತರ ಆದೇಶ ನೀಡಿದೆ. ಆದರೆ 2018ರಲ್ಲಿ ಕೇರಳದಲ್ಲಿ(Kerala) ತಲೆದೋರಿದ್ದ ಇದೇ ಹಿಜಾಬ್ ಸಮಸ್ಯೆಗೆ ಕೇರಳಾ ಹೈಕೋರ್ಟ್(Kerala High Court) ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ ಶಾಲೆಯ ಸಮವಸ್ತ್ರ ಸಂಹಿತೆಗೆ ವಿರುದ್ಧವಾಗಿ ಹಿಜಾಬ್ ಧರಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದೆ.
2018ರಲ್ಲಿ ಕೇರಳ ಹೈಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಪ್ರಮುಖ ಸಾರಾಂಶ ಎಂದರೆ ಸಮವಸ್ತ್ರ ಶಾಲೆಯ(School Uniforms) ಮೂಲಭೂತ ಹಕ್ಕು. ಈ ಹಕ್ಕನ್ನು ಕಸಿದು ಇದರ ವಿರುದ್ದ ಹಿಜಾಬ್ ಧರಿಸಲು ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವ ಮನವಿ ಅರ್ಜಿಯನ್ನು ವಜಾಗೊಳಿಸಲಾಗುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
undefined
Hijab Karnataka Breaking ಹಿಜಾಬ್-ಕೇಸರಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ಹೈಕೋರ್ಟ್
ಹಿಜಾಬ್ ಪ್ರಕರಣ ಹಾಗೂ ಕೇರಳ ಹೈಕೋರ್ಟ್ ತೀರ್ಪಿನ ವಿವರಣೆ:
ಕೇರಳದ ಕ್ರೈಸ್‌ನಗರದಲ್ಲಿರುವ CMI ಶಿಕ್ಷಣ ಸಂಸ್ಥೆಯ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿನ ಫಾತಿಮಾ ತಸ್ನೀಮ್ ಹಾಗೂ ಹಫ್ಝಾ ಪ್ರವೀಣ್ ಇಸ್ಲಾಂ ಧರ್ಮದ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಶಾಲಾ ಆಡಳಿತ ಮಂಡಳಿ ಇವರ ಮನವಿಯನ್ನು ಸ್ಪಷ್ಟವಾಗಿ ನಿರಾಕರಿಸಿತ್ತು. ಇಷ್ಟೇ ಅಲ್ಲ ಶಾಲೆಯ ಸಮವಸ್ತ್ರ ಹೊರತು ಪಡಿಸಿ ಯಾವುದೇ ಧರ್ಮದ ವಸ್ತ್ರಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿತ್ತು. ಶಾಲೆ ವಿರುದ್ಧ ಪ್ರತಿಭಟನಗೆ ಇಳಿದ ಸಮುದಾಯ ನೇರವಾಗಿ ಹೈಕೋರ್ಟ್ ಕದ ತಟ್ಟಿತ್ತು.
ಫಾತಿಮಾ ತಸ್ನೀಮ್ ಹಾಗೂ ಹಫ್ಝಾ ಪ್ರವೀಣ್ ಇಸ್ಲಾಂ ರಿಟ್ ಪಿಟೀಶನ್ ಸಲ್ಲಿಸಿದ್ದರು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪು, ಸಂವಿಧಾನ ಹೇಳುವ ಮೂಲಭೂತ ಹಕ್ಕು ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ತೀರ್ಪು ನೀಡಿತ್ತು.
Hijab Row: ಹಿಜಾಬ್‌ಗೆ ಪಟ್ಟು ಹಿಡಿದ 6 ಮಂದಿಗೆ ಗುಪ್ತ ತರಬೇತಿ ನೀಡಲಾಗಿತ್ತಾ
ಸಾರ್ವಜನಿಕ ಅಥವಾ ಶಾಲೆಯ, ಸಂಸ್ಥೆಯ ಹಕ್ಕುಗಳ ವಿರುದ್ಧವಾಗಿ ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ವೈಯುಕ್ತಿಕ ಹಕ್ಕನ್ನು ಹೇರುವಂತಿಲ್ಲ. ಉಡುಪು ಧರಿಸುವ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವರದ್ದೆ ಆದ ಸ್ವಾತಂತ್ರ್ಯವಿದೆ. ಆದೇ ಸಮಯದಲ್ಲಿ ಒಂದು ಸಂಸ್ತೆಯನ್ನು ನಿರ್ವಹಿಸಲು ಹಾಗೂ ಆ ಸಂಸ್ಥೆಯಡಿ ಬರುವ ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ. ಖಾಸಗಿ ಶಾಲೆಗಳಲ್ಲಿ ಅವರದ್ದೇ ಆದ ಸಮವಸ್ತ್ರವನ್ನು ನಿಗದಿಪಡಿಸುವ ಅಧಿಕಾರವಿದೆ. ಸಮವಸ್ತ್ರ ಶಾಲೆಗಳ ಮೂಲಭೂತ ಹಕ್ಕು. ಶಾಲೆಯ ಮೂಲಭೂತ ಹಕ್ಕು ಹಾಗೂ ಭಾರತದ ಪ್ರಜೆಯ ಮಲೂಭೂತ ಹಕ್ಕಿನ ಪ್ರಶ್ನೆ ಬಂದಾಗ ನ್ಯಾಯಾಲಯ ಎರಡೂ ಹಕ್ಕಗಳನ್ನು ಸಮತೋಲನಗೊಳಿಸುತ್ತದೆ. ಶಾಲೆಯಲ್ಲಿ ಹಿಜಾಬ್ ವಿವಾದದಲ್ಲಿ ವೈಯುಕ್ತಿಕ ಹಕ್ಕಿಗಿಂತ ಶಾಲೆಯ ಮೂಲಭೂತ ಹಕ್ಕಿಗೆ ಪ್ರಾಮುಖ್ಯತೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಫಾತಿಮಾ ತಸ್ನೀಮ್ ಹಾಗೂ ಹಫ್ಝಾ ಪ್ರವೀಣ್ ಇಸ್ಲಾಂ ಧರ್ಮವನ್ನು ಅನುಸರಿಸುವವರಾಗಿದ್ದಾರೆ. ಅವರು ಹಿಜಾಬ್ ಹಾಗೂ ಬುರ್ಖಾ ಧರಿಸಿ ತರಗತಿಯಲ್ಲಿ ಅನುಮತಿ ಕೋರಿದ್ದಾರೆ. ಆದರೆ ಇದು ಶಾಲೆಯ ವಸ್ತ್ರಸಂಹಿತಿಗೆ ವಿರುದ್ಧವಾಗಿದೆ. ಈ ವಿದ್ಯಾರ್ಥಿಗಳ ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವ ಅನುಮತಿ ನೀಡುವುದು ಅಥವಾ ನಿರ್ಬಂಧಿಸುವುದು ಆಯಾ ಶಾಲೆಯ ಆಡಳಿತ ಮಂಡಳಿ ನಿರ್ಧರಿಸಲಿದೆ. ಯಾವುದೇ ಶಾಲೆಯ ವಸ್ತ್ರಸಂಹಿತೆಯ ವಿರುದ್ಧವಾಗಿ ನ್ಯಾಯಾಲಯ ಆದೇಶ ನೀಡಲು ಹಾಗೂ ಮಧ್ಯ ಪ್ರವೇಶಿಸಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಹಿಜಾಬ್‌ಗೆ ಅವಕಾಶ ನೀಡಿದಿದ್ದರೆ ಶಾಲೆಯಿಂದ ವರ್ಗಾವಣೆ ಪತ್ರ ನೀಡಿ ಎಂದು ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಈ ವಿಚಾರದ ಕುರಿತು ಕೇರಳ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಶಾಲೆಯ ವಸ್ತ್ರಸಂಹಿತಿ ಪಾಲಿಸಲು ಸಾಧ್ಯವಾಗದೆ ಶಾಲೆಯಿಂದ ವರ್ಗಾವಣೆ ಪತ್ರ ಕೇಳಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಯಾವುದೇ ಹೇಳಿಕೆ ನೀಡದೆ ವರ್ಗಾವಣೆ ಪತ್ರ ನೀಡಬೇಕು ಎಂದು ಸೂಚಿಸಿದೆ. ಇನ್ನು ಶಾಲೆಯ ಡ್ರೆಸ್ ಕೋಡ್ ಅನುಸರಿಸಲು ಸಿದ್ದರಿದ್ದರೆ ಅದೇ ಶಾಲೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಕೇರಳ ಹೈಕೋರ್ಟ್ 2018ರಲ್ಲಿ ಹಿಜಾಬ್ ಕುರಿತು ನೀಡಿದ ತೀರ್ಪಿನಲ್ಲಿ ಹೇಳಿದೆ.
ಹಿಜಾಬ್ ವಿಚಾರದಲ್ಲಿ ಎದ್ದಿರುವ ಮೂಲಭೂತ ಹಕ್ಕಿನ ಕುರಿತು ಕೇರಳ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಸಂವಿಧಾನದ ಆರ್ಟಿಕಲ್ 25ರಲ್ಲಿ ಹೇಳುವ ಮೂಲಭೂತ ಹಕ್ಕುಗಳು ಸಂಪೂರ್ಣ ಹಕ್ಕಾಗಿದ್ದು, ನಾನ್ ನೆಗೋಶಿಯೇಬಲ್ ಆಗಿವೆ. ಈ ಮೂಲಭೂತ ಹಕ್ಕುಗಳಲ್ಲಿ ಬರುವ ಸಾಪೇಕ್ಷ ಹಕ್ಕಗಳು ಸಂವಿಧಾನ ವಿಧಿಸಿದ ನಿರ್ಬಂಧಕ್ಕೆ ಒಳಪಟ್ಟಿರುತ್ತದೆ. ಧಾರ್ಮಿಕ ಹಕ್ಕುಗಳು ಸಾಪೇಕ್ಷ ಹಕ್ಕುಗಳಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.