ಐಟಿ ತಿದ್ದುಪಡಿ ನಿಯಮಕ್ಕೆ ವಿರೋಧ: ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ; ರಾಜೀವ್‌ ಚಂದ್ರಶೇಖರ್‌

Published : Apr 08, 2023, 01:38 PM ISTUpdated : Apr 08, 2023, 01:44 PM IST
ಐಟಿ ತಿದ್ದುಪಡಿ ನಿಯಮಕ್ಕೆ ವಿರೋಧ: ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ; ರಾಜೀವ್‌ ಚಂದ್ರಶೇಖರ್‌

ಸಾರಾಂಶ

ಈ ಯೂನಿಟ್‌ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಪ್ರಚಾರ ಮಾಡುವ ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳಿಗೆ ಸೂಕ್ತ ಪ್ರತಿಕ್ರಿಯೆಯಾಗಲಿದೆ. ಅಂತಹ ಮಾಹಿತಿಯನ್ನು ವಿಶ್ಲೇಷಿಸುವ ಘಟಕವು ಇದೀಗ ಸರ್ಕಾರದ್ದೇ ಆಗಿದೆ. ಮಾಹಿತಿಗಳನ್ನು ಸುಳ್ಳು ಎಂದು ಈ ಸಂಸ್ಥೆ ಘೋಷಿಸಲಿದೆ. ಇಂತಹ ಮಾಹಿತಿಗಳನ್ನು ತಮ್ಮ ವೇದಿಕೆಗಳಿಂದ ತೆಗೆಯುವ ಅಥವಾ ತೆಗೆಯದಿರುವ ಅವಕಾಶವನ್ನು ಸಾಮಾಜಿಕ ಜಾಲತಾಣಗಳಿಗೆ ನೀಡಲಾಗಿದೆ’ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದರು.

ನವದೆಹಲಿ (ಏಪ್ರಿಲ್ 8, 2023): ‘ಸರ್ಕಾರದ ವಿರುದ್ಧ ಹರಡಲಾಗುವ ಸುಳ್ಳು ಸುದ್ದಿಗಳನ್ನು ಪರಿಶೀಲನೆ ಮಾಡಲು ಫ್ಯಾಕ್ಟ್ ಚೆಕ್ಕಿಂಗ್‌ ಯೂನಿಟ್‌ ಅನ್ನು ರಚನೆ ಮಾಡಲಾಗಿದ್ದು, ಇದು ಪಾರದರ್ಶಕವಾಗಿ ಕೆಲಸ ಮಾಡಲಿದೆ. ವಾಕ್‌ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ’ ಎಂದು ಕೇಂದ್ರ ಐಟಿ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.
ಯೂನಿಟ್‌ ಬಗ್ಗೆ ವ್ಯಕ್ತವಾದ ಆಕ್ಷೇಪಕ್ಕೆ ಉತ್ತರಿಸಿದ ಅವರು, ಈ ಸಂಸ್ಥೆ ಸುದ್ದಿಗಳನ್ನು ತನ್ನಿಷ್ಟದಂತೆ ಪರಾಮರ್ಶೆಗೆ ಒಳಪಡಿಸುತ್ತದೆ ಎಂಬುದನ್ನು ತಿರಸ್ಕರಿಸಿದರು.

‘ಇದನ್ನು ಬಹಳ ನಂಬತಕ್ಕ ರೀತಿಯಲ್ಲಿ ಕೈಗೊಳ್ಳಲಾಗುತ್ತದೆ. ಈ ಯೂನಿಟ್‌ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಪ್ರಚಾರ ಮಾಡುವ ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳಿಗೆ ಸೂಕ್ತ ಪ್ರತಿಕ್ರಿಯೆಯಾಗಲಿದೆ. ಅಂತಹ ಮಾಹಿತಿಯನ್ನು ವಿಶ್ಲೇಷಿಸುವ ಘಟಕವು ಇದೀಗ ಸರ್ಕಾರದ್ದೇ ಆಗಿದೆ. ಮಾಹಿತಿಗಳನ್ನು ಸುಳ್ಳು ಎಂದು ಈ ಸಂಸ್ಥೆ ಘೋಷಿಸಲಿದೆ. ಇಂತಹ ಮಾಹಿತಿಗಳನ್ನು ತಮ್ಮ ವೇದಿಕೆಗಳಿಂದ ತೆಗೆಯುವ ಅಥವಾ ತೆಗೆಯದಿರುವ ಅವಕಾಶವನ್ನು ಸಾಮಾಜಿಕ ಜಾಲತಾಣಗಳಿಗೆ ನೀಡಲಾಗಿದೆ’ ಎಂದು ಅವರು ಹೇಳಿದರು.

ಇದನ್ನು ಓದಿ: SVBಯಲ್ಲಿ ಭಾರತದ ಸ್ಟಾರ್ಟಪ್‌ಗಳ 8000 ಕೋಟಿ ಹಣ: ನೆರವು ನೀಡಲು ಭಾರತದ ಬ್ಯಾಂಕ್‌ಗಳಿಗೆ ಸಚಿವ ಆರ್‌ಸಿ ಸಲಹೆ

ಐಟಿ ತಿದ್ದುಪಡಿ ನಿಯಮಕ್ಕೆ ಸಂಪಾದಕರ ಒಕ್ಕೂಟ ಆಕ್ಷೇಪ
ಸುಳ್ಳು ಸುದ್ದಿಗಳನ್ನು ಪರಿಶೀಲಿಸಲು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುವ ಐಟಿ ತಿದ್ದುಪಡಿ ನಿಯಮಕ್ಕೆ ಸಂಪಾದಕರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದ್ದು, ಈ ನಿಯಮವನ್ನು ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದೆ.

‘ಸುಳ್ಳುಸುದ್ದಿಗಳನ್ನು ಪರಿಶೀಲನೆ ಮಾಡಲು ಸರ್ಕಾರ ಫ್ಯಾಕ್ಟ್ ಚೆಕಿಂಗ್‌ ಯೂನಿಟ್‌ ಅನ್ನು ಸ್ಥಾಪನೆ ಮಾಡಿದೆ. ಈ ಯೂನಿಟ್‌ ಯಾವ ಸುದ್ದಿ ನಿಜ, ಯಾವುದು ಸುಳ್ಳು ಎಂಬುದನ್ನು ತೀರ್ಮಾನ ಮಾಡುವ ಸಂಪೂರ್ಣ ಅಧಿಕಾರವನ್ನು ಹೊಂದಿದೆ. ಹಾಗಾಗಿ ಇದರಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಸಂಭವವಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳು, ಇಂಟರ್ನೆಟ್‌ ಪೂರೈಕೆದಾರರು ಮತ್ತು ಇತರ ಸೇವೆಗಳನ್ನು ನೀಡುವವರಿಗೂ ಸರ್ಕಾರ ಸೂಚನೆಗಳನ್ನು ನೀಡುವ ಅಧಿಕಾರವನ್ನು ಪಡೆದುಕೊಂಡಿದೆ. ಹಾಗಾಗಿ ಈ ನಿಯಮವನ್ನು ಹಿಂಪಡೆಯಬೇಕು’ ಎಂದು ಸಂಪಾದಕರ ಒಕ್ಕೂಟ ಆಗ್ರಹಿಸಿದೆ.

ಇದನ್ನೂ ಓದಿ: ಅಮೆರಿಕ ಬ್ಯಾಂಕ್‌ ಕುಸಿತ: ಆತಂಕಗೊಂಡ ಭಾರತೀಯ ಸ್ಟಾರ್ಟಪ್‌ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!