ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ ಹೊಸ ತಳಿ ಪತ್ತೆ; ಇದು ಅತ್ಯಂತ ಅಪಾಯ!

By Suvarna News  |  First Published Apr 21, 2021, 7:16 PM IST

ಕೊರೋನಾ 2ನೇ ಅಲೆಗೆ ದೇಶವೆ ತತ್ತರಿಸಿದೆ. ಇದರ ನಡುವೆ ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಅಪಾಯಕಾರಿ ಕೊರೋನಾ ವೈರಸ್ ಹೊಸ ತಳಿ ಪತ್ತೆಯಾಗಿದೆ. ಕೊರೋನಾ ವಂಶಾವಳಿ ವೈರಸ್ ಇದಾಗಿದ್ದು. ಡಬಲ್ ರೂಪಾಂತರಿ ವೈರಸ್‌ಗಿಂತ ಪ್ರಬಲವಾಗಿದೆ. ದೇಹದಲ್ಲಿನ ರೋಗನಿರೋಧಶಕ್ತಿಯನ್ನೇ ಕುಗ್ಗಿಸಿಬಲ್ಲ ಈ ವೈರಸ್, ಭಾರತದ 2ನೇ ಅಲೆ ಅಬ್ಬರಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಹೇಳಿದ್ದಾರೆ. ಈ ಹೊಸ ತಳಿ ವೈರಸ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. 


ನವದೆಹಲಿ(ಏ.21):  ಕೊರೋನಾ ವೈರಸ್ ಸುನಾಮಿಗೆ ಭಾರತ ನಲುಗಿ ಹೋಗಿದೆ. ಸೋಂಕಿತರ ಚಿಕಿತ್ಸೆ ಇದೀಗ ಅತ್ಯಂತ ಸವಾಲಾಗಿ ಪರಿಣಮಿಸಿದೆ. ಈ ಹಿಂದೆ ಇಟಲೆ, ಅಮೆರಿಕ, ಬ್ರೆಜಿಲ್ ಎದುರಿಸಿದ ಪರಿಸ್ಥಿತಿಗಿಂತ ಇದೀಗ ಭಾರತದ ಪರಿಸ್ಥಿತಿ ಕೆಟ್ಟದಾಗಿದೆ. ಈ ಅಪಾಯದಿಂದ ಪಾರಾಗಲು ಹೆಣಗಾಡುತ್ತಿರುವಾಗಲೇ ಇದೀಗ ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಹೊಸ ತಳಿ ಪತ್ತೆಯಾಗಿದೆ. ಇಷ್ಟೇ ಪ್ರಬಲ ಸೋಂಕು ಈಗಾಗಲೇ ಶೇಕಡಾ 15 ರಷ್ಟು ಹರಡಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಹೊಸ ಡಬಲ್ ರೂಪಾಂತರಿ ವೈರಸ್ ಪತ್ತೆ; ಅಪಾಯದ ಪ್ರಮಾಣ ಮತ್ತಷ್ಟು ಹೆಚ್ಚು!.

Latest Videos

undefined

ಕೊರೋನಾ ವೈರಸ್, ರೂಪಾಂತರಿ ವೈರಸ್ ಬಳಿಕ ಇದೀಗ ಭಾರತಕ್ಕೆ ಕೊರೋನಾ ವಂಶಾವಳಿ ವೈರಸ್ ಕಾಟ ಶುರುವಾಗಿದೆ. ಹೊಸ ವೈರಸ್‌ನ್ನು B.1.618 ಗುರುತಿಸಿಸಲಾಗಿದೆ. ಇದು  E484K ಎಂಬ ರೂಪಾಂತರಿ ವೈರಸ್‌ನ್ನು ಹೊಂದಿದೆ. ಈ ರೂಪಾಂತರಿ ವೈರಸ್ ವಿದೇಶಗಳಲ್ಲಿ ಪತ್ತೆಯಾದ ಮ್ಯೂಟೇಶನ್ ವೈರಸ್‌ನಲ್ಲಿ ಹೆಚ್ಚಾಗಿ ಕಂಡುಬಂದಿದೆ.  ಈ ಹಿಂದಿನ ಎರಡೂ ವೈರಸ್‌ಗಿಂತ ಈಗ ಕಾಣಿಸಿಕೊಂಡಿರುವ ಕೋವಿಡ್ ವಂಶಾವಳಿ ವೈರಸ್ ಅತ್ಯಂತ ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಅಷ್ಟೇ ವೇಗದಲ್ಲಿ ಶರೀರದ ರೋಗ ನಿರೋಧಕ ಶಕ್ತಿ ಕುಗ್ಗಿಸಿ, ಶ್ವಾಸಕೋಶ ಸೇರಿದಂತೆ ದೇಹದ ಹಲವು ಭಾಗಗಳ ಇನ್‌ಫೆಕ್ಷನ್‌ಗೂ ಕಾರಣವಾಗುತ್ತಿದೆ. 

ಒಂದೆಡೆ ವ್ಯಾಕ್ಸಿನೇಷನ್, ಮತ್ತೊಂದೆಡೆ ರೂಪಾಂತರಿ ಕೊರೊನಾ ವೇಗ, ಎಲ್ಲೆಲ್ಲಿ, ಏನೇನು.?

ಪಶ್ಚಿಮ ಬಂಗಾಳದಲ್ಲಿ ಈ ವೈರಸ್ ಪತ್ತೆಯಾಗಿದೆ. ಬಂಗಾಳದಲ್ಲಿ 8 ಹಂತದ ಚುನಾವಣೆ ಬಲು ಜೋರಾಗಿದೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ರ್ಯಾಲಿ, ಪ್ರಚಾರ ಸಭೆ, ಮನೆ ಮನೆ ಬೇಟಿ ನಡೆಸಿದ್ದಾರೆ. ಹೀಗಾಗಿ ಇದು ಶೇಕಡಾ 15ಕ್ಕಿಂತಲೂ ಹೆಚ್ಚು ಹರಡಿರುವ ಸಾಧ್ಯತೆಯನ್ನು ತಜ್ಞರು ಒತ್ತಿ ಹೇಳುತ್ತಿದ್ದಾರೆ. ಹೊಸ ತಳಿ ವೈರಸ್ ವಿರುದ್ಧ ಕೊರೋನಾ ಲಸಿಕೆ ಶಕ್ತವಾಗಿ ಕಾರ್ಯನಿರ್ವಹಿಸುವ ಕುರಿತು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 8 ರಂದು ಹೊಸ ಕೊರೋನಾ ವೈರಸ್ ತಳಿ ಕುರಿತು ಮೊದಲ ಮಾಹಿತಿ ಹೊರಬಿದ್ದಿತ್ತು. ಭಾರತದಲ್ಲಿ ಕೊರೋನಾ ವೈರಸ್ ತಳಿಗಳ ಕುರಿತು ಸಂಶೋಧನೆ ನಡೆಸುತ್ತಿರುವ NSACOG (Indian SARS-CoV-2 Consortium on genomics) ಸಂಸ್ಥೆ, ಹೊಸ ತಳಿ ಕುರಿತು ಮಾಹಿತಿ ನೀಡಿದೆ. ವಿದೇಶಗಳಲ್ಲಿ ದಾಖಲಾದ ಕೊರೊನಾ ಪ್ರಕರಣಗಳಲ್ಲಿ ಈ ರೂಪಾಂತರಿ ವೈರಸ್ ಹೆಚ್ಚಾಗಿ ಕಾಣಬಹುದು. ಅಲ್ಲದೇ ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಕೊರೊನಾ ಪ್ರಕರಣ ಗಣನೀಯ ಏರಿಕೆಗ ಕೂಡ ಇದೆ ಕಾರಣವಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಿಂದ ಭಾರತದಲ್ಲಿ ಪ್ರತಿ ದಿನ 2.5 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗುತ್ತಿದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದೆ. ಹೀಗಾಗಿ ಹೊಸ ವೈರಸ್ ಕುರಿತು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದೇವೆ ಎಂದು  NSACOG ಹೇಳಿದೆ. 

ಕೊರೋನಾ ವಂಶಾವಳಿ ಹೊಸ ವೈರಸ್ B.1.618 ತಳಿ ಮೊದಲ ಬಾರಿಗೆ ಅಕ್ಟೋಬರ್ 25, 2020ರಂದು ಪತ್ತೆಯಾಗಿತ್ತು. ಬಳಿಕ ಮಾರ್ಚ್ 17 ರಂದು ಪತ್ತೆಯಾಗಿದೆ. ಈ ಕೊರೊನಾ ತಳಿಯ ರೂಪಾಂತರಿಗಳನ್ನು ಹೋಲುವ ವೈರಸ್ ಅಮೆರಿಕಾ, ಸ್ವಿಜರ್ಲ್ಯಾಂಡ್ ಮತ್ತು ಫಿನ್‌ಲ್ಯಾಂಡ್‌ಗಳಲ್ಲಿ   ಪತ್ತೆಯಾಗಿವೆ. ಈ ರೂಪಾಂತರಿ ಕೊರೊನಾ ಅತ್ಯಂತ ವೇಗದಲ್ಲಿ ಮನುಷ್ಯನ ದೇಹದ ಕೋಶಗಳಿಗೆ ಅಂಟಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. 
ಆದರೆ ʼಪಶ್ಚಿಮ ಬಂಗಾಳದಲ್ಲಿ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳಿಗೆ ಈ ರೂಪಾಂತರಿ ವೈರಸ್ ಕಾರಣ ಎಂದು ನಿರ್ಣಾಯಕವಾಗಿ ಹೇಳಲಾಗುವುದಿಲ್ಲ. ಬೇರೆ ರಾಜ್ಯದಲ್ಲಿ ಸಂಖ್ಯೆ ಹೆಚ್ಚಾಗುವಂತೆ ಈ ರಾಜ್ಯದಲ್ಲೂ ಹೆಚ್ಚಾಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 1 ರಂದು 829 ಪ್ರಕರಣಗಳು ದಾಖಲಾಗಿದ್ದವು. ಅದರೆ ಈಗ ದಿನವೊಂದಕ್ಕೆ 7000 ಪ್ರಕರಣಗಳು ದಾಖಲಾಗುತ್ತಿದ್ದು ಮಂಗಳವಾರ (ಏಪ್ರಿಲ್ 20) ಸಕ್ರಿಯ ಪ್ರಕರಣಗಳ ಸಂಖ್ಯೆ 53,000 ದಾಟಿದೆ ಎಂದು INSACOG ವಿಜ್ಞಾನಿ ವಿನೋದ ಸ್ಕೇರಿಯಾ ತಿಳಿಸಿದ್ದಾರೆ.

click me!