4 ತಿಂಗಳ ಬಳಿಕ ಮೋದಿ, ನೇಪಾಳ ಪ್ರಧಾನಿ ಚರ್ಚೆ: ಶುಭಾಶಯ ಹೇಳಿದ ಒಲಿ| ಭಾರತ ಗಡಿಯಲ್ಲಿ 80 ಕಿ.ಮೀ. ಉದ್ದದ ಸೇತುವೆಯನ್ನು ನಿರ್ಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನೇಪಾಳ
ನವದೆಹಲಿ(ಆ.16): ಗಡಿ ವಿಚಾರವಾಗಿ ಕ್ಯಾತೆ ತೆಗೆದಿದ್ದ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು 4 ತಿಂಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸ್ವಾತಂತ್ರ್ಯ ದಿನಕ್ಕೆ ಶುಭಾಶಯ ಕೋರಿದ್ದಾರೆ.
ಭಾರತ ಗಡಿಯಲ್ಲಿ 80 ಕಿ.ಮೀ. ಉದ್ದದ ಸೇತುವೆಯನ್ನು ನಿರ್ಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನೇಪಾಳ ಸರ್ಕಾರ, ಭಾರತದ ಭೂ ಭಾಗವನ್ನು ಒಳಗೊಂಡ ನಕ್ಷೆಯೊಂದನ್ನು ಬಿಡುಗಡೆ ಮಾಡಿತ್ತು. ಇದು ಉಭಯ ದೇಶಗಳ ಮಧ್ಯೆ ವಿವಾದಕ್ಕೆ ಕಾರಣವಾಗಿತ್ತು. ಇದೇ ವೇಳೆ ಅಮೆರಿಕ ಸೇರಿ ಹಲವು ದೇಶಗಳು ಕೂಡ ಶುಭ ಕೋರಿವೆ.
ಭಾರತೀಯರು ನೇಪಾಳ ಪ್ರವೇಶಕ್ಕೆ ID ಕಾರ್ಡ್ ಕಡ್ಡಾಯ; ಹೊಸ ನೀತಿ ಪ್ರಕಟಿಸಿದ ಪ್ರಧಾನಿ ಶರ್ಮಾ!
ಕಳೆದ 4 ತಿಂಗಳ ಅವಧಿಯಲ್ಲಿ ಮೋದಿ ಹಾಗೂ ಒಲಿ ಅವರ ನಡುವಿನ ಮೊದಲ ನೇರ ಸಂಭಾಷಣೆ ಇದಾಗಿದೆ. ಈ ವೇಳೆ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಯಿತೇ ಎಂಬುದು ತಿಳಿದುಬಂದಿಲ್ಲ.
ಅಮೆರಿಕದಿಂದ ಭಾರತಕ್ಕೆ ಶುಭಾಶಯ
ವಾಷಿಂಗ್ಟನ್: ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಅಮೆಕ ಭಾರತಕ್ಕೆ ಶುಭಾಶಯಕೋರಿದೆ. ಅಮೆರಿಕ ಸರ್ಕಾರದ ಪರವಾಗಿ ಟ್ವೀಟ್ ಮಾಡಿರುವ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೆಂಪೋ, ‘ಉಭಯ ದೇಶಗಳು ಅತ್ಯುತ್ತಮ ಸ್ನೇಹ ಸಂಬಂಧ ಹಾಗೂ ಪ್ರಜಾಪ್ರಭುತ್ವ ಪರಂಪರೆಯನ್ನು ಹೊಂದಿವೆ. ಅಮೆರಿಕ ಸರ್ಕಾರ ಮತ್ತು ಅಮೆರಿಕದ ಜನತೆಯ ಪರವಾಗಿ ನಾನು ಭಾರತೀಯರಿಗೆ ಸ್ವಾತಂತ್ರ್ಯದಿನದ ಶುಭಾಶಯ ಕೋರುತ್ತೇನೆ’ ಎಂದು ಹೇಳಿದ್ದಾರೆ.