ಸಿಕ್ಕಿಂ ರೀತಿ ಲಡಾಖ್‌ ಇಂಗಾಲ ಮುಕ್ತ!

By Kannadaprabha NewsFirst Published Aug 16, 2020, 8:42 AM IST
Highlights

ಕೇಂದ್ರಾಡಳಿತ ಪ್ರದೇಶ ಲಡಾಖ್‌ ಅನ್ನು ಇಂಗಾಲ ಮುಕ್ತ ಪ್ರೇದೇಶವನ್ನಾಗಿಸುವ ಗುರಿ| ಸಿಕ್ಕಿಂ ರೀತಿ ಲಡಾಖ್‌ ಇಂಗಾಲ ಮುಕ್ತ| 

ನವದೆಹಲಿ(ಆ.16): ಕೇಂದ್ರಾಡಳಿತ ಪ್ರದೇಶ ಲಡಾಖ್‌ ಅನ್ನು ಇಂಗಾಲ ಮುಕ್ತ ಪ್ರೇಶವವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಸ್ವಾತಂತ್ರ್ಯೋತ್ಸವದ ಸಮಾರಂಭದ ವೇಳೆ ಮಾತನಾಡಿದ ಮೋದಿ, ಸಿಕ್ಕಿಂ ರೀತಿ ಲಡಾಖ್‌ ಅನ್ನು ಇಂಗಾಲ ಮುಕ್ತ ಪ್ರದೇಶವನ್ನಾಗಿಸಲು ಪ್ರಯತ್ನಿಸಲಾಗುವುದು. ಲಡಾಖ್‌ನಲ್ಲಿ ಹಲವಾರು ಸೌರ ಮತ್ತು ಪವನ ವಿದ್ಯುತ್‌ ಯೋಜನೆಗಳು ಜಾರಿಯಲ್ಲಿದ್ದು, 7500 ಮೆಗಾವ್ಯಾಟ್‌ ಸೌರ ವಿದ್ಯುತ್‌ ಉತ್ಪಾದನೆ ಆಗಲಿದೆಎಂದಿದ್ದಾರೆ.

14 ಸಾವಿರ ಅಡಿ ಎತ್ತರದ ಲಡಾಖ್ ಗಡಿಯಲ್ಲಿ ಮೊಳಗಿದ ಜೈ ಹಿಂದ್ ಘೋಷಣೆ!

ಅಲ್ಲದೇ ಇದರಿಂದ ಲಡಾಖ್‌ನಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣ ಗಣನೀಯವಾಗಿ ಕಡಿಮೆ ಆಗಲಿದೆ. ಭಾರತದ ಒಟ್ಟಾರೆ ಇಂಗಾಲ ಹೊರಸೂಸುವಿಕೆಯಲ್ಲಿ ಲಡಾಖ್‌ ಕೇವಲ 0.1ರಷ್ಟುಕೊಡುಗೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಲಡಾಖ್‌ ಅನ್ನು ಇಂಗಾಲ ಮುಕ್ತ ಮಾಡಲಾಗುವುದು ಎಂದು ಹೇಳಿದ್ದಾರೆ.

click me!