ಗಡಿಯಲ್ಲಿ ಮತ್ತೆ ನೇಪಾಳ ಗ್ರಾಮಸ್ಥರ ಕಲ್ಲತೂರಾಟ, ಭಾರತೀಯ ಕಾರ್ಮಿಕರ ಗುರಿಯಾಗಿಸಿ ದಾಳಿ!

By Suvarna News  |  First Published Jan 5, 2023, 3:47 PM IST

ಭಾರತ ಹಾಗೂ ನೇಪಾಳ ಗಡಿ ಈಗಾಗಲೇ ಹಲವು ಭಾರಿ ಉದ್ವಿಘ್ನಗೊಂಡಿದೆ. ರಾಜಕೀಯ, ದ್ವಪಕ್ಷೀಯ ಸಂಬಂಧ ಸೇರಿದಂತೆ ಹಲವು ಕಾರಣಗಳಿದೆ ಗಡಿಯಲ್ಲಿ ಕಿತ್ತಾಟ ನಡೆದಿದೆ. ಇದೀಗ ನೇಪಾಳ ಗ್ರಾಮಸ್ಥರು ಮತ್ತೆ ಭಾರತೀಯ ಕಾರ್ಮಿಕರ ಮೇಲೆ ಕಲ್ಲು ತೂರಾಟ ನಡೆಸಿದೆ. ಇಧರಿಂದ ಗಡಿಯಲ್ಲಿ ಪರಿಸ್ಥಿತಿ ಉದ್ವಘ್ನವಾಗಿದೆ.


ಉತ್ತರಖಂಡ(ಜ.05):  ಭಾರತ ಹಾಗೂ ನೇಪಾಳ ಗಡಿ ಪ್ರದೇಶದಲ್ಲಿ ಮತ್ತೆ ಪರಿಸ್ಥಿತ ಉದ್ವಿಘ್ನಗೊಂಡಿದೆ. ಭಾರತ ಹಾಗೂ ನೇಪಾಳ ಗಡಿ ನಡುವೆ ಹರಿಯುತ್ತಿರುವ ಕಾಳಿ ನದಿ ದಂಡ ಮೇಲೆರುವ ದಾರುಚುಲಾ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಮಿಕರ ಮೇಲೆ ನೇಪಾಳಿ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ. ಕಾಳಿ ನದಿಯ ಭಾರತೀಯ ದಂಡೆಗಳಲ್ಲಿ ಪ್ರವಾಹದಿಂದ ಗ್ರಾಮವನ್ನು ರಕ್ಷಿಸಲು ರಕ್ಷಣಾ ದಂಡೆ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ವಿರೋಧಿಸಿ ನೇಪಾಳಿ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ. ಈಗಾಗಲೇ ನೇಪಾಳ ದಂಡೆಯಲ್ಲಿ ನೇಪಾಳ ಸರ್ಕಾರ  5 ಕಿಲೋಮೀಟರ್ ರಕ್ಷಣಾ ದಂಡೆ ನಿರ್ಮಾಣ ಮಾಡಿದೆ. ಇದೀಗ ಭಾರತದ ದಾರುಚುಲಾ ಗ್ರಾಮವನ್ನು ಪ್ರವಾಹದಿಂದ ರಕ್ಷಿಸಲು ರಕ್ಷಣಾ ದಂಡೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ನೇಪಾಳದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಕಲ್ಲುತೂರಾಟ ನಡೆಸಿದ್ದಾರೆ.

ಕಳೆದ 50 ದಿನಗಳಿಂದ ಕಾಳಿ ನದಿ ದಂಡೆಯ ಭಾರತೀಯ ಬದಿಯಲ್ಲಿ ರಕ್ಷಣಾ ದಂಡೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಹಲವು ಬಾರಿ ನೇಪಾಳಿ ಗ್ರಾಮಸ್ಥರು ಕಾರ್ಮಿಕರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜನವರಿ 4 ರಂದು ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಲ್ಲು ತೂರಾಟ ನಡೆಸಿದ ಕಾರಣ ತಕ್ಷಣವೇ ಕಾರ್ಮಿಕರು ಹಾಗೂ ಭಾರತೀಯ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. 

Tap to resize

Latest Videos

Nepal PM Pushpa Kamal Dahal: ಮೂರನೇ ಬಾರಿಗೆ ನೇಪಾಳದ ಪ್ರಧಾನಿಯಾದ ಕಮಲ್ ಪ್ರಚಂಡ

ಈ ಕುರಿತು ನೇಪಾಳಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಧಕ್ಕೆ ತರುತ್ತಿರುವ ನೇಪಾಳಿ ಕಿಡಿಗೇಡಿಗಳನ್ನು ಬಂದಿಸುವಂತೆ ದಾರುಚುಲಾ ಉಪ ಜಿಲ್ಲಾಧಿಕಾರಿ ದಿವೇಶಿ ಶಶನಿ ಹೇಳಿದ್ದಾರೆ. ಪ್ರತಿ ಬಾರಿ ಪ್ರವಾಹ ವಾದಾಗ ದಾರುಚುಲಾ ಗ್ರಾಮ ತೀವ್ರ ಸಮಸ್ಯೆ ಅನುಭವಿಸುತ್ತಿದೆ. ಇದನ್ನು ತಡೆಯಲು 985 ಮೀಟರ್ ಉದ್ದದ ರಕ್ಷಣಾ ದಂಡೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ನೇಪಾಳ ಸರ್ಕಾರದ ಯಾವುದೇ ವಿರೋಧವಿಲ್ಲ. ಆದರೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ದಿವೇಶಿ ಹೇಳಿದ್ದಾರೆ.

ನೇಪಾಳಿಗರು ಕಲ್ಲು ತೂರಾಟ ವಿರೋಧಿಸಿ ಗಡಿಯಲ್ಲಿರುವ ಭಾರತೀಯ ಗ್ರಾಮಸ್ಥರು, ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ. ನೇಪಾಳ ಸಂಪರ್ಕಿಸುವ ಕಾಳಿ ಸೇತುವೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಭಾರತ ಬದಿಯಲ್ಲಿ ರಕ್ಷಣಾ ದಂಡೆ ಕಟ್ಟುವುದರಿಂದ ನದಿ ನೇಪಾಳದತ್ತ ಹರಿಯಲಿದೆ. ಇದರಿಂದ ಪ್ರವಾಹದ ಸಂದರ್ಭದಲ್ಲಿ ಹೆಚ್ಚಿನ ಅನಾಹುತಗಳು ನೇಪಾಳ ಗ್ರಾಮಕ್ಕೆ ಆಗಲಿದೆ ಅನ್ನೋ ಆತಂಕದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಪ್ರವಾಹದಿಂದ  ಎರಡು ರಾಷ್ಟ್ರಗಳಿಗೆ ಅಪಾಯ ಆಗದಿರಲು ದಂಡ ಕಟ್ಟಲಾಗುತ್ತಿದೆ. 

 

MukthinathaTemple ನೇಪಾಳದಲ್ಲಿದೆ ಮುಕ್ತಿನಾಥ ದೇಗುಲ; ಅಷ್ಟಕ್ಕೂ ಯಾರೀ ಮುಕ್ತಿನಾಥ?

ಭಾರತದ ದೂರನ್ನು ಸ್ವೀಕರಿಸಿರುವ ನೇಪಾಳಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಉತ್ತರಖಂಡದ ರಾಜ್ಯದ ಗಡಿಯಲ್ಲಿರುವ ಕಾಳಿ ನದಿ ದಂಡೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಂಘರ್ಷಗಳು ನಡೆಯುತ್ತಿದೆ. ಪ್ರಮುಖವಾಗಿ ಕಾಳಿ ನದಿ ಪ್ರವಾಹ ಭಾರತ ಹಾಗೂ ನೇಪಾಳಕ್ಕೆ ತೀವ್ರ ಹಾನಿಯನ್ನುಂಟು ಮಾಡಿದೆ. ಭಾರತಕ್ಕಿಂತ ನೇಪಾಳದಲ್ಲಿ ಅನಾಹುತ ಸೃಷ್ಟಿಸಿದೆ. ಹೀಗಾಗಿ ಭಾರತ ವೈಜ್ಞಾನಿಕವಾಗಿ ರಕ್ಷಣಾ ದಂಡೆ ನಿರ್ಮಾಣ ಮಾಡುತ್ತಿದೆ. ಆದರೆ ನೇಪಾಳ ಈಗಾಗಲೇ 5 ಕಿಲೋಮೀಟರ್ ರಕ್ಷಣಾ ದಂಡೆ ನಿರ್ಮಾಣ ಮಾಡಿದೆ. ಆದರೆ ಈ ದಂಡೆಯಲ್ಲಿ ಕೆಲ ಲೋಪಗಳಿರುವುದರಿಂದ ಪ್ರವಾಹ ಸಮರ್ಥವಾಗಿ ತಡೆದಿಲ್ಲ. ಇದು ನೇಪಾಳದ ಆತಂಕಕ್ಕೆ ಕಾರಣವಾಗಿದೆ. ಇದೀಗ ಭಾರತದ ದಂಡೆಯಿಂದ ನೇಪಾಳ ಕಾಳಿ ನದಿ ತಟದಲ್ಲಿರುವ ಗ್ರಾಮಗಳು ಮಳುಗಡೆಯಾಗಲಿದೆ ಅನ್ನೋ ಆತಂಕ ಕಾಡುತ್ತಿದೆ.

click me!