ಮತ್ತೆ ಗಡಿಯಲ್ಲಿ ಸಂಘರ್ಷ: ಭಾರತ ನಿವಾಸಿಗಳ ಮೇಲೆ ನೇಪಾಳ ಪೊಲೀಸರಿಂದ ಹಲ್ಲೆ!

Published : Jul 25, 2020, 08:56 PM IST
ಮತ್ತೆ ಗಡಿಯಲ್ಲಿ ಸಂಘರ್ಷ: ಭಾರತ ನಿವಾಸಿಗಳ ಮೇಲೆ ನೇಪಾಳ ಪೊಲೀಸರಿಂದ ಹಲ್ಲೆ!

ಸಾರಾಂಶ

ಚೀನಾ ಜೊತೆ ಜೊತೆಗೆ ನೇಪಾಳ ಗಡಿಯಲ್ಲೂ ಉದ್ವಿಘ್ನ ವಾತಾವಾರಣ ನಿರ್ಮಾಣವಾಗಿತ್ತು. ಆದರೆ ಭಾರತ ಶಾಂತವಾಗಿ ಕಮಾಂಡರ್ ಮಟ್ಟದ ಮಾತುಕತೆ ಮೂಲಕ ನೇಪಾಳ ಗಡಿ ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಿತ್ತು. ಈ ಪ್ರಯತ್ನಗಳು ನಡೆಯುತ್ತಿರುವಾಗಲೇ ನೇಪಾಳ ಪೊಲೀಸ್ ಮತ್ತೆ ಕಿರಿಕ್ ಶುರು ಮಾಡಿದೆ. ಇದೀಗ ಭಾರತ ನಿವಾಸಿಗಳ ಮೇಲೆ ಗಂಭೀರ ಹಲ್ಲೆ ಮಾಡಿದೆ.

ಖರಸಲ್ವಾ(ಜು.25):  ಭಾರತ -ಪಾಕಿಸ್ತಾನ, ಭಾರತ-ಚೀನಾ ಗಡಿ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಭಾರತ-ಚೀನಾ ಗಡಿ ಸಮಸ್ಸೆ ತೀರಾ ಇತ್ತಿಚೆಗಿನ ಬೆಳವಣಿಗೆ. ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆ ಆಕ್ರಮಣದ ಬೆನ್ನಲ್ಲೇ ನೇಪಾಳ ಕೂಡ ಗಡಿ ಸಂಘರ್ಷ ಆರಂಭಿಸಿತ್ತು. ಭಾರತದ ಗ್ರಾಮಸ್ಥರ ಮೇಲೆ ಗುಂಡಿನ ಮಳೆಗೆರೆದಿತ್ತು. ಈ ಬೆಳವಣಿಗೆ ಬಳಿಕ ಮಾತುಕತೆ ಮೂಲಕ ಪರಿಸ್ಥಿತಿ ಶಾಂತಗೊಳಿಸುವ ಪ್ರಯತ್ನ ನಡೆದಿತ್ತು. ಭಾರತ-ನೇಪಾಳ ಗಡಿ ಶಾಂತವಾಯಿತು ಅನ್ನುವಷ್ಟರಲ್ಲೇ ಮತ್ತೆ ನೇಪಾಳ ಕಿರಿಕ್ ಆರಂಭಿಸಿದೆ.

'ಶ್ರೀರಾಮ ಭಾರತೀಯನಲ್ಲ, ಭಾರತದಿಂದ ನಕಲಿ ಅಯೋಧ್ಯೆ ಸೃಷ್ಟಿ

ಭಾರತ-ನೇಪಾಳ ಗಡಿಯಲ್ಲಿರುವ ಖರಸಲ್ವಾ ಗ್ರಾಮಸ್ಥರ ಮೇಲೆ ನೇಪಾಳ ಭದ್ರತಾ ಪೊಲೀಸ್ ಸೂಚನೆ ನೀಡದೆ ಹಲ್ಲೆ ಮಾಡಿದೆ. ರವೀಂದ್ರ ಪ್ರಸಾದ್ ಹಾಗೂ ಆತನ ಪತ್ನಿ ಸೀಮಾ ದೇವಿ ದನಗಳಿಗೆ ಮೇವು ತರಲು ನೇಪಾಳ ಗಡಿ ಸಮೀಪಕ್ಕೆ ತೆರಳಿದ್ದಾರೆ. ಈ ವೇಳೆ ಏಕಾಏಕಿ ನುಗ್ಗಿದ ನೇಪಾಳ ಪೊಲೀಸರು ಸೀಮಾ ದೇವಿಯನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ತಲೆಗೆ ಗಂಭೀರವಾದ ಗಾಯದಿಂದ ಚೀರಿಕೊಂಡ ಪತ್ನಿಯನ್ನು ರಕ್ಷಿಸಲು ರವೀಂದ್ರ ಪ್ರಸಾದ್ ಮುಂದಾಗಿದ್ದಾರೆ.

ಭಾರತದ ನ್ಯೂಸ್‌ ಚಾನಲ್‌ಗಳಿಗೆ ನೇಪಾಳ ನಿಷೇಧ!.

ಈ ವೇಳೆ ರವೀಂದ್ರ ಪ್ರಸಾದ್ ಅವರ ಮೇಲೂ ನೇಪಾಳ ಪೊಲೀಸ್ ಹಲ್ಲೆ ಮಾಡಿದೆ. ಇಷ್ಟೇ ಅಲ್ಲ ರವೀಂದ್ರ ಪ್ರಸಾದ್ ಅವರನ್ನು ವಶಕ್ಕೆ ಪಡೆದಿದೆ.. ನೇಪಾಳ ಪೊಲೀಸರ ವಿರುದ್ಧ ಖರಸಲ್ವಾ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ಗ್ರಾಮಸ್ಥರು ಜಮಾಯಿಸಿದ ಕಾರಣ ನೇಪಾಳ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದಾರೆ. ಇದೇ ವೇಳೆ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ ನೇಪಾಳ ಭದ್ರತಾ ಪೊಲೀಸ್‌ನನ್ನು ಭಾರತೀಯ ಗ್ರಾಮಸ್ಥರು ಹಿಡಿದಿದ್ದಾರೆ. 

ಈ ಘಟನೆಯಿಂದ ಭಾರತ-ನೇಪಾಳ ಗಡಿಯಲ್ಲಿ ಪರಿಸ್ಥಿತಿ ಉದ್ವಿಘ್ನವಾಗಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಭಾರತೀಯ ಪೊಲೀಸ್ ಹಾಗೂ ಅಧಿಕಾರಿಗಳು ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಇಷ್ಟೇ ಅಲ್ಲ ಗ್ರಾಮಸ್ಥರ ವಶದಲ್ಲಿದ್ದ ನೇಪಾಳ ಪೊಲೀಸ್ ಬಿಡುಗಡೆ ಮಾಡಿದ್ದಾರೆ. ಇಷ್ಟೇ ಅಲ್ಲ ನೇಪಾಳ ಪೊಲೀಸ್ ವಶಕ್ಕೆ ಪಡೆದಿದ್ದ ರವೀಂದ್ರ ಪ್ರಸಾದ್ ಅವರನ್ನು ಬಿಡುಗಡೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್