
ಧನಾಬಾದ್: ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರ್‌ಲಾಲ್ ಮಾಲೆ ತೊಡಿಸಿದರು ಎಂಬ ಕಾರಣಕ್ಕೆ, ತಮ್ಮ ಬುಡಕಟ್ಟಿನಿಂದ ಬಹಿಷ್ಕಾರಕ್ಕೆ ತುತ್ತಾಗಿ, ನೆಹರು ಅವರ 'ಬುಡಕಟ್ಟು ಪತ್ನಿ' ಎಂದೇ ಖ್ಯಾತರಾಗಿದ್ದ ಬುಧನಿ ಮಾಂಝಿಹೈನ್ ಇತ್ತೀಚೆಗೆ ನಿಧನರಾಗಿದ್ದಾರೆ.
ಪುತ್ರಿ ರತ್ನಾ ಅವರೊಂದಿಗೆ ವಾಸಿಸುತ್ತಿದ್ದ ಬುಧನಿ ವಯೋಸಹಜ ಸಮಸ್ಯೆಗಳಿಂದ ನಿಧನರಾದರು. 1959ರಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಅಂದಿನ ಬಿಹಾರ ರಾಜ್ಯದ ಭಾಗವಾಗಿದ್ದ ಧನಾಬಾದ್‌ಗೆ ನೆಹರು ಅವರು ಹೋಗಿದ್ದಾಗ, ಅಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಬುಧನಿ ಅವರಿಗೆ ನೆಹರೂ ಮಾಲೆ ತೊಡಿಸಿದ್ದರು. ಇದರಿಂದ ಸಿಟ್ಟಾಗಿದ್ದ ಸಂತಾಲಿ ಬುಡಕಟ್ಟಿನ ಮುಖಂಡರು ಬುಧನಿ ಅವರನ್ನು ಊರಿನಿಂದ ಹೊರಹಾಕಿದ್ದಲ್ಲದೆ, ಮತ್ತೆ ಊರಿಗೆ ಬರದಂತೆ ನಿಷೇಧ ಹೇರಿದ್ದರು.
ಮಾಜಿ ಪ್ರಧಾನಿ ನೆಹರೂ ಆ ಒಂದು ನಿರ್ಧಾರ ಮಾಡದಿದ್ದರೆ ಭಾರತ ಇಂದು ವಿಶ್ವ ಕ್ರಿಕೆಟ್‌ನಲ್ಲಿರುತ್ತಿರಲಿಲ್ಲ!
ಇದಾದ ಬಳಿಕ ಬುಧನಿ ಜಾರ್ಖಂಡ್‌ಗೆ ತೆರಳಿ ಅಲ್ಲಿನ ಸರ್ಕಾರಿ ಸ್ವಾಮ್ಯದ ಗಣಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬುಧನಿ, ನಮ್ಮ ಬುಡಕಟ್ಟಿನ ನಿಯಮಗಳ ಪ್ರಕಾರ ಮಾಲೆ ತೊಡಿಸಿದರೆ ಮದುವೆಯಾದಂತೆ. ಹೀಗಾಗಿ ನನ್ನನ್ನು ನೆಹರು ಅವರ ಪತ್ನಿ ಎಂದು ಹೇಳಿ ಊರಿನಿಂದ ಬಹಿಷ್ಕಾರ ಹಾಕಿದ್ದರು ಎಂದು ಹೇಳಿದ್ದರು. ಬುಧನಿ ಅವರ ಸಾವಿಗೆ ಹಲವಾರು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಸ್ಥಳೀಯ ನಾಯಕರು ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.
ಲೋಕಸಭೆಯಲ್ಲಿ ಮಾಜಿ ಪ್ರಧಾನಿಗಳ ಸ್ಮರಣೆ: ಅಟಲ್, ನೆಹರು ಹೊಗಳಿದ ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ