ಜುಲೈವೊಂದರಲ್ಲೇ 50 ಲಕ್ಷ ನೌಕರರ ಉದ್ಯೋಗ ನಷ್ಟ!

By Suvarna NewsFirst Published Aug 19, 2020, 8:51 AM IST
Highlights

ಜುಲೈವೊಂದರಲ್ಲೇ 50 ಲಕ್ಷನೌಕರರ ಉದ್ಯೋಗ ನಷ್ಟ!| ಸಂಬಳದಾರ ನೌಕರರ ವಜಾದಿಂದ ಆತಂಕ

ಮುಂಬೈ(ಆ.19): ಕೊರೋನಾ ವೈರಸ್‌ ಉಪಟಳದಿಂದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿರುವ ಹಿನ್ನೆಲೆಯಲ್ಲಿ ಜುಲೈವೊಂದರಲ್ಲೇ ಬರೋಬ್ಬರಿ 50 ಲಕ್ಷ ಮಂದಿ ಸಂಬಳದಾರ ನೌಕರರು ಕೆಲಸ ಕಳೆದುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದರೊಂದಿಗೆ ಕೊರೋನಾ ಆರಂಭವಾದ ಬಳಿಕ ಉದ್ಯೋಗ ನಷ್ಟಅನುಭವಿಸಿದ ವೇತನ ವರ್ಗದವರ ಸಂಖ್ಯೆ 1.89 ಕೋಟಿಗೆ ಹೆಚ್ಚಳವಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಸ್ಯಾಟ್ಸ್‌ ಮೂಲಕ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಚಾಲನೆ

ಕಳೆದ ಏಪ್ರಿಲ್‌ನಲ್ಲಿ ವೇತನ ಆದಾಯ ಹೊಂದಿರುವ 1.77 ಕೋಟಿ ನೌಕರರ ಉದ್ಯೋಗ ಹೋಗಿತ್ತು. ಮೇ ತಿಂಗಳಿನಲ್ಲಿ 1 ಲಕ್ಷ ಮಂದಿ ನೌಕರಿ ಕಳೆದುಕೊಂಡಿದ್ದರು. ಆದರೆ ಜೂನ್‌ನಲ್ಲಿ 39 ಲಕ್ಷ ಮಂದಿಗೆ ಕೆಲಸ ಸಿಕ್ಕಿತ್ತು. ಇದೀಗ ಜುಲೈನಲ್ಲಿ 50 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ ಮಾಹಿತಿ ನೀಡಿದೆ.

ಮಧ್ಯಪ್ರದೇಶ ಸರ್ಕಾರಿ ಉದ್ಯೋಗ ಶೇ.100 ಸ್ಥಳೀಯರಿಗೇ ಮೀಸಲು, ಕಾನೂನು ಜಾರಿ!

ದೇಶದ ಒಟ್ಟಾರೆ ಉದ್ಯೋಗಗಳಲ್ಲಿ ಮಾಸಿಕ ವೇತನ ಪಡೆಯುವವರ ಪ್ರಮಾಣ ಶೇ.21ರಷ್ಟಿದೆ. ಆರ್ಥಿಕತೆಗೆ ಹೊಡೆತ ಬಿದ್ದಾಗ ಬೇಗನೆ ಚೇತರಿಸಿಕೊಳ್ಳುವುದು ಇದೇ ವರ್ಗದ ಉದ್ಯೋಗಿಗಳು. ಏಪ್ರಿಲ್‌ನಲ್ಲಿ ಶೇ.15ರಷ್ಟುಸಂಬಳದಾರ ನೌಕರರು ಕೆಲಸ ಕಳೆದುಕೊಂಡಿದ್ದರು. ವಿಶೇಷ ಎಂದರೆ, ವೇತನದಾರ ನೌಕರರ ಕೆಲಸ ಸುಲಭವಾಗಿ ಹೋಗುವುದಿಲ್ಲ. ಒಮ್ಮೆ ಹೋದರೆ, ಅದನ್ನು ಮರಳಿ ಗಳಿಸುವುದು ಕಷ್ಟ. ಹೀಗಾಗಿ ವೇತನ ವರ್ಗದಲ್ಲಿ ಕೆಲಸ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಸಂಸ್ಥೆ ತಿಳಿಸಿದೆ.

click me!