ಪ್ರತಿದಿನ 80 ಕೋಟಿ ಸಾಲ ಪಡೆದು ಪಂಜಾಬ್‌ನಲ್ಲಿ ಆಪ್‌ ಸರ್ಕಾರ ನಡೆಸುತ್ತಿದೆ: ನವಜೋತ್‌ ಸಿಂಗ್‌ ಸಿಧು ಆರೋಪ!

By Santosh Naik  |  First Published Jan 17, 2024, 3:23 PM IST

ಪಂಜಾಬ್‌ನಲ್ಲಿ ಭಗವಂತ್‌ ಸಿಂಗ್‌ ಮಾನ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಸರ್ಕಾರ ಕೆಟ್ಟ ಆರ್ಥಿಕ ನೀತಿಯನ್ನು ಹೊಂದಿದ್ದು, ಪ್ರತಿ ದಿನ ಸರ್ಕಾರ 80 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳುತ್ತಿದೆ ಎಂದು ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಹೇಳಿದ್ದಾರೆ.
 


ನವದೆಹಲಿ (ಜ.17): ಪಂಜಾಬ್‌ನಲ್ಲಿ ಭಗವಂತ್‌ ಸಿಂಗ್‌ ಮಾನ್‌ ನೇತೃತ್ವದ ಸರ್ಕಾರ ಜನರಿಗೆ ಸುಳ್ಳುಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ. ತನ್ನ ಕೆಟ್ಟ ಆರ್ಥಿಕ ನೀತಿಯ ಕಾರಣದಿಂದಾಗಿ ಪ್ರತಿದಿನ 80 ಕೋಟಿ ರೂಪಾಯಿ ಸಾಲ ಪಡೆದುಕೊಂಡು ಪಂಜಾಬ್‌ನಲ್ಲಿ ಆಪ್‌ ಸರ್ಕಾರ ನಡೆಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಹೇಳಿದ್ದಾರೆ.  ಪಂಜಾಬ್‌ ಸರ್ಕಾರದ ವಿರುದ್ಧ  ಭಟಿಂಡಾದ ಮೆಹ್ರಾಜ್‌ ಹಳ್ಳಿಯಲ್ಲಿ ವಾಗ್ದಾಳಿ ನಡೆಸಿದ ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನಾವು ಎಂದಿಗೂ ಸ್ಥಾನಮಾನಕ್ಕಾಗಿ ಹೊಡೆದಾಟ ಮಾಡಿಕೊಂಡಿಲ್ಲ. ನನ್ನ ಫೈಟ್‌ ಏನಿದ್ದರೂ ಪಂಜಾಬ್‌ಅನ್ನು ರಕ್ಷಿಸುವ ವಿಚಾರಕ್ಕಾಗಿ ಮಾತ್ರ ಎಂದು ಹೇಳಿದ್ದಾರೆ. ಮಾಜಿ ಪಿಪಿಸಿಸಿ ಮುಖ್ಯಸ್ಥರಾಗಿರುವ ನವಜೋತ್‌ ಸಿಂಗ್‌ ಸಿಧು, ತಾವು ಕಾಂಗ್ರೆಸ್‌ನಲ್ಲಿ ಬಿರುಕು ಸೃಷ್ಟಿಸುತ್ತಿಲ್ಲ. ಪಂಜಾಬ್‌ಅನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ. ಕಾಂಗ್ರೆಸ್ ವಿರುದ್ಧ ಯಾವುದೇ ಹೇಳಿಕೆ ನೀಡಿದರೆ ಹೈಕಮಾಂಡ್ ಕ್ರಮ ಕೈಗೊಳ್ಳಲಿ ಎಂದು ಸಿಧು ತಿಳಿಸಿದ್ದಾರೆ. ಸಿದ್ದು ಕಾಂಗ್ರೆಸ್‌ಗೆ ಜನರನ್ನು ಒಗ್ಗೂಡಿಸುತ್ತಿದ್ದಾರೆ ಎಂಬುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ  ಬಂದಿದ್ದ ಜನರೇ ಸಾಕ್ಷಿ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ ಸಿಧು, ಇಡಿ ತನಿಖೆಯಿಂದ ಏಕೆ ಓಡಿಹೋಗುತ್ತಿದ್ದಾರೆ ಎಂದು ಎಎಪಿ ನಾಯಕ ಉತ್ತರಿಸಬೇಕು ಎಂದು ಹೇಳಿದರು. ತಾವು ಯಾವಾಗಲೂ ಪಂಜಾಬ್‌ಅನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ ಸಿಧು, ಪಂಜಾಬ್‌ ರಾಜ್ಯ ಸುಧಾರಣೆಗಾಗಿ ನಿರಂತರವಾಗಿ ಶ್ರಮಿಸಿದ್ದೇವೆ ಎಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

Tap to resize

Latest Videos

ಶರಣಾದ ಸಿಧು ಪಟಿಯಾಲ ಸೆಂಟ್ರಲ್ ಜೈಲಿಗೆ, ಒಂದೇ ಜೈಲಿನಲ್ಲಿ ಇಬ್ಬರು ಬದ್ಧ ವೈರಿಗಳು!

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ದೇಶಗಳಿಗೆ ವಲಸೆ ಹೋಗುತ್ತಿರುವ ಬಗ್ಗೆ ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು ಎಂದರು. ಯುವಕರು ತಮ್ಮೊಂದಿಗೆ ಪಂಜಾಬ್‌ನಿಂದ ಕೋಟ್ಯಂತರ ರೂಪಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದಿದ್ದಾರೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಡೆಸುತ್ತಿರುವ ‘ಪಂಜಾಬ್ ಬಚಾವೋ ಯಾತ್ರೆ’ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಧು, ಎಸ್‌ಎಡಿ ತನ್ನ ಆತ್ಮವನ್ನು ಉಳಿಸಿಕೊಳ್ಳಬೇಕು ಮತ್ತು ನಂತರ ಅದು ಪಂಜಾಬ್ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.

 

Punjab Elections: ನಾನು ಸೂರ್ಯ ಕತ್ತಲನ್ನು ಸೀಳಿ ಉದಯಿಸುತ್ತೇನೆ, ಚನ್ನಿಗೆ ಸಿಧು ಟಾಂಗ್!

click me!