ಮುಂದಿನ ತಿಂಗಳಿಂದ ದೇಶವ್ಯಾಪಿ ಮತಪಟ್ಟಿ ಪರಿಷ್ಕರಣೆ ಆರಂಭ?

Kannadaprabha News   | Kannada Prabha
Published : Sep 11, 2025, 04:24 AM IST
bihar election 2025 voter list update 65 lakh names removed check online

ಸಾರಾಂಶ

ಬಿಹಾರದಲ್ಲಿ ಜೂನ್‌ನಲ್ಲಿ ಶುರುವಾಗಿ ಭಾರಿ ವಿವಾದದ ಅಲೆ ಸೃಷ್ಟಿ ಮಾಡಿದ್ದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ (ಎಸ್ಐಆರ್), ಅಕ್ಟೋಬರ್‌ನಿಂದ ದೇಶವ್ಯಾಪಿಯಾಗಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗದ ಮೂಲಗಳು ಮಾಹಿತಿ ನೀಡಿವೆ.

ನವದೆಹಲಿ: ಬಿಹಾರದಲ್ಲಿ ಜೂನ್‌ನಲ್ಲಿ ಶುರುವಾಗಿ ಭಾರಿ ವಿವಾದದ ಅಲೆ ಸೃಷ್ಟಿ ಮಾಡಿದ್ದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ (ಎಸ್ಐಆರ್), ಅಕ್ಟೋಬರ್‌ನಿಂದ ದೇಶವ್ಯಾಪಿಯಾಗಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗದ ಮೂಲಗಳು ಮಾಹಿತಿ ನೀಡಿವೆ.

ಈ ಸಂಬಂಧ ಬುಧವಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳ ಸಭೆ ನಡೆದಿದ್ದು, ಅದರಲ್ಲಿ ದೇಶವ್ಯಾಪಿ ಮತಪಟ್ಟಿ ಪರಿಷ್ಕರಣೆಯ ತಯಾರಿಯ ಬಗ್ಗೆ ಚರ್ಚಿಸಲಾಗಿದೆ.

 ಪರಿಶೀಲನೆಗೆ ಪರಿಗಣಿಸಬಹುದಾದ ದಾಖಲೆಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಚುನಾವಣಾ ಆಯೋಗವು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದೆ. ಸೆಪ್ಟೆಂಬರ್‌ ಅಂತ್ಯದೊಳಗೆ ಆರಂಭಿಕ ಕೆಲಸಗಳೆಲ್ಲಾ ಮುಗಿದು, ಅಕ್ಟೋಬರ್‌ನಲ್ಲಿ ಪ್ರಕ್ರಿಯೆ ಆರಂಭಿಸಬಹುದು ಎಂದು ಬಹುತೇಕ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಮೃತಪಟ್ಟವರು, ಸ್ಥಳಾಂತರ ಗೊಂಡವರು, ನಕಲಿ ದಾಖಲೆ ಹೊಂದಿರುವವರು, ಭಾರತದ ನಿವಾಸಿಗಳು ಅಲ್ಲದವರು ಸೇರಿದಂತೆ ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಅದರ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ.

ಹಲವು ವಿರೋಧ, ಗೊಂದಲಗಳ ನಡುವೆಯೂ ಬಿಹಾರದಲ್ಲಿ ಈ ಪ್ರಕ್ರಿಯೆ ಯಶಸ್ಸು ಕಾಣುತ್ತಿದೆ. ವಿಪಕ್ಷಗಳು, ಈ ಪ್ರಕ್ರಿಯೆ ವಿರೋಧಿಸಿದ್ದು, ವಿಪಕ್ಷಗಳ ಪರ ಮತದಾರರನ್ನು ತೆಗೆದು ಹಾಕುವ ದುರುದ್ಧೇಶ ಇದೆ ಎಂದು ಆರೋಪಿಸುತ್ತಿವೆ. ಸುಪ್ರೀಂ ಕೋರ್ಟಲ್ಲಿ ಈ ಕುರಿತು ವಿಚಾರಣೆ ಕೂಡ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ