ದೇಶದ ಜನತೆಗೆ ಸಂತಸದ ಸುದ್ದಿ ಕೊಟ್ಟ ಮೋದಿ ಸರ್ಕಾರ..!

By Kannadaprabha News  |  First Published Sep 12, 2024, 6:28 AM IST

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. Ayushman Bharat Yojana ಇದರೊಂದಿಗೆ ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಯೊಂದನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರೈಸಿದಂತೆ ಆಗಿದೆ. 


ನವದೆಹಲಿ(ಸೆ.12): ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಎಂಬ ಹಿರಿಮೆ ಹೊಂದಿರುವ ಆಯುಷ್ಮಾನ್‌ ಪ್ಲಾನ್‌ ಭಾರತ್ ವಿಮಾ ಯೋಜನೆಯನ್ನು 70 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲಾ ವಯೋಮಿತಿ ಯವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಯೋಮಿತಿಯ ಎಲ್ಲಾ ನಾಗರಿಕರಿಗೂ ಇನು ಮುಂದೆ 5 ಲಕ್ಷ ರು.ವರೆಗಿನ ಆರೋಗ್ಯ ವಿಮೆ ಸಿಗಲಿದೆ. 

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. Ayushman Bharat Yojana ಇದರೊಂದಿಗೆ ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಯೊಂದನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರೈಸಿದಂತೆ ಆಗಿದೆ. ಜೊತೆಗೆ 4.5 ಕೋಟಿ ಕುಟುಂಬಗಳ 5 ಕೋಟಿ ಹಿರಿಯನಾಗರಿಕರಿಗೆ ದೊಡ್ಡ ಆರ್ಥಿಕ ಹೊರೆಯನ್ನು ನಿವಾರಿಸುವ ಬಹುದೊಡ್ಡ ಕೊಡುಗೆಯನ್ನು ಸರ್ಕಾರ ನೀಡಿದಂತಾಗಿದೆ. 

Tap to resize

Latest Videos

ಹಿರಿಯರ ಸಮುದಾಯಕ್ಕೆ ಭರ್ಜರಿ ಕೊಡುಗೆ: 

ಹಾಲಿ ಜಾರಿಯಲ್ಲಿದ್ದ ಆಯು ಪ್ಲಾನ್ ಭಾರತ್ ವಿಮಾ ಯೋಜನೆ 16-59ರ ವಯೋಮಿತಿವರೆಗೆ ಮಾತ್ರ (ಕೆಲವೆಡೆ ವಯೋಮಿತಿ ವಿನಾಯ್ತಿ ಇದೆ) ಸೀಮಿತವಾಗಿತ್ತು. ಬಡವರಿಗೆ ಮಾತ್ರ ಲಭ್ಯವಿತ್ತು. ಜೊತೆಗೆ ಇಡೀ ಕುಟುಂಬಕ್ಕೆ ಸೇರಿ ವಾರ್ಷಿಕ ಲಕ್ಷರು, ವಿಮೆ ನೀಡಲಾಗುತಿತ್ತು. ಆದರೆ ಇದೀಗ ಯೋಜನೆಯನ್ನು 10 ವರ್ಷದ ತುಂಬಿದ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಗಿದೆ. ಜೊತೆಗೆ ಇದಕ್ಕೆ ಫಲಾನುಭವಿಗಳಿಗೆ ಯಾವುದೇ ಆದಾಯ ಮಿತಿಯನ್ನು ನಿಗದಿಮಾಡಿಲ್ಲ. ಹೀಗಾಗಿ ದೇಶದ 4.5 ಕೋಟಿ ಕುಟುಂಬಗಳ6 ಕೋಟಿ ಜನರು ವಾರ್ಷಿ ಲಕ್ಷ ರು. ಆರೋಗ್ಯ ವಿಮೆ ಯೋಜನೆಯ ಲಾಭ ಪಡೆಯಬಹುದಾಗಿದೆ. ಈ ಯೋಜನೆ ಫಲಾನುಭವಿಗಳಿಗೆ ವಿಶೇಷ ಕಾರ್ಡ್ ನೀಡಲಾಗುವುದು. ಮೊದಲ ವರ್ಷ ಈ ಯೋಜನೆಗಾಗಿ 3437ಕೋಟರು.ವಿನಿಯೋಗಿಸಲಾ ಗುವುದು ಎಂದು ಸಂಪುಟ ಸಭೆಯ ಬಳಿಕ ಸಚಿವ ಅಶ್ವಿನ್ ವೈಷ್ಣವ್ ಮಾಹಿತಿ ನೀಡಿದರು.

ಹಿರಿಯರಿಗೆ ಲಾಭ ಹೇಗೆ? 

* ಹಾಲಿ ಆಯುಷ್ಮಾನ್ ಭಾರತ್ ವಿಮಾ ಯೋಜನೆಗೆ ಒಳಪಟ್ಟವರು ಕೂಡಾ ಈ ಯೋಜನೆ ಲಾಭ ಪಡೆಯಬಹುದು. 
*  ಹೀಗೆ ಲಾಭ ಪಡೆದವರಿಗೆ ಹೊಸ ಯೋಜನೆಯ 5 ಲಕ್ಷದ ವಿಮೆಯ ಜತೆಗೆ ಹಳೆಯ ವಿಮೆಯ 5 ಲಕ್ಷದ ಲಾಭವೂ ಲಭ್ಯ 
* ಒಂದು ಕುಟುಂಬದಲ್ಲಿ 70 ವರ್ಷ ಮೇಲ್ಪಟ್ಟ ಇಬ್ಬರು ಸದಸ್ಯರು ಇದ್ದರೆ, ಅವರು 5 ಲಕ್ಷರು. 
* ಇತರೆ ಸರ್ಕಾರಿ ವಿಮೆ ಯೋಜನೆ ವ್ಯಾಪ್ತಿಗೆ ಒಳಪಟ್ಟವರು ಅದನ್ನು ಉಳಿಸಿಕೊಳ್ಳಬಹುದು/ ಹೊಸತು ನಡೆಯಬಹುದು
*  ಖಾಸಗಿ ವಿಮಾ ಸೌಲಭ್ಯ ಪಡೆದುಕೊಂಡವರು ಕೂಡಾ ಈ ಹೊಸ ಯೋಜನೆಯಲ್ಲಿ ಭಾಗಿಯಾಗಬಹುದು

click me!