Nagpur violence: ಇಂದು ಶುಕ್ರವಾರದ ಪ್ರಾರ್ಥನೆ, ಗಲಭೆ ಸಾಧ್ಯತೆ ಹಿನ್ನೆಲೆ ನಾಗ್ಪುರದ ಮಸೀದಿಯ ಹೊರಗೆ ಪೊಲೀಸ್ ಬಿಗಿ ಭದ್ರತೆ!

Nagpur violence: ನಂತರ ಪರಿಸ್ಥಿತಿ ತಿಳಿಯಾಗಿದ್ದು, ಕರ್ಫ್ಯೂ ಸಡಿಲಿಸಲಾಗಿದೆ. ರಂಜಾನ್ ಪ್ರಾರ್ಥನೆ ಹಿನ್ನೆಲೆ ಭದ್ರತೆ ಬಿಗಿಗೊಳಿಸಲಾಗಿದೆ. ಗಲಭೆಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

Nagpur violence Friday prayers today, police tighten security outside Nagpur mosque rav

Nagpur violence: ಸೋಮವಾರ (ಮಾರ್ಚ್ 17) ನಾಗ್ಪುರದಲ್ಲಿ ನಡೆದ ಹಿಂಸಾಚಾರದ ನಂತರ ನಗರದ ಪರಿಸ್ಥಿತಿ ಈಗ ಸ್ವಲ್ಪಮಟ್ಟಿಗೆ ತಿಳಿಯಾಗಿರುವ ಹಿನ್ನೆಲೆ ನಿನ್ನೆ ಗುರುವಾರ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ಸಡಿಲಗೊಳಿಸಲಾಗಿದೆ.  ಆದಾಗ್ಯೂ, ಇಂದು ಶುಕ್ರವಾರ (ಮಾರ್ಚ್ 21) ನಡೆಯಲಿರುವ ರಂಜಾನ್‌ನ ಶುಕ್ರವಾರದ ಪ್ರಾರ್ಥನೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಂಭಾವ್ಯ ಘರ್ಷಣೆಯನ್ನ ತಪ್ಪಿಸಲು ನಗರದಲ್ಲಿ ಈಗ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ವಾಸ್ತವವಾಗಿ, ಪವಿತ್ರ ರಂಜಾನ್ ಮಾಸದ ಮೂರನೇ ಶುಕ್ರವಾರದ ಪ್ರಾರ್ಥನೆಯನ್ನು ಶುಕ್ರವಾರದಂದು ಮಾಡಬೇಕು. ಈ ಬಗ್ಗೆ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ನಗರದ ಎಲ್ಲಾ ಮಸೀದಿಗಳ ಹೊರಗೆ ಕಟ್ಟುನಿಟ್ಟಿನ ಪೊಲೀಸ್ ಪಹರೆ ಹಾಕಲಾಗಿದೆ. ಯಾವುದೇ ಗಲಭೆ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ.

Latest Videos

ಇದನ್ನೂ ಓದಿ: ನಾಗ್ಪುರ ಹಿಂಸಾಚಾರ ಪೂರ್ವಯೋಜಿತ: ಸಿಎಂ ಫಡ್ನವೀಸ್‌

 ಗಲಭೆ: 100ಕ್ಕೂ ಹೆಚ್ಚು ಜನರ ಬಂದನ:

ಗಲಭೆಯಲ್ಲಿ ಭಾಗಿಯಾದ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 12 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, ಅದರಲ್ಲಿ ನಾಲ್ವರ ಮೇಲೆ ಸೈಬರ್ ಪೊಲೀಸರು ಮತ್ತು 8 ಜನರ ವಿರುದ್ಧ ಸ್ಥಳೀಯ ನಾಗ್ಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 100 ಜನರನ್ನು ಬಂಧಿಸಲಾಗಿದೆ.

ಗಲಭೆ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ಭೇಟಿ:

ಗಲಭೆ ತಣ್ಣಗಾಗಿರುವ ನಡುವೆ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಗುರುವಾರ (ಮಾರ್ಚ್ 20) ನಾಗ್ಪುರದ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಪಕ್ಷದ ನಾಯಕರ ಸಮಿತಿಯನ್ನು ರಚಿಸಿದರು. ಸಪ್ಕಲ್ ರಚಿಸಿದ ಸಮಿತಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಗೋವಾ ಉಸ್ತುವಾರಿ ಮಾಣಿಕ್ರಾವ್ ಠಾಕ್ರೆ ಮತ್ತು ಹಿರಿಯ ನಾಯಕರಾದ ನಿತಿನ್ ರಾವತ್, ಯಶೋಮತಿ ಠಾಕೂರ್, ಹುಸೇನ್ ದಲ್ವಾಯಿ ಮತ್ತು ಸಾಜಿದ್ ಪಠಾಣ್ ಸೇರಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಈ ಸಮಿತಿಯ ಸಂಚಾಲಕರಾಗಿ ನಾಗ್ಪುರ ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥ ಮತ್ತು ಶಾಸಕ ವಿಕಾಸ್ ಠಾಕ್ರೆ ಅವರನ್ನು ನೇಮಿಸಲಾಗಿದ್ದು, ಎಐಸಿಸಿ ಕಾರ್ಯದರ್ಶಿ ಪ್ರಫುಲ್ ಪಾಟೀಲ್ ಅವರನ್ನು ಸಂಯೋಜಕರನ್ನಾಗಿ ಮಾಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಖಂಡ ಭಾರತ ಧ್ಯೇಯವನ್ನು ಉಳಿಸುವಲ್ಲಿ ಆರ್‌ಎಸ್ಎಸ್‌ ಕೊಡುಗೆ ಶ್ಲಾಘಿಸಿದ ಶಂಕರ್‌ ಮಹದೇವನ್‌!

ಘಟನೆ ಹಿನ್ನೆಲೆ: ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ಛತ್ರಪತಿ ಸಂಭಾಜಿ ನಗರ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೇತೃತ್ವದ ಪ್ರತಿಭಟನೆಯ ಸಂದರ್ಭದಲ್ಲಿ ಆಯತಾಕಾರದ ಚಾದರ್ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳು ಹರಡಿದ ನಂತರ, ಗಲಭೆ ನಡೆಯಿತು. ಅನ್ಯಕೋಮಿನ ಗುಂಪುಗಳು ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ (17) ಸಂಜೆ ವಿದರ್ಭ ಪ್ರದೇಶದ ಅತಿದೊಡ್ಡ ನಗರವಾದ ನಾಗ್ಪುರದ ಹಲವಾರು ಭಾಗಗಳಿಂದ ದೊಡ್ಡ ಪ್ರಮಾಣದ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಘಟನೆಗಳು ನಡೆದ ಬಗ್ಗೆ ವರದಿಯಾಗಿವೆ.

vuukle one pixel image
click me!