Mysterious foreigner: ಒಂದೇ ಕುಟುಂಬದಲ್ಲಿ ಇಬ್ಬರು ಸೊಸೆಯರ ನಡುವೆ ಬಿರುಕು! ಸೋನಿಯಾ ಆತ್ಮಕಥೆ ಬೆನ್ನಲ್ಲೇ ಕಂಗನಾ ಹೊಸ ವಿವಾದ!

Published : Nov 11, 2026, 01:18 PM ISTUpdated : Nov 11, 2026, 01:35 PM IST
Kangana Ranaut attack Sonia Gandh

ಸಾರಾಂಶ

ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆಯಾದ ಬೆನ್ನಲ್ಲೇ ಕಂಗನಾ ರಣಾವತ್ ಸರಣಿ ಪೋಸ್ಟ್ ಮಾಡಿದ್ದಾರೆ. ಇಂದಿರಾ, ರಾಜೀವ್, ಸಂಜಯ್ ಗಾಂಧಿ ಸಾವುಗಳ ಬಗ್ಗೆ ಕಂಗನಾ ಎತ್ತಿರುವ ಪ್ರಶ್ನೆಗಳು ವಿವಾದ ಸೃಷ್ಟಿಸಿವೆ.

ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿಯಾಗಿರುವ ಸೋನಿಯಾ ಗಾಂಧಿ(Sonia Gandhi) ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'(Belonging: A Journey of Love) ಬಿಡುಗಡೆಯಾದ ಬೆನ್ನಲ್ಲೇ ಇದೀಗ ಇಡೀ ದೇಶದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸೋನಿಯಾ ಆತ್ಮಕಥೆ ಬೆನ್ನಲ್ಲೇ ಕಂಗನಾ ಹೊಸ ವಿವಾದ

ಸೋನಿಯಾ ಗಾಂಧಿಯವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಬಿಡುಗಡೆಯಾಗಿರುವ ಬೆನ್ನಲ್ಲೇ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ನಿಗೂಢ ಸಾವಿನ ಸುತ್ತಲಿನ ಸಂದರ್ಭಗಳನ್ನ ಉಲ್ಲೇಖಿಸಿ ಕಂಗನಾ ರಣಾವತ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಸರಣಿ ಪೋಸ್ಟ್‌ಗಳು ಹೊಸ ವಿವಾದವೆಬ್ಬಿಸಿವೆ. ಅಷ್ಟೇ ಅಲ್ಲದೆ ಮೇನಕಾ ಗಾಂಧಿ ಮತ್ತು ಅವರ ಅತ್ತೆ-ಮಾವನ ನಡುವಿನ ಸಮಸ್ಯೆಗಳು, ತೊಂದರೆಗೊಳಗಾದ ಬಗ್ಗೆ ರಣಾವತ್ ಹಂಚಿಕೊಂಡಿದ್ದಾರೆ.

ಕಂಗನಾ ರಣಾವತ್ ಈ ಹಿಂದೆ ತಮ್ಮ 'ಎಮರ್ಜೆನ್ಸಿ' ಚಿತ್ರದಲ್ಲಿ ತುರ್ತು ಪರಿಸ್ಥಿತಿ ಚಿತ್ರೀಕರಣ ಸಂದರ್ಭದಲ್ಲಿ ನಾನು ಗಾಂಧಿ ಕುಟುಂಬದ ರಾಜಕಾರಣ, ಭಾರತದ ರಾಜಕಾರಣ, ತುರ್ತು ಪರಿಸ್ಥಿತಿ ದಿನಗಳ ಬಗ್ಗೆ ಆಳವಾಗಿ ಸಂಶೋಧನೆ ನಡೆಸಿದ್ದೇನೆ ಎಂದು ಕಂಗನಾ ಹೇಳಿಕೊಂಡಿದ್ದಾರೆ. ಪ್ರಸ್ತುತ ವಿಶ್ವದಾದ್ಯಂತ ಸಂಚಲನ ಮೂಡಿಸಿರುವ NVIDIA ಹನಿ-ಟ್ರ್ಯಾಪ್ ವಿವಾದವನ್ನು ಉಲ್ಲೇಖಿಸಿರುವ ಕಂಗನಾ ರಣಾವತ್, ಗಾಂಧಿ ಕುಟುಂಬಕ್ಕೆ ಈ ನಿಗೂಢ ವಿದೇಶಿ ಪ್ರಜೆ ಭಾರತದೊಳಗೆ ಪ್ರವೇಶ ಪಡೆದ ಬಗ್ಗೆಯೂ ಹೋಲಿಕೆ ಮಾಡಿದ್ದಾರೆ. ಅಂದರೆ ಸೋನಿಯಾ ಗಾಂಧಿ ಭಾರತೀಯರಲ್ಲ, ವಿದೇಶಿ ಪ್ರಜೆಯಾಗಿದ್ದು. ಹಿಂದೆ ಅದೇ ರೀತಿ ಹನಿಟ್ರ್ಯಾಪ್ ಮಾಡಿ ರಾಜೀವ್ ಗಾಂಧಿಯನ್ನ ಮದುವೆಯಾಗಿ ಭಾರತಕ್ಕೆ ಬಂದಿರಬಹುದೇ, ಗಾಂಧಿ ಕುಟುಂಬದಲ್ಲಾದ ರಾಜೀವ್, ಸಂಜಯ್, ಇಂದಿರಾ ಗಾಂಧಿ ಸಾವುಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ ಸೋನಿಯಾ ಗಾಂಧಿಯವರ ರಾಜಕೀಯ ಪ್ರಾಮುಖ್ಯತೆಯ ಸುತ್ತ ಹಲವು ಹೋಲಿಕೆಗಳನ್ನು ಮಾಡಿದ್ದಾರೆ.

ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಂತೆ, 'ಎಲ್ಲರೂ NVIDIA ಹನಿ ಟ್ರ್ಯಾಪ್ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈ ಬಗ್ಗೆ ಯಾರಿಗೂ ಅನುಮಾನ ಬರುತ್ತಿಲ್ಲವೇಕೆ? ಇಂದಿರಾ ಗಾಂಧಿ ಕಾಲದಲ್ಲಾದ ತುರ್ತು ಪರಿಸ್ಥಿತಿ ಬಗ್ಗೆ ಚಿತ್ರ ಮಾಡುವಾಗ ನಾನು ಭಾರತೀಯ ರಾಜಕೀಯ ಮತ್ತು ಗಾಂಧಿ ಕುಟುಂಬದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಆದರೆ ನನಗೆ ಇದುವರೆಗೂ ಅರ್ಥವಾಗದ ವಿಷಯವೆಂದರೆ ಒಬ್ಬ ನಿಗೂಢ ವಿದೇಶಿ ಪ್ರಜೆ(ಸೋನಿಯಾ ಗಾಂಧಿ) ಗಾಂಧಿ ಕುಟುಂಬಕ್ಕೆ ಪ್ರವೇಶಿಸುತ್ತಿದ್ದಂತೆ ಇಂದಿರಾ ಗಾಂಧಿ ಕೊಲ್ಲಲ್ಪಟ್ಟರು, ಸಂಜಯ್ ಗಾಂಧಿ ರಾಜೀವ್ ಗಾಂಧಿ ಭಾರತದ ಆಡಳಿತ ಚುಕ್ಕಾಣಿ ಹಿಡಿದ, ಹಿಡಿಯಬೇಕಿದ್ದ ಎಲ್ಲಾ ಸಂಭಾವ್ಯ ಉತ್ತರಾಧಿಕಾರಿಗಳು ನಿಗೂಢವಾಗಿ ಕೊಲ್ಲಲ್ಪಟ್ಟರು. ಈ ಸಾವುಗಳ ಬಗ್ಗೆ ಯಾರಿಗೂ ಅನುಮಾನ ಬರಲಿಲ್ಲ, ಬದಲಿಗೆ ವಿದೇಶಿ ಪ್ರಜೆ, ಗಾಂಧಿ ಕುಟುಂಬದ ಸೊಸೆ ಎಂದು ಸಹಾನುಭೂತಿ ಗಿಟ್ಟಿಸಿಕೊಂಡರು. ಆದರೆ ಆ ವಿದೇಶಿಯೊಬ್ಬಳು ಭಯೋತ್ಪಾದಕರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಳು. ಆದರೂ ಅವರು 2014 ರವರೆಗೆ ದಶಕಗಳ ಕಾಲ ಸರ್ಕಾರವನ್ನು ಮುನ್ನಡೆಸುವಲ್ಲಿ ಹೇಗೆ ಯಶಸ್ವಿಯಾದರೆಂಬುದು ನನಗೂ ಇಂದಿಗೂ ಕಾಡುವ ಪ್ರಶ್ನೆ ಎಂದಿದ್ದಾರೆ.

ನಟಿ ಕಂಗನಾ ರಣಾವತ್ ತಮ್ಮ ಇನ್ನೊಂದು Instagram ಸ್ಟೋರಿಯಲ್ಲಿ ಸಂಜಯ್ ಗಾಂಧಿಯವರ ಪತ್ನಿ ವಿಧವೆ ಮೇನಕಾ ಗಾಂಧಿ ಮತ್ತು ಅವರು ಗಾಂಧಿ ಮನೆತನದಿಂದ ಹೊರಬಿದ್ದ ಬಗ್ಗೆಯೂ ಮಾತನಾಡಿದ್ದಾರೆ. ಮೇನಕಾ ಗಾಂಧಿ ಅವರನ್ನು ಸಂಜಯ್ ಗಾಂಧಿ ತುಂಬಾ ಪ್ರೀತಿಸಿ ಮದುವೆಯಾದರು. ಮದುವೆ ಬಳಿಕವೂ ಪ್ರೀತಿಯಿಂದ ಇದ್ದರು. ಆದರೆ ಮೇನಕಾ ಗಾಂಧಿ ತುಂಬಾ ಇನ್ನೊಸೆಂಟ್, ದುರ್ಬಲ ಮಹಿಳೆ. ಪತಿ ಸಂಜಯ್ ಗಾಂಧಿ ಮರಣದ ನಂತರ ತನ್ನ ಮಗನೊಂದಿಗೆ ಗಾಂಧಿ ಕುಟುಂಬದಿಂದ ಹೊರಹಾಕಲಾಯ್ತು! ಸಂಜಯ್ ಗಾಂಧಿ ಸಾವಿನ ನಂತರ ವಿಧವೆ ಹೆಣ್ಣುಮಗಳನ್ನು ಹೊರಗೆ ಹಾಕಿದ್ದು ಹೇಗೆ? ಹೇಗೆ ಸಾದ್ಯವಾಯ್ತು? ಯಾವ ಕಾರಣಕ್ಕೆ ಹೊರಹಾಕಲಾಯ್ತು? ಎಂದು ಪ್ರಶ್ನಿಸಿದ್ದಾರೆ.

ಸೋನಿಯಾ ಗಾಂಧಿಯವರ ಹೊಸ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಮೇನಕಾ ಅವರೊಂದಿಗಿನ ಕುಟುಂಬದ ಸಂಬಂಧ, ಕೆಲವು ಕಹಿ ಪರಿಣಾಮಗಳಿಗೆ ಕಾರಣವಾದ ಘಟನೆಗಳ ಬಗ್ಗೆಯೂ ಬಹಿರಂಗಪಡಿಸಿದ್ದಾರೆ.

ಸೋನಿಯಾ ತಮ್ಮ ಆತ್ಮಚರಿತ್ರೆಯಲ್ಲಿ ಮೇನಕಾ ಗಾಂಧಿ ಬಗ್ಗೆ ಏನು ಬರೆದಿದ್ದಾರೆ?

526 ಪುಟಗಳಿರುವ ಈ ಆತ್ಮಚರಿತ್ರೆಯಲ್ಲಿ ಸೋನಿಯಾ ಗಾಂಧಿ ಅವರು ಮೇನಕಾ ಗಾಂಧಿ ಬಗ್ಗೆಯೂ ಉಲ್ಲೇಕಿಸಿದ್ದಾರೆ. ಸಂಜಯ್ ಗಾಂಧಿ ಜೊತೆಗಿನ ಪ್ರೀತಿ, ಮದುವೆ, ಮನೆಗೆ ಆಗಮನ, ಕುಟುಂಬದೊಳಗೆ ಬೆಳೆಯುತ್ತಿದ್ದ ಭಿನ್ನಾಭಿಪ್ರಾಯಗಳು, ಇಂದಿರಾ ಗಾಂಧಿಯವರೊಂದಿಗಿನ ಸಂಬಂಧಗಳು ಸ್ಮರಿಸಿಕೊಂಡಿದ್ದಾರೆ. ಸೋನಿಯಾ ಅವರು ಹೇಳುವ ಪ್ರಕಾರ, 1973 ರ ಅಂತ್ಯದ ವೇಳೆಗೆ ಸಂಜಯ್ ಗಾಂಧಿ ಮೇನಕಾಗೆ ಪರಿಚಯಿಸಲಾಯಿತು. ಅವರು ಅವಳನ್ನು ಸುಂದರಿ, ಉತ್ಸಾಹಭರಿತ ಯುವತಿಯಾಗಿದ್ದಳು. ಸಂಜಯ್‌ಗಿಂತ ಹತ್ತು ವರ್ಷ ಚಿಕ್ಕವಳು. ಮೊದಲ ಸಲ ಸಂಜಯ್ ಭೇಟಿಯಾದಾಗ ಅವಳಿನ್ನೂ ಅಪ್ರಾಪ್ತಳಾಗಿದ್ದಳು ಎಂದು ವಿವರಿಸಿದ್ದಾರೆ. ಮುಂದೆ ಮೇನಕಾ 18 ವರ್ಷ ತುಂಬಿದಾಗ ಇಬ್ಬರೂ ಸೆಪ್ಟೆಂಬರ್ 1974 ರಲ್ಲಿ ವಿವಾಹವಾದರು ಎಂದು ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಗಲು ಬಿಟೆಕ್ ವಿದ್ಯಾರ್ಥಿ, ರಾತ್ರಿ ಸೆಕ್ಯೂರಿಟಿ ಗಾರ್ಡ್‌! 10 ಲಕ್ಷ ರೂ. ಸಾಲ ತೀರಿಸಲು ಈ ಹುಡುಗ ಪಡುತ್ತಿರುವ ಕಷ್ಟ ಎಂಥದ್ದು ಗೊತ್ತಾ?
ಅದಾನಿ ಗ್ರೂಪ್ ನಿಂದ ಬರೋಬ್ಬರಿ ₹10 ಲಕ್ಷ ಕೋಟಿಗೂ ಅಧಿಕ ಹೂಡಿಕೆ, ಇಂಧನ ಒಂದೇ ಕ್ಷೇತ್ರಕ್ಕೆ ಶೇ.70ರಷ್ಟು ಹಣ ಮೀಸಲು!