ರೂಪಾಂತರಿ ಕೊರೋನಾ, ಜನರ ನಿರ್ಲಕ್ಷ್ಯವೇ 2ನೇ ಅಲೆ ತೀವ್ರತೆಗೆ ಕಾರಣ!

Published : Apr 13, 2021, 11:03 AM ISTUpdated : Apr 13, 2021, 11:18 AM IST
ರೂಪಾಂತರಿ ಕೊರೋನಾ, ಜನರ ನಿರ್ಲಕ್ಷ್ಯವೇ 2ನೇ ಅಲೆ ತೀವ್ರತೆಗೆ ಕಾರಣ!

ಸಾರಾಂಶ

ರೂಪಾಂತರಿ ಕೊರೋನಾ, ಜನರ ನಿರ್ಲಕ್ಷ್ಯವೇ 2ನೇ ಅಲೆ ತೀವ್ರತೆಗೆ ಕಾರಣ| ಏಮ್ಸ್‌ ಮುಖ್ಯಸ್ಥ ಡಾ| ಗುಲೇರಿಯಾ ಅಭಿಪ್ರಾಯ| ಮೊದಲ ಅಲೆಯಲ್ಲಿ ಒಬ್ಬ ಸೋಂಕಿತನಿಂದ 30 ಜನರಿಗೆ ಸೋಂಕು| 2ನೇ ಅಲೆಯಲ್ಲಿ 30ಕ್ಕಿಂತ ಹೆಚ್ಚು ಜನರಿಗೆ ಸೋಂಕು| ವೈರಾಣು ರೂಪಾಂತರಗೊಂಡಿದ್ದೇ ಇದಕ್ಕೆ ಕಾರಣ

ನವದೆಹಲಿ(ಏ.13): ಕೊರೋನಾ ಮಾರ್ಗಸೂಚಿಗಳನ್ನು ಜನರು ಸರಿಯಾಗಿ ಪಾಲಿಸದೇ ಇರುವುದು ಹಾಗೂ ರೂಪಾಂತರಿ ಕೊರೋನಾ ವೈರಸ್‌ ಹಾವಳಿಯು, ಕೋವಿಡ್‌ 2ನೇ ಅಲೆ ಭೀಕರ ಸ್ವರೂಪದಲ್ಲಿ ಎದ್ದೇಳಲು ಕಾರಣವಾಗಿರಬಹುದು ಎಂದು ದಿಲ್ಲಿಯ ಪ್ರತಿಷ್ಠಿತ ಏಮ್ಸ್‌ ಆಸ್ಪತ್ರೆ ಮುಖ್ಯಸ್ಥ ಡಾ| ರಣದೀಪ್‌ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಮಾತನಾಡಿದ ಅವರು, ‘ಕೊರೋನಾ ಮೊದಲನೇ ಅಲೆ ಸಂದರ್ಭದಲ್ಲಿ ಒಬ್ಬ ಸೋಂಕಿತನಿಂದ 30 ಜನರಿಗೆ ಸೋಂಕು ಹರಡಬಹುದು ಎಂದು ಅಂದಾಜು ಮಾಡುತ್ತಿದ್ದೆವು. ಆದರೆ 2ನೇ ಅಲೆಯನ್ನು ಗಮನಿಸಿದರೆ ಒಬ್ಬ ಸೋಂಕಿತನಿಂದ 30ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡುತ್ತದೆ ಎನ್ನಿಸುತ್ತದೆ’ ಎಂದು ಹೇಳಿದರು.

ಫೆಬ್ರವರಿಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದಂತೆಯೇ ಜನರು, ‘ಕೊರೋನಾ ತನ್ನ ಶಕ್ತಿ ಕಳೆದುಕೊಂಡಿದೆ’ ಎಂದು ಭಾವಿಸಿದರು. ಹೋಟೆಲ್‌, ಮಾರುಕಟ್ಟೆ, ಮಳಿಗೆಗಳು ಎಲ್ಲೆಂದರಲ್ಲಿ ಜನರು ಅಲೆದಾಟ ಆರಂಭಿಸಿದರು. ಇವರೆಲ್ಲ ಇಂದು ವೈರಸ್‌ನ ಸೂಪರ್‌ ಸ್ಪ್ರೆಡರ್‌‌ಗಳು. ಬಹುಶಃ ಇಂದು ಸೋಂಕು ಹರಡುವಿಕೆ ತೀವ್ರಗೊಳ್ಳಲು ವೈರಾಣು ರೂಪಾಂತರಗೊಂಡಿರುವುದು ಕಾರಣ ಇರಬಹುದು’ ಎಂದು ವಿಶ್ಲೇಷಿಸಿದರು.

ಒಂದು ವೇಳೆ ಜನರು ಈಗಲಾದರೂ ಮಾರ್ಗಸೂಚಿ ಹಾಗೂ ಸುರಕ್ಷತಾ ಕ್ರಮ ಪಾಲನೆ ಮಾಡದೇ ಹೋದರೆ ಭಾರತದ ಆರೋಗ್ಯ ವ್ಯವಸ್ಥೆಗೇ ದೊಡ್ಡ ಕಪ್ಪುಚುಕ್ಕೆಯಾಗಲಿದೆ. ಹಾಗಾಗಿ ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮ ಅತ್ಯಂತ ಜರೂರಾಗಿದೆ ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?