
ಹೈದರಾಬಾದ್: ‘ಭಾರತದಲ್ಲಿ ಮುಸಲ್ಮಾನರು ಎಂದಿಗೂ ಹಿಂದೂಗಳ ಜನಸಂಖ್ಯೆ ಮೀರಿಸುವುದಿಲ್ಲ’ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಇಲ್ಲಿ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಒವೈಸಿ, ‘ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಕರ ಜನಸಂಖ್ಯೆ ಹೆಚ್ಚಿದೆ ಎಂದಿದ್ದಾರೆ.
ಹಾಗಿದ್ದರೆ ಅವರ ಉದ್ಯೋಗ ಸೃಷ್ಟಿಗೆ ಮೋದಿ ಏನು ಮಾಡಿದ್ದಾರೆ. ಅವರಿಗೆ ಯಾವ ಉದ್ಯೋಗ ಕೌಶಲ್ಯ ಕಲಿಸಿದ್ದಾರೆ. ಇನ್ನು 20 ವರ್ಷಗಳಲ್ಲಿ ಇವರಿಗೆಲ್ಲಾ ವಯಸ್ಸಾಗುತ್ತದೆ. ಆಗ ಹಣದುಬ್ಬರ ಹೆಚ್ಚುತ್ತದೆ. ಅವರೆಲ್ಲಾ ಎಷ್ಟು ವೆಚ್ಚ ಮಾಡಬೇಕಾಗಿ ಬರುತ್ತದೆ ಎಂಬುದರ ಬಗ್ಗೆ ಯಾರೂ ಚಿಂತಿಸಲ್ಲ. ಅದರ ಬದಲಾಗಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತದೆ ಎಂದು ದೂರುತ್ತಾರೆ. ಆಧರೆ ಮುಸ್ಲಿಮರ ಜನಸಂಖ್ಯೆ ಸ್ಥಿರವಾಗಿರುತ್ತದೆ.
ಎಂದಿಗೂ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಮೀರಿಸಲ್ಲ. ಮೊದಲೆಲ್ಲಾ ಜನಸಂಖ್ಯಾ ಏರಿಕೆ ನಿಯಂತ್ರಣ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿಗೆ ಇದೀಗ ಜನಸಂಖ್ಯೆ ಕೊರತೆಯ ಅಪಾಯದ ಅರವಾಗಿದೆ. ಕೇವಲ ವಯಸ್ಕರ ಸಂಖ್ಯೆ ದೇಶಕ್ಕೆ ಹೇಗೆ ಅಪಾಯಕಾರಿ ಆಗಬಲ್ಲದು ಎಂದು ಅವರಿಗೂ ಗೊತ್ತಾಗಿದೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ