ನವದೆಹಲಿ(ಜು.31): ದೇಶದ ಮುಸ್ಲಿಂ ಮಹಿಳೆಯರಿಗೆ ತೊಡಕಾಗಿದ್ದ ತ್ರಿವಳಿ ತಲಾಖ್ ಸಂಪ್ರದಾಯಕ್ಕೆ ಪೂರ್ಣ ವಿರಾಮ ಹಾಕಿ, ತ್ರಿವಳಿ ತಲಾಖ್ ವಿರೋಧಿ ಕಾನೂನು ಜಾರಿ ಮಾಡಿದ ಹೆಗ್ಗಳಿಕೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕಿದೆ. ಇದೀಗ ಈ ತಲಾಖ್ ವಿರೋಧಿ ಕಾನೂನಿಗೆ 2ನೇ ವರ್ಷದ ಸಂಭ್ರಮ. ಇದರ ಅಂಗವಾಗಿ ನಾಳೆ(ಆ.01) ದೇಶದಲ್ಲಿ ಮುಸ್ಲಿಂ ಮಹಿಳಾ ಹಕ್ಕು ದಿನ ಆಚರಿಸಲಾಗುತ್ತಿದೆ.
ಸಿಎಎ, NRCಯಿಂದ ಮುಸ್ಲಿಮರಿಗೆ ಸಮಸ್ಯೆ ಇಲ್ಲ: ಭಾಗವತ್ ಸ್ಪಷ್ಟನೆ
ಆಗಸ್ಟ್ 1, 2019ರಂದು ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರೋಧಿ ಕಾನೂನು ಜಾರಿಗೆ ತಂದಿತ್ತು. ಇದೀಗ ಈ ಕಾನೂನಿಗೆ 2 ವರ್ಷದ ಸಂಭ್ರಮ. ಹೀಗಾಗಿ ದೇಶದಲ್ಲಿ ಆಗಸ್ಟ್ 1 ರಂದು ಮುಸ್ಲಿಂ ಮಹಿಳಾ ಹಕ್ಕಗಳ ದಿನವಾಗಿ ಆಚರಿಸಲಾಗುತ್ತದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ತ್ರಿವಳಿ ತಲಾಖ್ ವಿರೋಧಿ ಕಾನೂನು ಜಾರಿಗೆ ಬಂದ ಬಳಿಕ ತಲಾಖ್ ಪ್ರಕರಣ ಇಳಿಕೆಯಾಗಿದೆ. ಈ ಕಾನೂನುನ್ನು ಮುಸ್ಲಿಂ ಸಮುದಾಯ ಪ್ರೀತಿಯಿಂದ ಸ್ವಾಗತಿಸಿದೆ ಎಂದು ನಖ್ವಿ ಹೇಳಿದ್ದಾರೆ.
ಧರ್ಮ ಬೇರೆಯಾದ್ರೂ ಭಾರತೀಯರ DNA ಒಂದೇ; ಮುಸ್ಲಿಂ ವೇದಿಕೆಯಲ್ಲಿ RSS ಮುಖ್ಯಸ್ಥರ ಖಡಕ್ ಮಾತು!
ತ್ರಿವಳಿ ತಲಾಖ್‌ನಿಂದ ದೇಶದ ಮುಸ್ಲಿಂ ಮಹಿಳೆಯರ ಸಂಕಷ್ಟ ಹೇಳತೀರದಾಗಿತ್ತು. ತಲಾಖ್ ಹೇಳಿ ಮತ್ತೊಮ್ಮ ಮಹಿಳೆಯನ್ನು ವಿವಾಹವಾಗುವ ಈ ಸಂಪ್ರದಾಯಕ್ಕೆ ಕೇಂದ್ರ ಸರ್ಕಾರ ಅಂತ್ಯ ಹಾಡೋ ಮೂಲಕ ಮುಸ್ಲಿಂ ಮಹಿಳೆಯರ ಭವಿಷ್ಯವನ್ನು ಮತ್ತಷ್ಟು ಭದ್ರಪಡಿಸಿದ್ದರು. ಕೇಂದ್ರದ ಈ ಕಾನೂನನ್ನು ಮುಸ್ಲಿಂ ಮಹಿಳೆಯರು ಸೇರಿದಂತೆ ಇಸ್ಲಾಂ ಸಮುದಾಯ ಸ್ವಾಗತಿಸಿತ್ತು.
ನಖ್ವಿ, ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದರ್ ಯಾದವ್ ಸೇರಿದಂತೆ ಕೆಲ ಕೇಂದ್ರ ಸಚಿವರು ನಾಳೆ ಆಯೋಜಿಸಿರುವ ಮುಸ್ಲಿಂ ಮಹಿಳಾ ಹಕ್ಕು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.