9 ವರ್ಷದ ಬಾಲಕನ ಹಾರುವ ಕನಸು ನನಸು ಮಾಡಿದ ರಾಹುಲ್ ಗಾಂಧಿ; ಎಲ್ಲರ ಮೆಚ್ಚುಗೆ!

By Suvarna NewsFirst Published Apr 6, 2021, 8:44 PM IST
Highlights

ಪುಟ್ಟ ಮಕ್ಕಳ ಕನಸಿಗೆ ನೀರೆರೆದರೆ ಅದ್ಬುತ ಸಷ್ಟಿಯಾಗಲಿದೆ. ಹೀಗೆ 9 ವರ್ಷದ ಬಾಲಕ ಕನಸೊಂದನ್ನು ನನಸು ಮಾಡುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗಿದ್ದಾರೆ. ರಾಹುಲ್ ಗಾಂಧಿ ನಡೆಗೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

ಕಣ್ಣೂರ್ (ಏ.6): ಬಾಲ್ಯದಲ್ಲಿ ಮಕ್ಕಳಿಗೆ ಹಲವಾರು ಮುಗ್ಧ ಕನಸುಗಳಿರುತ್ತವೆ. ಮಕ್ಕಳು ತಮ್ಮ ಸುತ್ತಮುತ್ತಲ್ಲಿರುವ ವಾತಾವರಣದಿಂದ ಪ್ರಭಾವಿತರಾಗುತ್ತಾರೆ. ಇದರ ಜೊತೆ ಪುಟಾಣಿಗಳ ದೊಡ್ಡ ಕನಸುಗಳುನ್ನು ಕಟ್ಟಿಕೊಂಡಿರುತ್ತಾರೆ. ಹೀಗೆ  ಪುಟ್ಟ ಬಾಲಕನೋರ್ವ ಕಟ್ಟಿಕೊಂಡಿದ್ದ ಅತೀ ದೊಡ್ಡ ಕನಸನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಡೇರಿಸಿದ್ದಾರೆ. 

"

ಕೇರಳ ವಿಧಾನಸಭೆ ಚುನಾವಣ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಕಣ್ಣೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.  ಕಾಂಗ್ರೇಸ್ ಮೈತ್ರಿಯ ಯೂನೈಟೆಡ್ ಡೆಮೊಕ್ರೆಟಿಕ್ ಫ್ರಂಟ್ ಪರ ಪ್ರಚಾರದ ಬಳಿಕ ಅಚಾನಕ್ಕಾಗಿ ಈ 9 ವರ್ಷದ ಅದ್ವೈತ್ ಸುಮೇಶ್ ಅನ್ನೋ 9 ವರ್ಷ ಬಾಲಕ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದಾನೆ. ಇದೇ ನೋಡಿ ಈ ಬಾಲಕನ ಜೀವನದ ಮಹತ್ವದ ಟರ್ನಿಂಗ್ ಪಾಯಿಂಟ್.

ನೀವು ಪ್ರಧಾನಿಯಾಗಿದ್ದರೆ ಏನು ಮಾಡ್ತಿದ್ರಿ? ಹೀಗಿತ್ತು ರಾಹುಲ್ ಗಾಂಧಿ ಉತ್ತರ! 

ಟೀ ಅಂಗಡಿಯೊಂದರಲ್ಲಿ ರಾಹುಲ್ ಗಾಂಧಿ ತಿಂಡಿ ತಿನ್ನುತಿದ್ದಾಗ ಅದ್ವೈತ್ ಸುಮೇಶ್ ಎಂಬ ಹುಡುಗನೊಬ್ಬ ಪದೇ ಪದೇ ಇಣುಕಿ ನೋಡುತ್ತಿದ್ದ. ರಾಹುಲ್ ಅವನನ್ನು ಕರೆಸಿ ಮಾತನಾಡಿಸಿದ್ದಾರೆ.  ಜೀವನದಲ್ಲಿ ಏನು ಆಗ್ಬೇಕು  ಎಂದು ಕೇಳಿದಾಗ, ಹುಡುಗ ʼನಾನು ಹಾರಲು ಬಯಸುತ್ತೇನೆ, ವಿಮಾನದ ಪೈಲೆಟ್ ಆಗುವುದು ನನ್ನ ಕನಸುʼ ಎಂದಿದ್ದಾನೆ. ಹುಡುಗನ ಮಾತು, ಆತ್ಮವಿಶ್ವಾಸ ನೋಡಿದ ರಾಹುಲ್ ಗಾಂಧಿ ಪುಳಕಿತರಾಗಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Rahul Gandhi (@rahulgandhi)

ಬಾಲಕನ ಆಸೆ ಈಡೇರಿಸಲು ರಾಹುಲ್ ಗಾಂಧಿ ನಿರ್ಧಿರಿಸಿದ್ದಾರೆ. ಬಳಿಕ ಬಾಲಕನ ಪೋಷಕರನ್ನು ವಿಮಾನ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ ಮಾಡಿದ್ದಾರೆ.  ಖುದ್ದು ರಾಹುಲ್ ಗಾಂಧಿ ಬಾಲಕನನ್ನು ವಿಮಾನದ ಒಳಗೆ ಕರೆದುಕೊಂಡು ಹೋಗಿದ್ದಾರೆ. ವಿಮಾನ ನೋಡಿ ಅಚ್ಚರಿಗೊಂಡ ಬಾಲಕ ವಿಮಾನ ಆಗಸದಲ್ಲಿ ಹಾರಾಡುವುದು ಹೇಗೆ?  ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಇತ್ತ ರಾಹುಲ್ ಗಾಂದಿ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರ ನೀಡಿದ್ದಾರೆ. 

ರಾಹುಲ್ ಗಾಂಧಿ ತಮ್ಮ ಇನ್ಸ್ಟಾಗ್ರಾಮ್ ಕ್ಯಾಪ್ಶನ್ನಲ್ಲಿ ʼಯಾವುದೇ ಕನಸು ದೊಡ್ಡದಲ್ಲ, ಬಾಲಕನ ಕನಸುಗಳನ್ನು ನನಸು ಮಾಡುವಲ್ಲಿ ನಾವು ಮೊದಲ ಹೆಜ್ಜೆ ತೆಗೆದುಕೊಂಡಿದ್ದೇವೆ. ಈಗ ಹುಡುಗನ ಪೈಲೆಟ್ ಆಗುವ ಕನಸು ನನಸಾಗುವಂತಹ ಸಮಾಜವನ್ನು ಸೃಷ್ಟಿ ಮಾಡುವುದು ನಮ್ಮ ಕರ್ತವ್ಯವಾಗಿದೆ. ಎಂದು ಬರೆದುಕೊಂಡಿದ್ದಾರೆ.  ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಸುಮಾರು 1.5 ಲಕ್ಷ ಜನ ವೀಕ್ಷೀಸಿದ್ದು ರಾಹುಲ್ ಗಾಂಧಿಯವರ ವಿನಯತೆ ಮತ್ತು ಸಮಾಧಾನದಿಂದ ಹುಡುಗನ್ನು ಮಾತನಾಡಿಸಿದ ಪರಿಯನ್ನು ನೆಟ್ಟಿಗರು ಮೆಚ್ಚಿದ್ದಾರೆ.

ಕೇರಳದಲ್ಲಿ ಚುನಾವಣಾ ಬಿಸಿ ಜೋರಾಗಿದ್ದು ರಾಜಕೀಯ ಪಕ್ಷಗಳ ಭರ್ಜರಿ ಪ್ರಚಾರ ನಡೆಸಿವೆ. ಕೇರಳ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಇಂದು(ಏಪ್ರಿಲ್ 6) ಚುನಾವಣೆ ನಡೆದಿದೆ. ಮೇ 2 ರಂದು ಮತ ಏಣಿಕೆ ಕಾರ್ಯ ನಡೆಯಲಿ, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕೇರಳದಲ್ಲಿ ಒಟ್ಟು 144 ವಿಧಾನಸಭೆ ಕ್ಷೇತ್ರಗಳಿವೆ. ಇಂದು ನಡೆದ ಚುನಾವಣೆಯಲ್ಲಿ 5.30 ರವರೆಗೆ ಶೇ 78 ರಷ್ಟು ಮತದಾನವಾಗಿದೆ.

click me!